ನವದೆಹಲಿ: ಓಲಾ (Ola), ಊಬರ್ (Uber) ಕ್ಯಾಬ್‍ಗಳಿಗೆ ಕೇಂದ್ರ ಸರ್ಕಾರ ಶಾಕ್ ನೀಡಿದೆ. ಚಾಲಕರು ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರ ಸಹಕಾರ್ ಟ್ಯಾಕ್ಸಿ (Sahakari Taxi) ಎಂಬ ಹೊಸ ಆಪ್ ತರುತ್ತಿದೆ. ಈ ಆಪ್ ಓಲಾ, ಊಬರ್ ಮಾದರಿಯಲ್ಲೇ ರೈಡ್ ಸರ್ವೀಸ್ ನೀಡಲಿದೆ.
ದ್ವಿಚಕ್ರ ವಾಹನ ಸವಾರರು, ಆಟೋ ಚಾಲಕರು, ಕ್ಯಾಬ್ ಚಾಲಕರು ಈ ಆಪ್‍ನಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಓಲಾ, ಊಬರ್ ಮಾದರಿಯಲ್ಲಿ ಚಾಲಕರಿಂದ ಯಾವುದೇ ಶುಲ್ಕವನ್ನು ಸಂಗ್ರಹ ಮಾಡಲ್ಲ. ರೈಡ್‍ನ ಎಲ್ಲಾ ಮೊತ್ತ ಚಾಲಕರಿಗೆ ವರ್ಗ ಮಾಡಲಾಗುತ್ತದೆ. ಶೀಘ್ರದಲ್ಲೇ ಸಹಕಾರ್ ಟ್ಯಾಕ್ಸಿ ಆಪ್ ಲೋಕಾರ್ಪಣೆ ಮಾಡ್ತೇವೆ ಎಂದು ಅಮಿತ್ ಶಾ (Amit Shah) ತಿಳಿಸಿದ್ದಾರೆ. ಇದನ್ನೂ ಓದಿ: ಮಂಡ್ಯ ಕೃಷಿ ವಿವಿ ಹೆಸರಿನಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಛತ್ರಿಬುದ್ಧಿ ನನಗಿಲ್ಲ: ಹೆಚ್‌ಡಿಕೆ
ಓಲಾ ಮತ್ತು ಊಬರ್ ಪ್ಲಾಟ್ಫಾರ್ಮ್ಗಳಲ್ಲಿ ಒಂದು ರೇಡ್ನಲ್ಲಿ ಗ್ರಾಹಕರಿಂದ ಪಡೆಯಲಾಗುವ ಹಣದಲ್ಲಿ ಕಂಪನಿಗಳಿಗೆ ಸಾಕಷ್ಟು ಹಣ ಹೋಗುತ್ತದೆ. ಬಹಳಷ್ಟು ಚಾಲಕರು ಈ ಬಗ್ಗೆ ನಿತ್ಯವೂ ಅಳಲು ತೋಡಿಕೊಳ್ಳುವುದಿದೆ. ಆದರೆ, ಸರ್ಕಾರ ಯೋಜಿಸಿರುವ ಸಹಕಾರಿ ಟ್ಯಾಕ್ಸಿಯು ಲಾಭ ರಹಿತ ಉದ್ದೇಶದಿಂದ ನಡೆಸಲಾಗುತ್ತದೆ. ಒಂದು ರೇಡ್ನ್ಲಲಿ ಸಿಗುವ ಎಲ್ಲಾ ಹಣವೂ ನೇರವಾಗಿ ಚಾಲಕರಿಗೆ ಹೋಗುತ್ತದೆ.
ವರದಿ ಪ್ರಕಾರ, ಟ್ಯಾಕ್ಸಿ ಸೇವೆ ಕೇವಲ ಕಾರ್ಗೆ ಮಾತ್ರ ಸೀಮಿತವಾಗಿರಲ್ಲ. ದ್ವಿಚಕ್ರ, ತ್ರಿಚಕ್ರ ವಾಹನಗಳನ್ನೂ ಟ್ಯಾಕ್ಸಿ ಸೇವೆಗೆ ಒಳಗೊಳ್ಳಲಾಗುತ್ತದೆ. ಅಂದರೆ, ಬೈಕ್ ಟ್ಯಾಕ್ಸಿ, ಆಟೊರಿಕ್ಷಾ, ಕ್ಯಾಬ್ ಸರ್ವಿಸ್ ಇರಲಿದೆ ಎನ್ನಲಾಗಿದೆ. ಇದನ್ನೂ ಓದಿ: ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹತೋಟೆಯಲ್ಲಿ ಕಾಂಗ್ರೆಸ್ ಸರ್ಕಾರ ವಿಫಲ: ಕೇಂದ್ರ ಮಧ್ಯಪ್ರವೇಶಕ್ಕೆ ಈರಣ್ಣ ಕಡಾಡಿ ಮನವಿ