Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Latest

ಆನ್‌ಲೈನ್‌ ಗೇಮ್ಸ್‌ಗೆ 28% ಜಿಎಸ್‌ಟಿ – ಸ್ಟಾರ್ಟಪ್‌ ಮಾಲೀಕರ ರಾಜಕೀಯ ಪ್ರವೇಶಕ್ಕೆ ಸೂಕ್ತ ಕಾಲ ಎಂದ ಭಾರತ್‌ಪೇ ಸಂಸ್ಥಾಪಕ

Public TV
Last updated: July 12, 2023 11:52 am
Public TV
Share
3 Min Read
online games 1
SHARE

ನವದೆಹಲಿ: ಕುದುರೆ ರೇಸ್, ಆನ್‌ಲೈನ್‌ ಆಟ, ಕ್ಯಾಸಿನೋಗಳ ಮೇಲೆ ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಯ (GST) ಅಡಿಯಲ್ಲಿ 28% ರಷ್ಟು ತೆರಿಗೆ ವಿಧಿಸಲು ಜಿಎಸ್‌ಟಿ ಕೌನ್ಸಿಲ್‌ (GST Council) ಅನುಮೋದನೆ ನೀಡಿದ್ದು ಈಗ ಪರ, ವಿರೋಧ ಚರ್ಚೆಗೆ ಕಾರಣವಾಗಿವೆ.

ದೆಹಲಿಯಲ್ಲಿ ಜಿಎಸ್‌ಟಿ ಕೌನ್ಸಿಲ್‌ನ 50 ನೇ ಸಭೆಯ ನಂತರ ಸುದ್ದಿಗೋಷ್ಠಿ ನಡೆಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಆನ್‌ಲೈನ್ ಗೇಮಿಂಗ್ ಅನ್ನು ಸೇರಿಸಲು ಜಿಎಸ್‌ಟಿ ಕಾನೂನಿಗೆ ಕೆಲವು ತಿದ್ದುಪಡಿಯಾಗಲಿದೆ. ಆನ್‌ಲೈನ್ ಗೇಮಿಂಗ್, ಕ್ಯಾಸಿನೊಗಳು ಮತ್ತು ಕುದುರೆ ರೇಸಿಂಗ್‌ಗಳಿಗೆ 28% ತೆರಿಗೆ ವಿಧಿಸಲಾಗುತ್ತದೆ ಎಂದು ಹೇಳಿದರು.

???? Recommendations of 50th meeting of GST Council

???? GST Council recommends Casino, Horse Racing and Online gaming to be taxed at the uniform rate of 28% on full face value

???? GST Council recommends notification of GST Appellate Tribunal by the Centre with effect from… pic.twitter.com/9LMcvJDYpe

— Ministry of Finance (@FinMinIndia) July 11, 2023

ಈ ಹಿಂದೆ ಕುದುರೆ ರೇಸ್, ಆನ್‌ಲೈನ್‌ ಆಟ, ಕ್ಯಾಸಿನೋಗಳ (Online Gaming, Casinos and Horse Racing) ಮೇಲೆ ಎಷ್ಟು ತೆರಿಗೆ ವಿಧಿಸಬೇಕು ಎಂಬುದನ್ನು ಪರಿಶೀಲಿಸಲು ಮೇಘಾಲಯದ ಮುಖ್ಯಮಂತ್ರಿ ಕೊನ್ರಾಡ್ ಸಂಗ್ಮಾ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಈ ಸಮಿತಿ 28% ರಷ್ಟು ತೆರಿಗೆ ವಿಧಿಸಲು ಶಿಫಾರಸು ಮಾಡಿತ್ತು.

ಪ್ರಸ್ತುತ ಈಗ ಬೆಟ್ಟಿಂಗ್‌ ಅಥವಾ ಗ್ಯಾಬ್ಲಿಂಗ್‌ ಇರುವ ಆನ್‌ಲೈನ್‌ ಆಟಗಳಿಗೆ 28% ರಷ್ಟು ತೆರಿಗೆ, ಬೆಟ್ಟಿಂಗ್‌ ಅಥವಾ ಗ್ಯಾಬ್ಲಿಂಗ್‌ ಇಲ್ಲದ ಆನ್‌ಲೈನ್‌ ಆಟಗಳಿಗೆ 18% ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಕುದುರೆ ರೇಸ್‌ಗಳ ಒಟ್ಟು ಬೆಟ್‌ ಮೌಲ್ಯದ ಮೇಲೆ 28% ರಷ್ಟು ತೆರಿಗೆ ವಿಧಿಸಲಾಗುತ್ತಿದೆ.

ಈ ಹಿಂದೆ ಹಲವು ರಾಜ್ಯ ಸರ್ಕಾರಗಳು ಆನ್‌ಲೈನ್‌ ಗೇಮ್ಸ್‌ ನಿಷೇಧಿಸಲು ಮುಂದಾಗಿದ್ದವು. ಈಗ ಭಾರೀ ತೆರಿಗೆ ವಿಧಿಸುವ ಮೂಲಕ ರಾಜ್ಯ ಸರ್ಕಾಕ್ಕೆ ಆದಾಯ ಸಿಗಲಿದೆ.

ಜನಪ್ರಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಫ್ಯಾಂಟಸಿ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳ ಆದಾಯವು ಹಿಂದಿನ ವರ್ಷದಿಂದ 24% ರಷ್ಟು ಏರಿಕೆಯಾಗಿ 342 ಮಿಲಿಯನ್‌ ಡಾಲರ್‌ಗೆ (2,800 ಕೋಟಿ ರೂ.) ಏರಿಕೆಯಾಗಿತ್ತು.

 2022 ರಲ್ಲಿ 2.8 ಶತಕೋಟಿ ಡಾಲರ್‌  ಇದ್ದ ಭಾರತದ ಗೇಮಿಂಗ್ ಮಾರುಕಟ್ಟೆಯು 2025 ರ ವೇಳೆಗೆ 5 ಶತಕೋಟಿ ಡಾಲರ್‌ಗೆ ಬೆಳೆಯುವ ನಿರೀಕ್ಷೆಯಿದೆ. ಪ್ರತಿ ವರ್ಷ ಇದು 28-30 ಪ್ರತಿಶತ ಪ್ರಮಾಣದಲ್ಲಿ ಬೆಳೆಯುತ್ತಿದೆ.

ಗೇಮಿಂಗ್‌ ಇಂಡಸ್ಟ್ರಿಯಿಂದ ವಿರೋಧ
ಆನ್‌ಲೈನ್‌ ಗೇಮ್ಸ್‌ಗೆ 28% ಜಿಎಸ್‌ಟಿ ವಿಧಿಸಿದ್ದಕ್ಕೆ ಗೇಮಿಂಗ್‌ ಇಂಡಸ್ಟ್ರಿ ಭಾರೀ ವಿರೋಧ ವ್ಯಕ್ತಪಡಿಸಿವೆ. ಸಾಮಾಜಿಕ ಜಾಲತಾಣಗಳಲ್ಲೂ ಟೀಕೆ ವ್ಯಕ್ತವಾಗಿದೆ. ಭಾರತದಲ್ಲಿ ಗೇಮಿಂಗ್‌ ಇಂಡಸ್ಟ್ರಿ ಈಗಷ್ಟೇ ತೆರೆದುಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ಇಷ್ಟೊಂದು ತೆರಿಗೆ ವಿಧಿಸಿರುವುದು ಸರಿಯಲ್ಲ. ಇದರಿಂದಾಗಿ ವಿದೇಶದಿಂದ ನಡೆಯುವ ಅಕ್ರಮ ಗೇಮಿಂಗ್‌ ಆಪ್‌ಗಳು ಲಾಭ ಮಾಡಲಿವೆ ಎಂಬ ಅಭಿಪ್ರಾಯ ವ್ಯಕ್ತವಾಗಿವೆ.

RIP – Real money gaming industry in India. If the govt is thinking people will put in ₹100 to play on ₹72 pot entry (28% Gross GST); and if they win ₹54 (after platform fees)- they will pay 30% TDS on that – for which they will get free swimming pool in their living room come…

— Ashneer Grover (@Ashneer_Grover) July 11, 2023

ಭಾರತ್‌ ಪೇ ಸಂಸ್ಥಾಪಕ ಅಶ್ನೀರ್ ಗ್ರೋವರ್ ಜಿಎಸ್‌ಟಿ ಕೌನ್ಸಿಲ್‌ ನಿರ್ಧಾರವನ್ನು ಟೀಕಿಸಿ, ಸ್ಟಾರ್ಟ್‌ಅಪ್‌ಗಳ ಸಂಸ್ಥಾಪಕರು ರಾಜಕೀಯಕ್ಕೆ ಪ್ರವೇಶಿಸಲು ಮತ್ತು ಪ್ರತಿನಿಧಿಸುವ ಸಮಯ ಬಂದಿದೆ. ಫ್ಯಾಂಟಸಿ ಗೇಮಿಂಗ್ ಉದ್ಯಮವನ್ನು ಕೊಲೆ ಮಾಡಲಾಗಿದೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ತಪ್ಪಿದ ಭಾರೀ ದುರಂತ – ಖಾಸಗಿ ವಿಮಾನ ತುರ್ತು ಭೂಸ್ಪರ್ಶ

Online fantasy sports industry is done and dusted by GST Council today.

As per news: state govts we’re pushing for this. Meanwhile Modi govt is working hard to build startup ecosystem, money hungry state govts wants to milk entire public to fund their pensions and revdis.…

— Ashu (@muglikar_) July 11, 2023

ಒಟ್ಟು ಗೇಮಿಂಗ್ ಆದಾಯಕ್ಕೆ ವಿರುದ್ಧವಾಗಿ ಸ್ಪರ್ಧೆಯ ಪ್ರವೇಶ ಮೊತ್ತದ (CEA) ಮೇಲೆ 28% ಜಿಎಸ್‌ಟಿ ಜಾರಿಗೊಳಿಸುವ ಜಿಎಸ್‌ಟಿ ಕೌನ್ಸಿಲ್‌ನ ನಿರ್ಧಾರದಿಂದ ನಾವು ತೀವ್ರ ದುಃಖಿತರಾಗಿದ್ದೇವೆ, ಈ ನಿರ್ಧಾರವನ್ನು ಮರುಪರಿಶೀಲಿಸಲು ಮತ್ತು ಉದ್ಯಮದೊಂದಿಗೆ ಕೆಲಸ ಮಾಡಲು ನಾವು ಸರ್ಕಾರವನ್ನು ಒತ್ತಾಯಿಸುತ್ತೇವೆ. ಉದ್ಯಮಕ್ಕೆ ಸುಸ್ಥಿರ ಬೆಳವಣಿಗೆಯನ್ನು ಬೆಂಬಲಿಸುವ ಹೆಚ್ಚು ಸೂಕ್ತವಾದ ತೆರಿಗೆ ಮಾದರಿಯನ್ನು ಹುಡುಕಬೇಕೆಂದು ಗೇಮ್ಸ್‌24 ಸಂಸ್ಥಾಪಕ ಭವಿನ್‌ ಪಾಂಡ್ಯ ಟ್ವೀಟ್‌ ಮಾಡಿದ್ದಾರೆ.

ರಾಜ್ಯ ಸರ್ಕಾಗಳು ಪಿಂಚಣಿ ಮತ್ತು ಉಚಿತ ಕೊಡುಗೆ ನೀಡಲು ಇಡೀ ಗೇಮಿಂಗ್‌ ಉದ್ಯಮವನ್ನೇ ನಾಶ ಮಾಡಲು ಮುಂದಾಗಿವೆ. ಇದರಿಂದಾಗಿ ಲಕ್ಷಾಂತರ ಉದ್ಯೋಗಗಳು ನಾಶವಾಗಲಿವೆ ಎಂದು ಟೀಕೆ ವ್ಯಕ್ತವಾಗಿವೆ.

ವಸ್ತುವಿನ ಮೇಲೆ ತೆರಿಗೆ ಹೇಗೆ ನಿರ್ಧಾರವಾಗುತ್ತೆ?
ಭಾರತದಲ್ಲಿ 0%, 5%, 12%, 18% , 28% ಐದು ಜಿಎಸ್‌ಟಿ ಸ್ತರಗಳಿವೆ. ಯಾವ ವಸ್ತುಗಳ ಮೇಲೆ ಎಷ್ಟು ತೆರಿಗೆ ಹಾಕಬೇಕು ಎಂಬುದನ್ನು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರವನ್ನು ಒಳಗೊಂಡ ಜಿಎಸ್‌ಟಿ ಕೌನ್ಸಿಲ್‌ ನಿರ್ಧಾರ ಮಾಡುತ್ತದೆ. ಒಂದು ವಸ್ತುವಿನ ಮೇಲೆ ಎಷ್ಟು ತೆರಿಗೆ ವಿಧಿಸಬೇಕು ಎಂಬುದನ್ನು ಪರಿಶೀಲಿಸಲು ಒಂದು ಸಮಿತಿಯನ್ನು ರಚನೆ ಮಾಡಲಾಗುತ್ತದೆ. ಈ ಸಮಿತಿ ಅಧ್ಯಯನ ನಡೆಸಿ ಎಷ್ಟು ತೆರಿಗೆ ವಿಧಿಸಬಹುದು ಎಂದು ಜಿಎಸ್‌ಟಿ ಕೌನ್ಸಿಲ್‌ಗೆ ಶಿಫಾರಸು ಮಾಡುತ್ತದೆ. ಈ ಶಿಫಾರಸಿನ ಆಧಾರದ ಮೇಲೆ ಜಿಎಸ್‌ಟಿ ಕೌನ್ಸಿಲ್‌ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ.

ಪೆಟ್ರೋಲ್‌ ಮತ್ತು ಡೀಸೆಲ್‌ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲು ಕೇಂದ್ರ ಸರ್ಕಾರ ಪ್ರಯತ್ನಿಸಿತ್ತು. ಆದರೆ ರಾಜ್ಯ ಸರ್ಕಾರಗಳು ವಿರೋಧ ವ್ಯಕ್ತಪಡಿಸುತ್ತಿರುವ ಕಾರಣ ಇನ್ನು ಪೆಟ್ರೋಲ್‌, ಡಿಸೇಲ್‌ ಜಿಎಸ್‌ಟಿ ವ್ಯಾಪ್ತಿಗೆ ಬಂದಿಲ್ಲ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]


follow icon

TAGGED:Casinos and Horse Racingonline gamingಆನ್‍ಲೈನ್ ಗೇಮ್ಸ್ಕ್ಯಾಸಿನೋಜಿಎಸ್‍ಟಿತೆರಿಗೆಸ್ಟಾರ್ಟಪ್‌
Share This Article
Facebook Whatsapp Whatsapp Telegram

Cinema News

Dhanush
ಧನುಷ್ ನನ್ನ ಗೆಳೆಯ – ಡೇಟಿಂಗ್ ವದಂತಿಗೆ ತೆರೆ ಎಳೆದ ಮೃಣಾಲ್ ಠಾಕೂರ್
Cinema Latest South cinema Top Stories
Love me like you do forever to go Yash Radhika Pandit Engagement 9th anniversary
ಉಂಗುರಕ್ಕೆ 9ನೇ ವರ್ಷದ ಸಂಭ್ರಮ – ವಿಶೇಷ ನೆನಪು ಹಂಚಿಕೊಂಡ ರಾಧಿಕಾ
Cinema Latest Sandalwood Top Stories
rajinikanth upendra
`ಭಾಷಾ’ಗಿಂತ `ಓಂ’ ಸಿನಿಮಾ ಹತ್ತು ಪಟ್ಟು ಬೆಟರ್- ಉಪ್ಪಿ ಹೊಗಳಿದ ರಜನಿಕಾಂತ್
Cinema Latest Main Post South cinema
darshan pavithra gowda
ರೇಣುಕಾಸ್ವಾಮಿ ಕೊಲೆ ಕೇಸ್; ದರ್ಶನ್, ಪವಿತ್ರಾ ಗೌಡ ಸೇರಿ ಆರೋಪಿಗಳು ನ್ಯಾಯಾಲಯಕ್ಕೆ ಹಾಜರು
Bengaluru City Cinema Court Latest Main Post Sandalwood
Darshan 11
ರೇಣುಕಾಸ್ವಾಮಿ ಕೊಲೆ ಕೇಸ್ – ಇಂದು ಕೋರ್ಟ್‌ಗೆ ಹಾಜರಾಗಲಿರುವ ‘ಡಿ’ ಗ್ಯಾಂಗ್
Bengaluru City Cinema Court Latest Sandalwood Top Stories

You Might Also Like

Asha 2
Bengaluru City

ಮಾಸಿಕ ಪ್ರೋತ್ಸಾಹಧನ ಹೆಚ್ಚಳಕ್ಕೆ ಆಗ್ರಹ – ಆಶಾ ಕಾರ್ಯಕರ್ತೆಯರಿಂದ ರಾಜ್ಯವ್ಯಾಪಿ ಹೋರಾಟ

Public TV
By Public TV
4 hours ago
Move the Mudola BCM office to the Taluk Administration Building 2
Bagalkot

ಮುಧೋಳ ಬಿಸಿಎಂ ಕಚೇರಿಯನ್ನು ತಾಲೂಕು ಆಡಳಿತ ಭವನಕ್ಕೆ ಸ್ಥಳಾಂತರಿಸಿ, ಇಲ್ಲವೇ ಬಂದ್ ಮಾಡಿ!

Public TV
By Public TV
4 hours ago
Priyanka Gandhi
Latest

`ಮಿಂತಾ ದೇವಿ’ ಟಿ ಶರ್ಟ್ ಹಾಕಿ ಪ್ರತಿಭಟನೆ – 124 ವರ್ಷದ ವೋಟರ್ ಪ್ರತ್ಯಕ್ಷ; ರಾಹುಲ್‌, ಪ್ರಿಯಾಂಕಾಗೆ ತರಾಟೆ

Public TV
By Public TV
4 hours ago
Mandya Heartattack
Districts

ಮಂಡ್ಯ | ಹೃದಯಾಘಾತಕ್ಕೆ ಎಂಜಿನಿಯರಿಂಗ್ ವಿದ್ಯಾರ್ಥಿ ಬಲಿ

Public TV
By Public TV
4 hours ago
siddaramaiah clp meeting
Bengaluru City

ಧರ್ಮಸ್ಥಳ ಬುರುಡೆ ರಹಸ್ಯ – 13ನೇ ಸ್ಥಳದಲ್ಲಿ ಮೂಳೆ ಸಿಗದೇ ಇದ್ರೆ ತನಿಖೆ ಸ್ಥಗಿತ?

Public TV
By Public TV
5 hours ago
Dharwad House Collapse
Dharwad

ಧಾರವಾಡ | ಎಡೆಬಿಡದೆ ಸುರಿದ ಮಳೆಗೆ ಕುಸಿದ ಮನೆ

Public TV
By Public TV
5 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?