ನವದೆಹಲಿ: ಬಾಲಕೋಟ್ ದಾಳಿಯಲ್ಲಿ ಎಷ್ಟು ಜನ ಸತ್ತಿದ್ದಾರೆ ಎನ್ನುವ ವಿಚಾರವನ್ನು ಸರ್ಕಾರ ಬಹಿರಂಗ ಪಡಿಸುವುದಿಲ್ಲ ಎಂದು ರಕ್ಷಣಾ ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಖಾಸಗಿ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಷ್ಟು ಉಗ್ರರು ಮೃತಪಟ್ಟಿದ್ದಾರೆ ಎನ್ನುವ ಮಾಹಿತಿಯನ್ನು ಸರ್ಕಾರ ಬಹಿರಂಗ ಪಡಿಸುವುದಿಲ್ಲ. ಸರ್ಕಾರದ ಮೇಲೆ ನಂಬಿಕೆಯಿಡಿ. ನಮ್ಮ ಸೇನೆಯ ಮೇಲೆ ನಂಬಿಯಿಡಿ ಎಂದು ಖಡಕ್ ಆಗಿ ತಿಳಿಸಿದ್ದಾರೆ.
Advertisement
ದಾಳಿಯಲ್ಲಿ ಯಾವುದೇ ಹಾನಿಯಾಗಿಲ್ಲ ಮರಗಳು ಉರುಳಿವೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ. ಒಂದು ವೇಳೆ ದಾಳಿ ನಡೆಯದೇ ಇದ್ದರೆ ಪಾಕಿಸ್ತಾನ ಸರ್ಕಾರ ದೇಶದ ಒಳಗಿನ ಮಾಧ್ಯಮಗಳಿಗೆ ಮತ್ತು ಅಂತರಾಷ್ಟ್ರೀಯ ಮಾಧ್ಯಮಗಳು ಬಾಲಕೋಟ್ ಪ್ರವೇಶಕ್ಕೆ ನಿರ್ಬಂಧ ಹೇರಿದ್ದು ಯಾಕೆ? ಜವಾಬ್ದಾರಿ ಸರ್ಕಾರ ಈ ರೀತಿ ಮಾಡಿರುವುದು ಸರಿಯೇ ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ: ಬಾಲಕೋಟ್ ದಾಳಿಯಲ್ಲಿ 200ಕ್ಕೂ ಹೆಚ್ಚು ಉಗ್ರರ ಹತ್ಯೆ: ಪಾಕ್ ಸೇನಾಧಿಕಾರಿ
Advertisement
Advertisement
ಆತ್ಮಾಹುತಿ ಉಗ್ರರ ಹೊಸ ಬ್ಯಾಚ್ ಗೆ ಬಾಲಕೋಟ್ ನೆಲೆಯಲ್ಲಿ ತರಬೇತಿ ನಡೆಯುತ್ತಿದೆ ಎನ್ನುವ ಖಚಿತ ಮಾಹಿತಿ ನಮಗೆ ಸಿಕ್ಕಿತ್ತು. ಈ ಕಾರಣಕ್ಕಾಗಿಯೇ ನಾವು ಬಾಲಕೋಟ್ ಗುರಿಯಾಗಿಸಿ ದಾಳಿ ಮಾಡಿದ್ದೇವೆ ಎಂದು ಸಮರ್ಥನೆ ನೀಡಿದರು. ಇದನ್ನೂ ಓದಿ: ಪೆಟ್ರೋಲ್ ಸುರಿದು ಮೃತದೇಹ ಸುಟ್ಟರು – ಏರ್ ಸರ್ಜಿಕಲ್ ಸ್ಟ್ರೈಕ್‍ಗೆ ಸಿಕ್ತು ಆಡಿಯೋ ಸಾಕ್ಷ್ಯ!
Advertisement
ಈ ವೇಳೆ ಎಲ್ಲೆಲ್ಲಿ ಉಗ್ರರು ಕಾಣಸಿಗುತ್ತಾರೋ ಅವರ ಮೇಲೆ ಯಾವುದೇ ರೀತಿ ಕ್ರಮ ಕೈಗೊಳ್ಳಲು ನಮ್ಮ ಸರ್ಕಾರ ಸೈನಿಕರಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿದೆ ಎಂದು ತಿಳಿಸಿದರು.
ಈ ಹಿಂದೆ ಏರ್ ಚೀಫ್ ಮಾರ್ಷಲ್ ಅವರಲ್ಲಿ ಎಷ್ಟು ಮಂದಿ ಉಗ್ರರು ಸಾವನ್ನಪ್ಪಿದ್ದಾರೆ ಎಂದು ಕೇಳಿದ್ದಕ್ಕೆ, ಸತ್ತ ಉಗ್ರರ ತಲೆಯನ್ನು ಲೆಕ್ಕ ಹಾಕುವುದು ನಮ್ಮ ಕೆಲಸವಲ್ಲ. ಅದರ ಲೆಕ್ಕವನ್ನು ಸರ್ಕಾರ ನೀಡುತ್ತದೆ. ನಮಗೆ ಏನು ಗುರಿಯನ್ನು ನೀಡಲಾಗಿತ್ತೋ ಆ ಗುರಿಯನ್ನು ನಾವು ಯಶಸ್ವಿಯಾಗಿ ಮುಗಿಸಿದ್ದೇವೆ. ಎಲ್ಲಿ ಬಾಂಬ್ ಹಾಕಬೇಕಿತ್ತೋ ಆ ಸ್ಥಳಕ್ಕೆ ನಮ್ಮ ಸೈನಿಕರು ಬಾಂಬ್ ಹಾಕಿ ಯಶಸ್ವಿಯಾಗಿ ಮರಳಿ ಬಂದಿದ್ದಾರೆ ಎಂದು ಉತ್ತರಿಸಿದ್ದರು.
ಬಾಲಕೋಟ್ ಉಗ್ರರ ನೆಲೆಯ ಮೇಲೆ ದಾಳಿ ನಡೆಸುವುದಕ್ಕೂ ಮೊದಲು 300 ಮೊಬೈಲ್ ಗಳು ಅಲ್ಲಿ ಸಕ್ರಿಯವಾಗಿತ್ತು ಎಂದು ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆ(ಎನ್‍ಟಿಆರ್‍ಒ) ದೃಢಪಡಿಸಿತ್ತು. ಭಾರತದ ದಾಳಿ ಬಳಿಕ ಪೆಟ್ರೋಲ್ ಹಾಕಿ ಪಾಕ್ ಸೇನೆ ಉಗ್ರರ ಮೃತ ದೇಹಗಳನ್ನು ಸುಟ್ಟು ಹಾಕಿದೆ ಎಂದು ಮಾಧ್ಯಮವೊಂದು ವರದಿ ಮಾಡಿತ್ತು. ಇದನ್ನೂ ಓದಿ: 9 ದಿನಗಳಲ್ಲಿ 3ನೇ ಬಾರಿ ಪತ್ರಕರ್ತರಿಗೆ ನೋ ಎಂಟ್ರಿ: ಬಾಲಕೋಟ್ ಪ್ರದೇಶಕ್ಕೆ ಮಾಧ್ಯಮಗಳಿಗೆ ನಿಷೇಧ
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv