ವೆಲ್ಲಿಂಗ್‍ಟನ್: ಟಿಂಡರ್ ಆ್ಯಪ್ ಮೂಲಕ ಪರಿಚಯಗೊಂಡ ಯುವತಿಯನ್ನು ಜೊತೆ ಸೆಕ್ಸ್ ನಡೆಸುತ್ತಿದ್ದಾಗ ಕೊಲೆ ಮಾಡಿದ ಆರೋಪ ಸಾಬೀತಾಗಿದ್ದು ನ್ಯೂಜಿಲೆಂಡ್ ಕೋರ್ಟ್ ಯುವಕನನ್ನು ದೋಷಿ ಎಂದಿದೆ.
2018ರ ನವೆಂಬರ್ 31ರಂದು ಟಿಂಡರ್ ಆ್ಯಪ್ ಮೂಲಕ ಯುವತಿ ಗ್ರೇಸ್ ಮಿಲೆನ್ಸ್ ನನ್ನು ಪರಿಚಯ ಮಾಡಿಕೊಂಡಿದ್ದ ಯುವಕ ಭೇಟಿಯಾಗುವಂತೆ ಪೀಡಿಸಿದ್ದಾನೆ. ಯುವಕನ ಮನವಿಗೆ ಒಪ್ಪಿದ ಯುವತಿ ತನ್ನ ಹುಟ್ಟು ಹಬ್ಬದ ಮುನ್ನಾದಿನವಾದ ಡಿಸೆಂಬರ್ 1ರಂದು ಗ್ರೇಸ್ ಮಿಲೆನ್ಸ್ ಮತ್ತು ಯುವಕ ರಾತ್ರಿ 9.45ಕ್ಕೆ ಕೆಫೆಯೊಂದರಲ್ಲಿ ಭೇಟಿಯಾಗುತ್ತಾರೆ.
Advertisement
Advertisement
ರಾತ್ರಿ ಇಬ್ಬರು ಯುವಕ ವಾಸವಿದ್ದ ಅಪಾರ್ಟ್‍ಮೆಂಟ್‍ಗೆ ಬರುತ್ತಾರೆ. ಮದ್ಯ ಸೇವಿಸುವ ಮುನ್ನ ತನ್ನ ಮೊಬೈಲಿನಲ್ಲಿ ಸೆಕ್ಸ್ ವಿಡಿಯೋಗಳನ್ನು ನೋಡಿ ಲೈಂಗಿಕ ಸಂಪರ್ಕಕ್ಕೆ ಮುಂದಾಗಿದ್ದಾನೆ. ಲೈಂಗಿಕ ಸಂಪರ್ಕದಲ್ಲಿದ್ದಾಗ ಯುವಕ ಆಕೆಯ ಕತ್ತು ಹಿಸುಕಿ ಕೊಲೆ ಮಾಡುತ್ತಾನೆ.
Advertisement
ಕೊಲೆಯ ಬಳಿಕ ಭಯಗೊಂಡ ಯುವಕ ಅಂಗಡಿಗೆ ಹೋಗಿ ದೊಡ್ಡ ಸೂಟ್‍ಕೇಸ್ ಮತ್ತು ಮನೆಯ ಸ್ವಚ್ಛಗೊಳಿಸುವ ವಸ್ತುಗಳನ್ನು ತಂದಿದ್ದಾನೆ. ಮಿಲೆನ್ಸ್ ನಗ್ನ ದೇಹವನ್ನು ಸೂಟ್‍ಕೇಸ್ ಗೆ ತುಂಬಿದ ಯುವಕ ಡಿಸೆಂಬರ್ ಮೂರರಂದು ನಿರ್ಜನ ಪ್ರದರ್ಶನದಲ್ಲಿ ಮಣ್ಣು ಮಾಡಿದ್ದಾನೆ. ನಂತರ ಅದೇ ಸಂಜೆ ಮತ್ತೊಬ್ಬ ಗೆಳತಿಯೊಂದಿಗೆ ಡೇಟ್ ಗೆ ಹೋಗಿದ್ದಾನೆ. ಮಗಳು ಕಾಣದಿದ್ದಾಗ ಡಿಸೆಂಬರ್ 5ರಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಾರೆ.
Advertisement
ದೂರು ದಾಖಲಿಸಿಕೊಂಡ ಪೋಷಕರು ಮಿಲೆನ್ಸ್ ಸೋದರನಿಂದ ಆಕೆಯ ಸೋಶಿಯಲ್ ಮೀಡಿಯಾ ಖಾತೆಗಳ ಪಾಸ್‍ವರ್ಡ್ ಪಡೆದುಕೊಂಡು ತನಿಖೆ ಆರಂಭಿಸಿದ್ದಾರೆ. ಮಿಲೆನ್ಸ್ ಕೊನೆಯ ಬಾರಿಗೆ ಫೇಸ್‍ಬುಕ್ ನಲ್ಲಿ ಚಾಟ್ ಮಾಡಿದ್ದ ಯುವಕನನ್ನು ಸಂಪರ್ಕಿಸಿದಾಗ ಆಕೆ ಮತ್ತೊಬ್ಬನ ಜೊತೆ ಕೆಫೆಯಲ್ಲಿ ನೋಡಿದ್ದಾಗಿ ತಿಳಿಸಿದ್ದಾನೆ.
ಸಿಸಿಟಿವಿ ನೀಡಿತ್ತು ಸುಳಿವು: ಡಿಸೆಂಬರ್ 1ರ ರಾತ್ರಿ ಕೆಫೆಯಲ್ಲಿ ಭೇಟಿಯಾದ ಇಬ್ಬರ ದೃಶ್ಯಗಳು ಸಿಸಿಟಿವಿಯ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಹೀಗೆ ಯುವಕನ ಪ್ರತಿಯೊಂದು ಚಲನವನಲಗಳು ಆಪಾರ್ಟ್ ಮೆಂಟಿನ ಪ್ರವೇಶ ದ್ವಾರ ಮತ್ತು ಲಿಫ್ಟ್ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಶವ ಸಾಗಿಸಿದ ಬಳಿಕ ಯುವಕ ತನ್ನ ಕಾರನ್ನು ಗ್ಯಾರೇಜ್ ನಲ್ಲಿ ಸ್ವಚ್ಛಗೊಳಿಸಿದ್ದನು. ಡಿಸೆಂಬರ್ 10ರಂದು ಯುವಕನನ್ನು ಪೊಲೀಸರು ಬಂಧಿಸಿದ್ದರು.
ಯುವಕ ಹೇಳಿದ್ದೇನು? ಅವಳನ್ನು ಕೊಲ್ಲುವ ಯಾವ ಉದ್ದೇಶವೂ ನನಗಿರಲಿಲ್ಲ. ಸೆಕ್ಸ್ ವೇಳೆ ಆಕೆ ತನ್ನ ಕತ್ತನ್ನು ಒತ್ತುವಂತೆ ಹೇಳಿದಳು. ನಾನು ಕತ್ತನ್ನು ಒತ್ತುತ್ತಿದ್ದಾಗ ಮಿಲೆನ್ಸ್ ಜ್ಞಾನ ತಪ್ಪಿದಳು. ಅದೊಂದು ಆಕಸ್ಮಿಕ ಸಾವು ಎಂದು ಯುವಕ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ.
ಸತತ ಒಂದು ವರ್ಷಗಳ ಕಾಲ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಯುವಕನ್ನು ದೋಷಿ ಎಂದು ಹೇಳಿದೆ. ನ್ಯಾಯಾಧೀಶರು ತೀರ್ಪು ಓದುತ್ತಿದ್ದಂತೆ ಯುವಕ ನಾನು ಕೊಲೆ ಮಾಡಿಲ್ಲ ಎಂದು ಜೋರು ಜೋರಾಗಿ ಹೇಳಿ ಕೋರ್ಟ್ ಆವರಣದಲ್ಲಿ ಕಣ್ಣೀರು ಹಾಕಿದ್ದಾನೆ. 2020ರ ಫೆಬ್ರವರಿ 21ರಂದು ಕೋರ್ಟ್ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ.
ಪ್ರಕರಣದಲ್ಲಿ ಯುವಕನ ಹೆಸರನ್ನು ಪೊಲೀಸರು ಮತ್ತು ನ್ಯಾಯಾಲಯ ಬಹಿರಂಗಪಡಿಸಿಲ್ಲ. ಯುವಕ ಮತ್ತು ಮಿಲೆನ್ಸ್ ಟಿಂಡರ್ ಆ್ಯಪ್ ನಲ್ಲಿದ್ದ ಚಾಟ್ ಫೋಟೋಗಳನ್ನು ಸ್ಥಳೀಯ ಮಾಧ್ಯಮಗಳು ಪ್ರಕಟಿಸಿವೆ.