ನವದೆಹಲಿ: ಪಾಕಿಸ್ತಾನದ (Pakistan) ಎಲ್ಲಾ ಹಾಡು, ಸಿನಿಮಾ, ಪಾಡ್‌ಕಾಸ್ಟ್, ವೆಬ್ ಸೀರಿಸ್ ಹಾಗೂ ಸ್ಟ್ರೀಮಿಂಗ್ ಅನ್ನು ತಕ್ಷಣವೇ ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ (OTT Platform) ನಿಲ್ಲಿಸುವಂತೆ ಭಾರತ ಸರ್ಕಾರ ಆದೇಶಿಸಿದೆ.
ಪಹಲ್ಗಾಮ್ ದಾಳಿಗೆ ಭಾರತ ಆಪರೇಷನ್ ಸಿಂಧೂರ ಮೂಲಕ ಪ್ರತೀಕಾರ ತೀರಿಸಿಕೊಂಡಿದೆ. ಈ ಹಿನ್ನೆಲೆ ಪಾಕಿಸ್ತಾನ ಹಾಗೂ ಭಾರತದ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ಈ ಬೆನ್ನಲ್ಲೇ ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ ಪಾಕಿಸ್ತಾನದ ಎಲ್ಲಾ ಕಂಟೆಂಟ್‌ಗಳನ್ನು ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಸಾರ ಮಾಡದಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸೂಚನೆ ನೀಡಿದೆ. ಈ ಆದೇಶ ಚಂದಾದಾರಿಕೆ ಆಧಾರಿತ ಮತ್ತು ಉಚಿತ ಪ್ರವೇಶ ವೇದಿಕೆಗಳಲ್ಲಿ ಅನ್ವಯಿಸುತ್ತದೆ. ಇದನ್ನೂ ಓದಿ: ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ – ರಾಜನಾಥ್ ಸಿಂಗ್ ಮಹತ್ವದ ಸುಳಿವು
ಇದಕ್ಕೂ ಮುನ್ನ ಭಾರತೀಯ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಹಲವಾರು ಪಾಕಿಸ್ತಾನಿ ಸೆಲೆಬ್ರಿಟಿಗಳ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಿಗೆ ಪ್ರವೇಶವನ್ನು ನಿರ್ಬಂಧಿಸಿವೆ. ಪಾಕಿಸ್ತಾನದ ನಟರು, ಗಾಯಕರು ಹಾಗೂ ಸ್ಟಾರ್‌ಗಳ ಪ್ರೊಫೈಲ್‌ಗಳನ್ನು ಇನ್ಸ್ಟಾ, ಎಕ್ಸ್ ಹಾಗೂ ಯೂಟ್ಯೂಬ್ ಸೇರಿದಂತೆ ಅನೇಕ ಪ್ಲಾಟ್‌ಫಾರ್ಮ್‌ಗಳಲ್ಲಿ ನಿರ್ಬಂಧಿಸಲಾಗಿದೆ. ಇದನ್ನೂ ಓದಿ: ಭಾರತ ಡ್ರೋನ್ ದಾಳಿ – ನೂರಾರು ಕೋಟಿ ವೆಚ್ಚದಲ್ಲಿ ನವೀಕರಿಸಿದ್ದ ರಾವಲ್ಪಿಂಡಿ ಸ್ಟೇಡಿಯಂಗೆ ಭಾರಿ ಹಾನಿ