ಜೋಹಾನ್ಸ್ ಬರ್ಗ್: ಕ್ರಿಕೆಟ್ ದಕ್ಷಿಣ ಆಫ್ರಿಕಾ (ಸಿಎಸ್‍ಎ) ಮಂಡಳಿಯ ಪೂರ್ಣಕಾಲಿಕ ನಿರ್ದೇಶಕರಾಗಿ ಮಾಜಿ ನಾಯಕ ಗ್ರೇಮ್ಸ್ ಸ್ಮಿತ್ ಶುಕ್ರವಾರ ನೇಮಕಗೊಂಡಿದ್ದಾರೆ.
ಕಳೆದ ವರ್ಷ ಡಿಸೆಂಬರ್ ನಿಂದ ತಾತ್ಕಾಲಿಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ 39 ವರ್ಷದ ಸ್ಮಿತ್ ಮುಂದಿನ 2 ವರ್ಷಗಳ ಅವಧಿಗೆ ಕಾರ್ಯನಿರ್ವಹಿಸಲಿದ್ದಾರೆ. ಈ ವಿಚಾರವನ್ನು ಸಿಎಸ್‍ಎ ತಾತ್ಕಾಲಿಕ ಮುಖ್ಯ ಕಾರ್ಯನಿರ್ವಾಹಕ ಜಾಕ್ವೆಸ್ ಪಾಲ್ ತಿಳಿಸಿದ್ದಾರೆ.
Advertisement
Advertisement
ತಾತ್ಕಾಲಿಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಅವಧಿಯಲ್ಲಿ ಗ್ರೇಮ್ಸ್ ಸ್ಮಿತ್ ಕಠಿಣ ಶ್ರಮ, ಅನುಭವ ಆಧಾರದ ಮೇಲೆ ಕಾರ್ಯನಿರ್ವಹಿಸಿದ ಹಿನ್ನೆಲೆಯಲ್ಲಿ ಉತ್ತಮ ಫಲಿತಾಂಶಗಳನ್ನು ತಂದಿದ್ದರು. ಸ್ಮಿತ್ 2003-14ರ ನಡುವೆ ದಕ್ಷಿಣ ಆಫ್ರಿಕಾ ಪರ 117 ಟೆಸ್ಟ್, 197 ಏಕದಿನ ಹಾಗೂ 33 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅಲ್ಲದೇ 108 ಟೆಸ್ಟ್ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ.
Advertisement
ಇತ್ತ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿರುವ ಸ್ಮಿತ್ ತಂಡದ ಟೆಸ್ಟ್ ಕ್ಯಾಪ್ಟನ್ ಆಗಿದ್ದ ಡಿಕಾಕ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಿದ್ದಾರೆ. ಆಟಗಾರರ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ಸ್ಮಿತ್ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದ್ದು, ತಂಡಕ್ಕೆ ಹೊಸ ನಾಯಕನನ್ನು ನೇಮಕ ಮಾಡುವುದಾಗಿ ತಿಳಿಸಿದ್ದಾರೆ. ಇತ್ತ ಕ್ವಿಂಟನ್ ಡಿಕಾಕ್ ಏಕದಿನ ಮತ್ತು ಟಿ20 ತಂಡದ ನಾಯಕರಾಗಿ ಮುಂದುವರಿಯಲಿದ್ದಾರೆ.
Advertisement
@GraemeSmith49 will initially serve a two-year term as the new CSA Director of Cricket until the end of March 2022. Read more here: https://t.co/1AdAUw3TgX pic.twitter.com/yuSvHPsCZn
— Cricket South Africa (@OfficialCSA) April 17, 2020