ಚಿಕ್ಕೋಡಿ: ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದ ಹಿನ್ನೆಲೆಯಲ್ಲಿ ಮನೆಗೆ ಗೌರಿ ತರುವ ವಿಚಾರವಾಗಿ ಅಕ್ಕ ತಂಗಿಯ ಮಧ್ಯೆ ಗಲಾಟೆ ನಡೆದು ಅಕ್ಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯನಕನಮರಡಿ ಗ್ರಾಮದಲ್ಲಿ ನಡೆದಿದೆ.
ಮನೆಯಲ್ಲಿ ಗೌರಿ ಕೂರಿಸುವ ವಿಚಾರಕ್ಕೆ ಮನನೊಂದು ಮೃತಪಟ್ಟ ಬಾಲಕಿಯನ್ನು ರುಕ್ಮಿಣಿ ತೊಗರೆ ಎಂದು ಗುರುತಿಸಲಾಗಿದೆ. ಪ್ರತಿವರ್ಷ ಮನೆಗೆ ಗೌರಿಯನ್ನು ಅಕ್ಕ ರುಕ್ಮಿಣಿ ತರುತ್ತಾಳೆ. ಪ್ರತಿ ಬಾರಿ ಅಕ್ಕನೇ ಏಕೆ ಗೌರಿ ಮನೆಗೆ ತರಬೇಕು ಈ ಬಾರಿ ನಾನೂ ತರುತ್ತೇನೆ ಎಂದು ತಂಗಿ ಸರಿತಾಳ ನಡುವೆ ವಾಗ್ವಾದ ನಡೆದಿತ್ತು. ಇದನ್ನೂ ಓದಿ: ರಸ್ತೆ ಅಪಘಾತದಲ್ಲಿ ಟಾಟಾ ಸನ್ಸ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ದುರ್ಮರಣ
ಬಳಿಕ ಸರಿತಾ ಗೌರಿಯನ್ನು ಮನೆಗೆ ತಂದಿದ್ದಾಳೆ. ಇದನ್ನು ಕಂಡು ಮನನೊಂದು ರುಕ್ಮಿಣಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: BPL ಕಾರ್ಡ್ ಹೊಂದಿರುವ ಎಸ್‌ಸಿ, ಎಸ್‌ಟಿಗಳಿಗೆ ಗೃಹ ಬಳಕೆಗೆ 75 ಯುನಿಟ್ ಉಚಿತ ವಿದ್ಯುತ್ – ಆದೇಶ ಹಿಂಪಡೆದ ಸರ್ಕಾರ