ಮಂಗಳೂರು: ಗೋಶಾಲೆಗಳಿಗೆ ಆರ್ಥಿಕ ಸಹಾಯ ನೀಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸ್ಟೇಟ್ ಎನಿಮಲ್ ವೆಲ್ಪೆರ್ ಬೋರ್ಡ್‍ನ ಸದಸ್ಯ ವಿನಯ್ ಶೆಟ್ಟಿ ಪತ್ರ ಬರೆದು ಮನವಿ ಮಾಡಿದ್ದಾರೆ.
ಲಾಕ್‍ಡೌನ್‍ನಿಂದ ಗೋಶಾಲೆಗಳಿಗೆ ಬರುತ್ತಿದ್ದ ಸಾರ್ವಜನಿಕ ದೇಣಿಗೆ ಸಂಪೂರ್ಣ ನಿಂತು ಹೋಗಿದೆ. ಸರ್ಕಾರದ ಪರವಾಗಿ ಗೋವುಗಳನ್ನು ಸಾಕುತ್ತಿರುವ ಗೋಶಾಲೆಗಳಿಗೆ ಆರ್ಥಿಕ ಪರಿಹಾರ ನೀಡಬೇಕು ಎಂದು ವಿನಯ್ ಶೆಟ್ಟಿ ಕೇಳಿಕೊಂಡಿದ್ದಾರೆ.
Advertisement
Advertisement
ಅಕ್ರಮ ಗೋಸಾಗಾಟದ ಸಂದರ್ಭದಲ್ಲಿ ಪೊಲೀಸರು ವಶಪಡಿಸಿದ ಗೋವುಗಳನ್ನು ನ್ಯಾಯಲಯಗಳು ಸರ್ಕಾರದ ಪರವಾಗಿ ಸಾಕುವಂತೆ ಗೋಶಾಲೆಗಳಿಗೆ ಹಸ್ತಾಂತರಿಸಿದೆ. ಗೋಶಾಲೆಗಳಲ್ಲಿನ ಅಂತಹ ಗೋವುಗಳಿಗೆ ಸಂಪೂರ್ಣ ಜವಾಬ್ದಾರಿ ರಾಜ್ಯ ಸರ್ಕಾರದ್ದೆಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ. ಗೋ ಶಾಲೆಯಲ್ಲಿ 500-1,000ಕ್ಕೂ ಹೆಚ್ಚು ಗೋವುಗಳಿದ್ದರೂ ಸರ್ಕಾರ ಗರಿಷ್ಠ 200 ಗೋವುಗಳಿಗೆ ಮಾತ್ರ ದಿನಕ್ಕೆ ಜಾನುವಾರು ಒಂದಕ್ಕೆ ಕೇವಲ 17.50 ರೂ. ಅನುದಾನ ಮಾತ್ರ ಕೊಡುತ್ತಿದೆ. ಉಳಿದ ಹಣ ಸಾರ್ವಜನಿಕರಿಂದ ದೇಣಿಗೆ ಪಡೆದು ಸಾಕಬೇಕಿತ್ತು. ಆದರೆ ಲಾಕ್‍ಡೌನ್‍ನಿಂದ ದೇಣಿಗೆ ನಿಂತಿದೆ.
Advertisement
ಸರ್ಕಾರದ ಪರವಾಗಿ ಸಾಕುವ ಗೋವುಗಳಿಗೆ ಸಂಪೂರ್ಣ ಖಚ್ಚು ವೆಚ್ಚ ಸರ್ಕಾರವೇ ಭರಿಸಿ, ದೊಡ್ಡ ಜಾನುವಾರುಗಳಿಗೆ ದಿನವೊಂದಕ್ಕೆ ರೂ 300 ರೂ. ಹಾಗೂ ಕರುಗಳಿಗೆ 100 ರೂ.ರಂತೆ ನೀಡಬೇಕು. ಅಲ್ಲದೇ ರಾಜ್ಯದ ರೈತರ ಜಾನುವಾರುಗಳಿಗೆ ಮೇವು ಕೊರತೆ ಉಂಟಾಗಿದ್ದು, ಇವುಗಳಿಗೂ ತಕ್ಷಣ ಲಾಕ್‍ಡೌನ್ ವಿಶೇಷ ಅನುದಾನ ನೀಡಬೇಕು ಎಂದು ಸಿಎಂ ಯಡಿಯೂರಪ್ಪ ಅವರಿಗೆ ಸ್ಟೇಟ್ ಎನಿಮಲ್ ವೆಲ್ಪೆರ್ ಬೋರ್ಡ್‍ನ ಸದಸ್ಯ ವಿನಯ್ ಶೆಟ್ಟಿ ಪತ್ರದಲ್ಲಿ ಮನವಿ ಮಾಡಿದ್ದಾರೆ.