– ಕೊಲೆಯಾದ ವ್ಯಕ್ತಿಯ ಮುಖ ತಿಂದು ಹಾಕಿರುವ ಪ್ರಾಣಿಗಳು
ಚಿಕ್ಕಬಳ್ಳಾಪುರ: ಗ್ರಾಮ ಪಂಚಾಯತಿ (Gram Panchayat) ಮಾಜಿ ಅಧ್ಯಕ್ಷನ ಮಗನನ್ನ ಕೊಲೆ ಮಾಡಿ ಚರಂಡಿಯಲ್ಲಿ ಮುಚ್ಚಿ ಹಾಕಿ ಕೊಲೆಗಾರ ಎಸ್ಕೇಪ್ ಆಗಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ತಾಲೂಕಿನ ಮರಸನಹಳ್ಳಿ ಕೆರೆ ಬಳಿ ಇರುವ ಬಡಾವಣೆಯಲ್ಲಿ ನಡೆದಿದೆ.
ಹಾರೋಬಂಡೆ ಗ್ರಾಮದ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ನಾಗರೆಡ್ಡಿ ಮಗ 30 ವರ್ಷದ ಮಾರುತೇಶ್ ಕೊಲೆಯಾಗಿರುವ ದುರ್ದೈವಿ. ಅಂದಹಾಗೆ ಪಾಳುಬಿದ್ದ ಬಡಾವಣೆಯೊಂದರ ಚರಂಡಿಯಲ್ಲಿ ಮೃತದೇಹ ಪತ್ತೆಯಾಗಿದೆ. ಕೊಲೆಯಾದ ಮಾರುತೇಶ್ ಪ್ಲಂಬರ್ ಹಾಗೂ ಎಲೆಕ್ಟ್ರಿಕ್ ಕೆಲಸ ಮಾಡುತ್ತಿದ್ದ. ಕುಡಿದ ಅಮಲಿನಲ್ಲಿ ಜೊತೆಗಾರನಿಂದಲೇ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ.
ಘಟನಾ ಸ್ಥಳದಲ್ಲಿ ಬೈಕ್ ಹಾಗೂ ಮದ್ಯದ ಬಾಟಲಿಗಳು ಪತ್ತೆಯಾಗಿವೆ. ಮೂರು ದಿನಗಳಿಂದ ನಾಪತ್ತೆಯಾಗಿದ್ದ ಮಾರುತೇಶ್ ಇಂದು ಶವವಾಗಿ ಪತ್ತೆಯಾಗಿದ್ದಾನೆ. ಸ್ಥಳಕ್ಕೆ ಚಿಕ್ಕಬಳ್ಳಾಪುರ ಎಸ್ಪಿ ಕುಶಾಲ್ ಚೌಕ್ಸಿ ಭೇಟಿ ಪರಿಶೀಲನೆ ನಡೆಸಿದರು. ಇದನ್ನೂ ಓದಿ: ಸೋನಿಯಾ ಗಾಂಧಿ ಹೇಳಿಕೆಯಿಂದ ರಾಷ್ಟ್ರಪತಿ ಹುದ್ದೆಯ ಘನತೆಗೆ ಘಾಸಿ – ರಾಷ್ಟ್ರಪತಿ ಭವನ ಪ್ರತಿಕ್ರಿಯೆ
ಇನ್ನೂ ಶಂಕಿತ ಆರೋಪಿಯೊರ್ವ ಗ್ರಾಮದಲ್ಲಿ ಕೊಲೆ ಮಾಡಿರುವ ಬಗ್ಗೆ ಅಸ್ಪಷ್ಟವಾಗಿ ಮಾತನಾಡಿದ್ದ ಎನ್ನಲಾಗಿದ್ದು ಇದರ ಸುಳಿ ಮೇರೆಗೆ ಪರಿಶೀಲನೆ ಮಾಡಿದಾಗ ಮೃತದೇಹ ಇರೋದು ಪತ್ತೆಯಾಗಿದೆ. ಹೀಗಾಗಿ ಪೊಲೀಸರು ಶಂಕಿತ ಆರೋಪಿಯ ಬೆನ್ನುಬಿದ್ದಿದ್ದಾರೆ, ಆತನ ಬಂಧನದ ಬಳಿಕ ಕೊಲೆಗೆ ಆಸಲಿ ಕಾರಣ ತಿಳಿದುಬರಲಿದೆ. ಇದನ್ನೂ ಓದಿ: ದೆಹಲಿ ಚುನಾವಣೆ ಹೊತ್ತಲ್ಲೇ ಎಎಪಿಗೆ ಶಾಕ್ – ಟಿಕೆಟ್ ಸಿಗದಿದ್ದಕ್ಕೆ ಸಿಟ್ಟಿಗೆದ್ದು ಐವರು ಶಾಸಕರು ರಾಜೀನಾಮೆ