ಕೋಲಾರ: ಹಳೇ ದ್ವೇಷದ ಹಿನ್ನೆಲೆ ಗ್ರಾಮ ಪಂಚಾಯತ್ ಸದಸ್ಯ ಹಸುವಿನ ಶೆಡ್ ನೆಲಸಮ ಮಾಡಿರುವ ಘಟನೆ ಕೋಲಾರದಲ್ಲಿ (Kolar) ನಡೆದಿದೆ.
ಕೋಲಾರ ಜಿಲ್ಲೆ ಮಾಲೂರು (Malur) ತಾಲೂಕು ಗೊಲ್ಲಪೇಟೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಶೆಡ್ ನೆಲಸಮದಿಂದ ಶೆಡ್‌ನಲ್ಲಿದ್ದ ಹಸು ಗಂಭೀರವಾಗಿ ಗಾಯಗೊಂಡಿದೆ. ಗ್ರಾಮದ ಅಮೀರ್ ಜಾನ್ ಎಂಬವರಿಗೆ ಸೇರಿದ ಹಸು ಹಾಗೂ ಶೆಡ್ ಇದಾಗಿದ್ದು, ಸಂಬಂಧಿ ಹಾಗೂ ಗ್ರಾಮ ಪಂಚಾಯತಿ ಸದಸ್ಯ ಮುಬಾರಕ್ ಅವರು ಈ ಕೃತ್ಯವೆಸಗಿದ್ದಾರೆ. ವಿನಾಕಾರಣ ಮುಬಾರಕ್ ಅವರು ತೊಂದರೆ ನೀಡುತ್ತಿದ್ದಾರೆಂದು ಆರೋಪಿಸಲಾಗಿದೆ. ಇದನ್ನೂ ಓದಿ: ಮಹಾ ಕುಂಭಮೇಳದಲ್ಲಿ ಅಗ್ನಿ ಅವಘಡ – 18 ಟೆಂಟ್‌ಗಳು ಭಸ್ಮ, ಪರಿಸ್ಥಿತಿ ಅವಲೋಕಿಸಿದ ಮೋದಿ
ಕಳೆದ ಹಲವು ದಿನಗಳಿಂದ ಎರಡು ಕುಟುಂಬಗಳ ನಡುವೆ ಜಮೀನು ವಿವಾದ ನಡೆಯುತ್ತಿದೆ. ಶನಿವಾರ ತಡರಾತ್ರಿ ಹಸುವಿನ ಶೆಡ್ ನೆಲಸಮ ಮಾಡಿದ್ದು, ಇದರಿಂದ ಶೆಡ್‌ನಲ್ಲಿದ್ದ ಸುಮಾರು ಒಂದೂವರೆ ಲಕ್ಷ ರೂ. ಬೆಲೆ ಬಾಳುವ ಹಸುವಿಗೆ ಗಾಯವಾಗಿದೆ. ಈ ಬಗ್ಗೆ ಮಾಸ್ತಿ ಪೊಲೀಸ್ ಠಾಣೆಯಲ್ಲಿ ದೂರು ಹಾಗೂ ಪ್ರತಿದೂರು ದಾಖಲಾಗಿದೆ. ಇದನ್ನೂ ಓದಿ: ಕುಮಾರಸ್ವಾಮಿ ರಾಜ್ಯದ ಹಿತ ನೋಡಿ ಮಾತನಾಡಲಿ – ಸಚಿವ ಎಂ.ಬಿ ಪಾಟೀಲ್