ಚಿತ್ರದುರ್ಗ: ಲೈಂಗಿಕ ದೌರ್ಜನ್ಯ ಹಾಗೂ ಜಾತಿನಿಂದನೆ ದೂರಿನ ಅಡಿ ಸಿರಿಗೆರೆ (Sirigere) ಗ್ರಾಮ ಪಂಚಾಯತಿ ಸದಸ್ಯನನ್ನು ಪೊಲೀಸರು ಬಂಧಿಸಿದ್ದಾರೆ.
ಚಿತ್ರದುರ್ಗ (Chitradurga) ತಾಲೂಕಿನ ಸಿರಿಗೆರೆ ಗ್ರಾಮ ಪಂಚಾಯತಿ ಸದಸ್ಯ ದೇವರಾಜ್ ಬಂಧಿತ ಆರೋಪಿ. ಇದನ್ನೂ ಓದಿ: ಶಮಿ ಮಗಳ ಹೋಳಿ ಆಚರಣೆ ಸರಿಯಲ್ಲ – ಇದು ಷರಿಯಾ ವಿರುದ್ಧ ಎಂದ ಜಮಾತ್ ಅಧ್ಯಕ್ಷ
ಆರೋಪಿ ದೇವರಾಜ್, ಜಾತಿನಿಂದನೆ ಮಾಡುತ್ತಿದ್ದರು. ಅಲ್ಲದೇ ಗ್ರಾ.ಪಂ ಅಧ್ಯಕ್ಷೆ ಹಾಗೂ ಪಿಡಿಓಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂದು ಪಂಚಾಯತಿಯ ಕ್ಲರ್ಕ್ ಜಯರಾಮ್ ಎಂಬುವವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದನ್ನೂ ಓದಿ: ಬೀದರ್‌ನಲ್ಲಿ ಏಕಾಏಕಿ ಕಾಗೆಗಳ ಸರಣಿ ಸಾವು – ಹಕ್ಕಿ ಜ್ವರದ ಆತಂಕ?
ಜಯರಾಮ್ ಅವರು ನೀಡಿದ ದೂರಿನಾಧಾರ ಆರೋಪಿ ದೇವರಾಜ್‌ರನ್ನು ಭರಮಸಾಗರ ಪೊಲೀಸರು ಬಂಧಿಸಿದ್ದಾರೆ. ಭರಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.