ನವದೆಹಲಿ: ಇಂದಿನ ಬಜೆಟ್‍ನಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ, ಆರ್ಥಿಕ ಅಪರಾಧಿಗಳ ದಂಡನೆಗೆ ಕ್ರಮ ಕೈಗೊಳ್ಳುವ ಬಗ್ಗೆ ಘೋಷಸಿದ್ದು, ಸಾಲ ಮಾಡಿ ಕಾನೂನು ಕಣ್ತಪ್ಪಿಸಿ ದೇಶ ಬಿಟ್ಟು ಹೋದವರ ಆಸ್ತಿ ಪಾಸ್ತಿ ಜಪ್ತಿಗೆ ಸರ್ಕಾರ ಹೊಸ ಕಾನೂನು ತರಲಿದೆ ಎಂದು ಹೇಳಿದ್ದಾರೆ. ಇದರಿಂದ ಸಾವಿರಾರು ಕೋಟಿ ರೂಪಾಯಿ ಸಾಲ ಮಾಡಿ ವಿದೇಶಕ್ಕೆ ಹಾರಿರುವ ವಿಜಯ್ ಮಲ್ಯಗೆ ದೊಡ್ಡ ಶಾಕ್ ಸಿಕ್ಕಿದೆ.
ವಿದೇಶದಲ್ಲಿರುವ ಮಲ್ಯರಿಂದ ಸಾಲ ಹಿಂಪಡೆಯಲು ಬ್ಯಾಂಕ್‍ಗಳು ಪ್ರಯತ್ನ ನಡೆಸುತ್ತಿರುವ ಬೆನ್ನಲ್ಲೇ ಈ ಘೋಷಣೆ ಹೊರಬಿದ್ದಿದೆ. ಕಾನೂನಿನ ಕಣ್ತಪ್ಪಿಸಿ ಕೆಲವರು ದೇಶ ಬಿಟ್ಟು ಹೋಗಿರುವ ಉದಾಹರಣೆಗಳಿವೆ. ಹೀಗಾಗಿ ಸರ್ಕಾರ ಇಂತಹ ವ್ಯಕ್ತಿಗಳ ಆಸ್ತಿ ಜಪ್ತಿ ಮಾಡಲು ಕಾನೂನು ರೂಪಿಸಲಿದೆ ಎಂದು ಅರುಣ್ ಜೇಟ್ಲಿ ಬಜೆಟ್ ಮಂಡನೆ ವೇಳೆ ಹೇಳಿದ್ರು.
Advertisement
ಉದ್ಯಮಿ ವಿಜಯ ಮಲ್ಯ ಕಳೆದ ವರ್ಷ ಮಾರ್ಚ್‍ನಲ್ಲಿ ವಿದೇಶಕ್ಕೆ ಹಾರಿದ್ರು. ಹಲವು ಬ್ಯಾಂಕ್‍ಗಳು ಮಲ್ಯಾರಿಂದ 9 ಸಾವಿರ ಕೋಟಿ ರೂ. ಆಸ್ತಿ ಹಿಂಪಡೆಯಲು ಸಾಕಷ್ಟು ಪ್ರಯತ್ನ ನಡೆಸಿದ್ದರೂ ಮಲ್ಯರನ್ನು ಭಾರತಕ್ಕೆ ಕರೆತರಲು ಸಾಧ್ಯವಾಗಿಲ್ಲ. ಇದಕ್ಕೆ ಸಂಬಂಧಿಸಿದಂತೆ ಮಲ್ಯ ಹಲವು ಬಾರಿ ನೋಟಿಸ್ ಕೂಡ ನೀಡಲಾಗಿದೆ.
Advertisement
FM #BudgetforBetterIndia: Will enact law to confiscate assets of those offenders including economic offenders fleeing the reach of law.
— Ministry of Finance (@FinMinIndia) February 1, 2017