ಕೋಲಾರ: ಗುತ್ತಿಗೆ ವಿಚಾರದಲ್ಲಿ ಗಲಾಟೆಯಾದ ಕಾರಣಕ್ಕೆ ತಲ್ವಾರ್ ಹಿಡಿದು ಯುವಕನೊಬ್ಬ ಗ್ರಾಮದಲ್ಲಿ ಓಡಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಸಕ್ಕನಹಳ್ಳಿ ಗ್ರಾಮದಲ್ಲಿ ಬುಧವಾರ ಈ ಘಟನೆ ನಡೆದಿದ್ದು, ಗ್ರಾಮ ಪಂಚಾಯ್ತಿ ಸದಸ್ಯನೊಬ್ಬನ ತಮ್ಮ ತಲ್ವಾರ್ ಹಿಡಿದು ಗ್ರಾಮಸ್ಥರಿಗೆ ಬೆದರಿಕೆ ಹಾಕಿದ್ದಾನೆ. ಸಕ್ಕನಹಳ್ಳಿ ಗ್ರಾಮದ ಸಂತೋಷ್ ರೆಡ್ಡಿ ಲಾಂಗ್ ಹಿಡಿದು ಓಡಾಡಿ ಕೊಲೆ ಬೆದರಿಕೆ ಹಾಕಿದ್ದಾನೆ.
ಸಂತೋಷ್ ರೆಡ್ಡಿ, ಕುಪೇಂದ್ರ ಎಂಬವರೊಂದಿಗೆ ಕಾಮಗಾರಿ ಟೆಂಡರ್ ವಿಚಾರವಾಗಿ ಜಗಳವಾಡಿ ಗಲಾಟೆ ಮಾಡಿಕೊಂಡಿದ್ದಾನೆ. ಲಾಂಗ್ ಹಿಡಿದು ಗ್ರಾಮದ ರಸ್ತೆಯಲ್ಲಿ ಓಡಾಡಿ ಬೆದರಿಕೆ ಹಾಕಿರುವ ವಿಡಿಯೋ ರೆಕಾರ್ಡ್ ಮಾಡಿರುವ ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ.
ಬಂಗಾರಪೇಟೆಯ ಮಾಗೊಂದಿ ಪಂಚಾಯ್ತಿ ಸದಸ್ಯ ಸೋಮಶೇಖರ ರೆಡ್ಡಿ ಅವರ ಸಹೋದರ ಸಂತೋಷ್ ರೆಡ್ಡಿ ತಲ್ವಾರ್ ಹಿಡಿದು ಗ್ರಾಮದಲ್ಲಿ ಓಡಾಡಿದ್ದು, ಬಂಗಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.