– ಕಮಿಷನ್ ಕೊಡದೇ ಇದ್ದಿದ್ದಕ್ಕೆ ಬಿಲ್ ಮಾಡಿಲ್ಲ ಅಂತ ಆರೋಪ
ಬೀದರ್: ಕಾಮಗಾರಿ ಬಿಲ್ ಮಂಜೂರಾಗದೇ ಇದ್ದಿದ್ದಕ್ಕೆ ಗ್ರಾಮ ಪಂಚಾಯಿತಿ ಸದಸ್ಯೆ ಪೆಟ್ರೋಲ್ ಕ್ಯಾನ್ ಹಿಡಿದು ಹೈಡ್ರಾಮಾ ಸೃಷ್ಟಿಸಿದ ಘಟನೆ ಬೀದರ್ (Bidar) ಜಿಲ್ಲೆಯ ಹುಲಸೂರು (Hulsoor) ಪಟ್ಟಣದ ತಾಪಂ ಕಚೇರಿಯಲ್ಲಿ ನಡೆದಿದೆ.
ದನದ ಕೊಟ್ಟಿಗೆ, ಸೇರಿದಂತೆ ರೈತರ ಕಾಮಗಾರಿಗಳಿಗೆ ಬಿಲ್ ಮಂಜೂರು ಆಗದೇ ಇದ್ದಿದ್ದಕ್ಕೆ ಹುಲಸೂರು ಗ್ರಾಮ ಪಂಚಾಯಿತಿ ಸದಸ್ಯೆ ಯಾಸ್ಮಿನ್ ಎಂಬುವವರ ಅಸಮಧಾನ ಹೊರ ಹಾಕಿದ್ದಾರೆ. ಪೆಟ್ರೋಲ್ ಕ್ಯಾನ್ ಜೊತೆ ತಾಲೂಕು ಪಂಚಾಯಿತಿ ಕಚೇರಿಗೆ ಬಂದು ಗ್ರಾಪಂ ಸದಸ್ಯೆ ರೈತರ ಕಾಮಗಾರಿ ಬಿಲ್ ಆಗದೇ ಇದ್ರೆ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಳ್ತೇನೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ರು. ಇದನ್ನೂ ಓದಿ: ನಾಯಿಗಳಂತೆ ಅತ್ಯಾಚಾರಿಗಳನ್ನೂ ಸಂತಾನಹರಣಗೊಳಿಸಬೇಕು: ರಾಜಸ್ಥಾನ ರಾಜ್ಯಪಾಲ
ತಾಪಂ ಕಚೇರಿಗೆ ಪೆಟ್ರೋಲ್ ಸಮೇತ ತೆರಳಿ ತಾಪಂ ಇಓ ಕಚೇರಿಯಲ್ಲೇ ನಾನು ಆತ್ಮಹತ್ಯೆ ಮಾಡಿಕೊಳ್ತೇನೆ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ರು. ಕಮಿಷನ್ ನೀಡದೇ ಇದ್ದಿದ್ದಕ್ಕೆ ಟಾರ್ಗೆಟ್ ಮಾಡಿ ಬಿಲ್ ಮಾಡಿಲ್ಲ, ರೈತರು ತಮ್ಮ ಜಮೀನು, ಮನೆಗಳಲ್ಲಿ ನಿರ್ಮಿಸಿದ ಕಾಮಗಾರಿಗೆ ಬಿಲ್ ಮಾಡಿಲ್ಲ ಎಂದು ಅಸಮಧಾನ ಹೊರ ಹಾಕಿದ್ರು. ಇದನ್ನೂ ಓದಿ: ಬೈಕಲ್ಲಿ ಬಂದು ನೀರು ಕೇಳಿದ್ರು, ಬಳಿಕ ವಿಷದ ಇಂಜೆಕ್ಷನ್ ಚುಚ್ಚಿ ಸಾಯಿಸಿದ್ರು – ಯುಪಿಯಲ್ಲಿ ಬಿಜೆಪಿ ಮುಖಂಡನ ಹತ್ಯೆ!
ಶೀಘ್ರದಲ್ಲೇ ರೈತರ ಬಿಲ್ ಮಂಜೂರಾಗದೇ ಇದ್ರೆ ಪೆಟ್ರೋಲ್ ಸುರಿದುಕೊಂಡು ಇಲ್ಲೇ ಸಾಯ್ತೀನಿ ಎಂದು ಸದಸ್ಯೆ ಹೈಡ್ರಾಮ ಮಾಡಿದ್ರು.