Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: PUBLiC TV Explained: ಶೈಕ್ಷಣಿಕ ಕಲಿಕೆಗೆ `AI ಪರಿಕರ’ ತರಲು ಸರ್ಕಾರ ಚಿಂತನೆ – ಇದು ಹೇಗೆ ಕಾರ್ಯನಿರ್ವಹಿಸುತ್ತೆ? 
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | PUBLiC TV Explained: ಶೈಕ್ಷಣಿಕ ಕಲಿಕೆಗೆ `AI ಪರಿಕರ’ ತರಲು ಸರ್ಕಾರ ಚಿಂತನೆ – ಇದು ಹೇಗೆ ಕಾರ್ಯನಿರ್ವಹಿಸುತ್ತೆ? 

Latest

PUBLiC TV Explained: ಶೈಕ್ಷಣಿಕ ಕಲಿಕೆಗೆ `AI ಪರಿಕರ’ ತರಲು ಸರ್ಕಾರ ಚಿಂತನೆ – ಇದು ಹೇಗೆ ಕಾರ್ಯನಿರ್ವಹಿಸುತ್ತೆ? 

Public TV
Last updated: February 21, 2026 9:51 am
Public TV
Share
4 Min Read
AI Teaching
SHARE

ತಂತ್ರಜ್ಞಾನ ಬೆಳೆದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ವಿಭಿನ್ನ ರೀತಿಯ ಬದಲಾವಣೆಗಳಾಗುತ್ತಿವೆ. ಸ್ವತಂತ್ರ ಪೂರ್ವದಲ್ಲಿ ರೇಡಿಯೋ, ಟಿವಿ ಹೀಗೆ ಒಂದಾದ ಮೇಲೊಂದರಂತೆ ಹೊಸ ಹೊಸ ವಸ್ತುಗಳು ಆವಿಷ್ಕಾರವಾದವು. ಅವುಗಳನ್ನೇ ಇಟ್ಟುಕೊಂಡು ಅದರಲ್ಲಿ ವಿಭಿನ್ನ ತಂತ್ರಜ್ಞಾನಗಳ ಅಳವಡಿಕೆ ಶುರುವಾಯಿತು. ಅಲ್ಲಿಂದ ಆರಂಭವಾದ ತಂತ್ರಜ್ಞಾನ ಯುಗ ಪ್ರಸ್ತುತ ಎಲ್ಲಾ ಕ್ಷೇತ್ರಗಳಲ್ಲಿಯೂ ಅನಿವಾರ್ಯವಾಗಿಬಿಟ್ಟಿದೆ. 

ಇದೀಗ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದಂತೆಯೇ ಎಲ್ಲಾ ಕ್ಷೇತ್ರಗಳಲ್ಲಿಯೂ ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತಿದೆ. ಆರಂಭದಲ್ಲಿ ಕೇವಲ ಮಾಹಿತಿ ಕೊಡುವ ಉದ್ದೇಶದಿಂದ ಕಾಲಿಟ್ಟ ಕೃತಕ ಬುದ್ಧಿಮತ್ತೆ ಈಗ ಹಂತ ಹಂತವಾಗಿ ಬದಲಾಗುತ್ತಿದೆ. ಇದೀಗ ಕೇಂದ್ರ ಸರ್ಕಾರ ಶೈಕ್ಷಣಿಕ ಕಲಿಕೆಗೆ ಎಐ ಪರಿಕರಗಳನ್ನು ಅಳವಡಿಸುವ ಯೋಜನೆಗೆ ಚಿಂತನೆ ನಡೆಸಿದೆ. ಏನು ಈ ಯೋಜನೆ? ಯಾವ ರೀತಿ ಇದು ಕೆಲಸ ಮಾಡಲಿದೆ? ಎನ್ನುವ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ. 

Teacher Student class room

ಕಳೆದ ವಾರ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರು ಮುಂದಿನ ಶೈಕ್ಷಣಿಕ ವರ್ಷದಿಂದ ಪೂರ್ವ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣವರೆಗೆ ಎಲ್ಲಾ ಹಂತದ ಬೋಧನೆಯಲ್ಲಿ ಎಐ ಪರಿಕರಗಳನ್ನು ಜಾರಿಗೆ ತರಲಾಗುವುದು ಎಂಬ ಮಾಹಿತಿ ನೀಡಿದ್ದರು. ಈ ಸಂಬಂಧ `ಬೋಧನ್ ಎಐ’ ಎಂಬ ಲಾಭರಹಿತ ಕಂಪನಿಗೆ Centre of Excellence in AI  ನಲ್ಲಿ ಚಾಲನೆ ನೀಡಿದರು. ಈ Centre of Excellence in AI ಅನ್ನು ಐಐಟಿ ಮದ್ರಾಸ್ ಆಯೋಜಿಸುತ್ತಿದ್ದು, ಕಳೆದ ವರ್ಷ ಈ ಸಂಬಂಧ ಬಜೆಟ್ ನಲ್ಲಿ 500 ಕೋಟಿ ರೂಗಳನ್ನು ನಿಗದಿಪಡಿಸಲಾಗಿದೆ.

ಏನಿದು ಬೋಧನ್ AI?
ಈ ಕಂಪನಿಯು ಕಿಂಡರ್ ಗಾರ್ಟನ್ ನಿಂದ ಉನ್ನತ ಶಿಕ್ಷಣ ವರೆಗೆ ಇಡೀ ಶಿಕ್ಷಣ ವ್ಯವಸ್ಥೆಗೆ ಅವಶ್ಯಕವಾದ ಎಐ ಪರಿಕರಗಳು ಮತ್ತು ಇನ್ನಿತರ ಸೇವೆಗಳನ್ನ ಒದಗಿಸುವ ಒಂದು ಡಿಜಿಟಲ್ ಚೌಕಟ್ಟನ್ನು ರಚಿಸುತ್ತದೆ ಅದನ್ನು ಭಾರತ್ eduai ಎಂದು ಕರೆಯಲಾಗುತ್ತದೆ. ಯಾವ ರೀತಿ ಯುಪಿಐ ದೊಡ್ಡಮಟ್ಟದಲ್ಲಿ ಹಣ ವರ್ಗಾವಣೆಗೆ ಸಹಾಯ ಮಾಡುತ್ತದೆಯೋ ಅದೇ ರೀತಿ ಡಿಜಿಟಲ್ ಆಗಿ ಸಾರ್ವಜನಿಕರಿಗೆ ಮೂಲ ಸೌಕರ್ಯ ಒದಗಿಸುವ ಡಿಪಿಐ ಅಡಿಯಲ್ಲಿ ಭಾರತ್ eduai ಕಾರ್ಯನಿರ್ವಹಿಸುತ್ತದೆ. 

class room

ಏನಿದರ ಉದ್ದೇಶ? 

  • ಇದರಡಿಯಲ್ಲಿ ಭಾರತೀಯ ಭಾಷೆಗಳಿಗೆ ತಕ್ಕಂತೆ ಕೃತಕ ಬುದ್ಧಿಮತ್ತೆ ಮಾಡೆಲ್ಗಳನ್ನು ಅಭಿವೃದ್ಧಿಪಡಿಸುತ್ತದೆ. ಜೊತೆಗೆ ಸ್ವಯಂ ಭಾಷೆಯನ್ನ ಗುರುತಿಸುವಿಕೆ ಮತ್ತು ಅದೇ ಭಾಷೆಯಲ್ಲಿ ಮಾಹಿತಿ ನೀಡುವ ಕಾರ್ಯವನ್ನು ಮಾಡುತ್ತದೆ. 
  • ಇದರ ಅಡಿಯಲ್ಲಿ ಕಂಪನಿಗಳು ಎಜುಕೇಶನ್ ಟೆಕ್ನಾಲಜಿಗೆ ಸಂಬಂಧಪಟ್ಟಂತೆ ಅಪ್ಲಿಕೇಶನ್ ಗಳನ್ನು ಕೂಡ ಅಭಿವೃದ್ಧಿಪಡಿಸಬಹುದಾಗಿದೆ. 
  • ಡಿಜಿಟಲ್ ಪರಿಕರಿಗಳನ್ನು ಮತ್ತು ಸಾಫ್ಟ್ ವೇರ್ ಅನ್ನು ಅಭಿವೃದ್ಧಿಪಡಿಸಿ,  ಬಳಿಕ ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಶಾಲೆಗಳು ಹಾಗೂ ಇತರ ಸಂಸ್ಥೆಗಳಲ್ಲಿ ಅಳವಡಿಸಲಾಗುತ್ತದೆ. 
  • ಕಲಿಕೆಯನ್ನು ಸುಧಾರಿಸಲು, ಶಿಕ್ಷಣದಲ್ಲಿ ತಂತ್ರಜ್ಞಾನವನ್ನು ಅಳವಡಿಸುವ ವಿಶೇಷ ಉದ್ದೇಶವನ್ನು ಎತ್ತಿ ತೋರಿಸುತ್ತದೆ.
  • ಅಲ್ಲದೆ ಹೊಸ ಅಪ್ಲಿಕೇಶನ್ ಗಳು ಹಾಗೂ ಡಿಜಿಟಲ್ ಪರಿಕರಗಳನ್ನು ಅಭಿವೃದ್ಧಿಪಡಿಸಿ ಅವುಗಳನ್ನ ನೇರವಾಗಿ ಶಾಲೆಗಳು ಮತ್ತು ಇನ್ನಿತರ ಶಿಕ್ಷಣ ಸಂಸ್ಥೆಗಳಿಗೆ ಪರಿಚಯಿಸುವ ಗುರಿ ಹೊಂದಿದೆ. 
  • ಈ ಮೂಲಕ ವಿದ್ಯಾರ್ಥಿಗಳಿಗೆ ಸುಲಭ ಮಾಹಿತಿ ಹಾಗೂ ರಾಜ್ಯ ಸರ್ಕಾರಗಳೊಂದಿಗೆ ನೇರವಾಗಿ ಸಂಪರ್ಕ ಹೊಂದಿರುತ್ತದೆ.

AI Teaching 1

ಐಐಟಿ ಮದ್ರಾಸ್ ನ ನಿರ್ದೇಶಕರಾದ ವಿ. ಕಾಮಕೋಟಿ ಅವರ ಮಾಹಿತಿಯಂತೆ, ಶೈಕ್ಷಣಿಕ ಪರಿಕರಗಳು ಪೂರ್ವ ವ್ಯಾಪ್ತಿಯ ಕಲಿಕಾ ಸಾಮರ್ಥ್ಯದ ಆಧಾರದ ಮೇಲೆ ತಯಾರಾಗುತ್ತವೆ. ಜೊತೆಗೆ ಶಿಕ್ಷಕರಿಗೆ ಮಾರ್ಗದರ್ಶನ ಹಾಗೂ ಪೋಷಕರು ಇದರಲ್ಲಿ ಮಧ್ಯಸ್ಥಿಕೆ ಬಯಸುವಂತಹ ಅವಕಾಶ ನೀಡುತ್ತದೆ. ಅಲ್ಲದೆ ಜಿಲ್ಲೆಗಳಲ್ಲಿ ಶಾಲೆಗಳು ಯಾವ ರೀತಿ ನಡೆಯುತ್ತದೆ ಎಂಬುದನ್ನು ಗಮನಿಸಲು ಆಡಳಿತ ಮಂಡಳಿಗೆ ವಿದ್ಯಾರ್ಥಿಗಳ ಪರೀಕ್ಷಾ ಅಂಕ, ಹಾಜರಾತಿ, ಶಿಕ್ಷಕರು ಮತ್ತು ಮೂಲ ಸೌಕರ್ಯಗಳ ಗುಣಮಟ್ಟದ ಮಾಹಿತಿಯನ್ನು ಇದು ನೀಡುತ್ತದೆ. 

ಅಲ್ಲದೆ ಮಕ್ಕಳಿಗೆ ಪಠ್ಯಕ್ರಮವನ್ನು ಹಂಚಿಕೆ ಮಾಡುವುದು, ಪಠ್ಯಕ್ರಮವನ್ನ ಪುನರ್ ಪರಿಶೀಲನೆ ಮಾಡಿ ರಚಿಸುವುದು ಹಾಗೂ ಹೊಸ ತಂತ್ರಜ್ಞಾನವನ್ನ ಪರಿಚಯಿಸೋದು ಹಾಗೂ ಶಿಕ್ಷಕರಿಗೆ ತರಬೇತಿ ಒದಗಿಸುವಂತಹ ನಿರ್ಧಾರ ಕೈಗೊಳ್ಳಲು ಇದು ಸಹಾಯಮಾಡುತ್ತದೆ ಎಂದು ತಿಳಿಸಿದ್ದಾರೆ.

AI Teaching 3

ಒಂದು ಮಗು ಹೇಗೆ ತನ್ನ ಮಾತೃ ಭಾಷೆಯಲ್ಲಿ ಎಲ್ಲವನ್ನು ಅರ್ಥ ಮಾಡಿಕೊಳ್ಳುತ್ತದೆಯೋ ಹಾಗೆಯೇ AI ಕೂಡ ಮಕ್ಕಳಿಗೆ ಅವರ ಮಾತೃಭಾಷೆಯಲ್ಲಿಯೇ ತಿಳಿಯುವಂತೆ ಅವಕಾಶ ಮಾಡಿಕೊಡಬೇಕು. ಮತ್ತು ಧ್ವನಿ ಆಧಾರಿತ ಕೆಲವು ವರ್ಕ್ ಗಳನ್ನು ಒದಗಿಸಬೇಕು. ಈ ಮೂಲಕ ವಿದ್ಯಾರ್ಥಿಗಳ ಉಚ್ಚಾರಣೆ ನಿರರ್ಗಳವಾಗಿ ಮಾತನಾಡುವುದು ಸೇರಿದಂತೆ ಎಲ್ಲದರ ಕುರಿತು ಶಿಕ್ಷಕರಿಗೆ ವರದಿಯನ್ನು ಕೂಡ ಇದು ನೀಡುತ್ತದೆ. ಈ ಮೂಲಕ ವಿದ್ಯಾರ್ಥಿಯ ಬೆಳವಣಿಗೆ ಯಾವ ರೀತಿಯಾಗಿದೆ ಎನ್ನುವುದು ತಿಳಿಯುತ್ತದೆ. ಅಲ್ಲದೆ ಸುಲಭವಾಗಿ ಓದುವುದು, ಭಾಷಾ ಕಲಿಕೆ ಮತ್ತು ರಸಪ್ರಶ್ನೆಗಳಿಗೆ ಉತ್ತರಿಸುವುದು ಇಂತಹ ಚಟುವಟಿಕೆಗಳನ್ನ ಅದು ನೀಡುತ್ತದೆ

ಈ ಸಾಧನವು ಯಾವುದೇ ಮಗು ಪ್ರಶ್ನೆ ಕೇಳಿದಾಗ ಅದಕ್ಕೆ ಉತ್ತರಿಸುತ್ತದೆ. ಪ್ರತಿಯೊಂದು ಭಾಷೆಯಲ್ಲಿಯೂ ಇದು ಲಭ್ಯವಿದ್ದು ಮಗು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವನ್ನು ಇದು ಹೊಂದಿರಬೇಕು ಎಂದು ತಿಳಿಸಿದ್ದಾರೆ.

ಇನ್ನು ಮಕ್ಕಳು ಆಪ್ ನಲ್ಲಿ ಹಾಕುವ ದತ್ತಾಂಶವು ಕೇವಲ ಮಕ್ಕಳು ಬಳಸುವ ಆಪ್ ನಲ್ಲಿ ಮಾತ್ರ ಇರಬೇಕು. ಎಲ್ಲವೂ ವಯಕ್ತಿಕವಾಗಿರಬೇಕು. ಯಾವುದೇ ದತ್ತಾಂಶವು ಸಾರ್ವಜನಿಕ ವೇದಿಕೆಗೆ ಲಭ್ಯವಿರಬಾರದು ಎಂದು ಅಭಿಪ್ರಾಯ ಪಟ್ಟಿದ್ದಾರೆ.

AI Teaching 2

ಏನಿದರ ಲಾಭ?
ವಿದ್ಯಾರ್ಥಿಗಳಿಗೆ:

  •  ವೈಯಕ್ತಿಕ ಕಲಿಕೆಗೆ ಅನುವು ಮಾಡಿಕೊಡುತ್ತದೆ. 
  • ಧ್ವನಿ ಆಧಾರಿತ ಚಟುವಟಿಕೆಗಳು ಮತ್ತು ತಕ್ಷಣದ ಪ್ರತಿಕ್ರಿಯೆಗಳು ಇದರಿಂದ ಲಭ್ಯವಾಗುತ್ತದೆ. 
  • ಪ್ರಶ್ನೆಗೆ ಉತ್ತರ, ಡಿಜಿಟಲ್ ಟ್ಯೂಷನ್ ಮಾದರಿಯ ಅಂಶಗಳು ಮತ್ತು ರಿವಿಶನ್ ಗೆ ಸಹಾಯ ಮಾಡುತ್ತದೆ. 
  • ಚಟುವಟಿಕೆಗಳ ಮೂಲಕ ಮಕ್ಕಳಿಗೆ ಕಲಿಕೆಗೆ ಅನುವು ಮಾಡಿಕೊಡುತ್ತದೆ.

ಶಿಕ್ಷಕರಿಗೆ:

  • ವಿದ್ಯಾರ್ಥಿಗಳ ಚಟುವಟಿಕೆ, ಬಳಕೆ ಹಾಗೂ ಇನ್ನಿತರ ಕಲಿಕಾ ಸಾಮರ್ಥ್ಯ ಗಮನಿಸಿ ರಿಪೋರ್ಟ್ ನೀಡುತ್ತದೆ. 
  • ಇದರಿಂದ ಸುಲಭವಾಗಿ ವಿದ್ಯಾರ್ಥಿಗಳ ಪ್ರಗತಿಯ ಕುರಿತು ಮಾಹಿತಿ ದೊರೆಯುತ್ತದೆ. 
  • ಶಿಕ್ಷಕರಿಗೆ ತರಬೇತಿ ಹಾಗೂ ಮಕ್ಕಳ ಕಲಿಕಾ ಕೌಶಲ್ಯದ ಆಧಾರದ ಮೇಲೆ ಸಹಾಯವಾಗುತ್ತದೆ. 
  • ಇದು ಮಾತೃಭಾಷೆಯಲ್ಲಿ ಮಾಹಿತಿ ನೀಡುವಲ್ಲಿ ಸಹಾಯ ಮಾಡುತ್ತದೆ. 

ಇನ್ನು ಆಡಳಿತ ಮಂಡಳಿಗೆ ಪ್ರತಿ ಶಾಲೆಯ ಬಗ್ಗೆ, ಆ ಶಾಲೆಯ ಶೈಕ್ಷಣಿಕ ಗುಣಮಟ್ಟ ಹಾಗೂ ಮಕ್ಕಳ ಕಲಿಕಾ ಕೌಶಲ್ಯ ಬಗ್ಗೆ ಮಾಹಿತಿ ಒದಗಿಸುತ್ತದೆ. ಜೊತೆಗೆ ಜಿಲ್ಲೆಯ ಪ್ರಗತಿ ಹಾಗೂ ಜಿಲ್ಲೆಗಳಲ್ಲಿನ ಶಾಲೆಗಳ ಬಗ್ಗೆ ಇದು ಮಾಹಿತಿ ನೀಡಲು ಸಹಾಯಮಾಡುತ್ತದೆ.

AI Teaching 4

 

TAGGED:AI Centre for ExcellenceAI TeachingBodhan AICentral GovernmentDharmendra Pradhanಧರ್ಮೇಂದ್ರ ಪ್ರಧಾನ
Share This Article
Facebook Whatsapp Whatsapp Telegram

Cinema news

Parliament House witnessed Azad Bharat screening in honor of Netaji Subhas Chandra Bose 1
ನೇತಾಜಿ ಗೌರವಾರ್ಥ ಆಜಾದ್ ಭಾರತ್ ಚಿತ್ರ ಪ್ರದರ್ಶನಕ್ಕೆ ಸಂಸತ್ ಭವನ ಸಾಕ್ಷಿ
Cinema Latest National Top Stories
Ramayana
`ರಾಮಾಯಣ’ ಟೀಸರ್ ರಿಲೀಸ್ – ಮರ್ಯಾದಾ ಪುರುಷೋತ್ತಮನ ಗೆಟಪ್‌ನಲ್ಲಿ ಕಂಗೊಳಿಸಿದ ರಣಬೀರ್
Bollywood Cinema Latest Top Stories
Malayalam director Ranjith
ನಟಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ – ಮಲಯಾಳಂ ನಿರ್ದೇಶಕ ರಂಜಿತ್ ಅರೆಸ್ಟ್
Cinema Latest Main Post National South cinema
vijay thalapathy
ನಟ ವಿಜಯ್‌ ವಿರುದ್ಧ ಪ್ರಕರಣ ದಾಖಲು
Cinema Latest South cinema Top Stories

You Might Also Like

Nandini products
Bengaluru City

ಕೋಲಾರ | ನಂದಿನಿ ಅಕ್ವಾ, ಐಸ್‌ಕ್ರೀಂ ಪೂರೈಕೆ ಸ್ಥಗಿತ

Public TV
By Public TV
44 minutes ago
Hassan Crime
Crime

ದಾರಿ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ – ಮಹಿಳೆಯನ್ನ ಬೆತ್ತಲುಗೊಳಿಸಿ ಹಲ್ಲೆಗೆ ಯತ್ನ

Public TV
By Public TV
1 hour ago
General Randy George
Latest

General Randy George| ಸೇನಾ ಮುಖ್ಯಸ್ಥನನ್ನೇ ಕಿತ್ತು ಹಾಕಿದ ಟ್ರಂಪ್‌ ಸರ್ಕಾರ – ರಾಜೀನಾಮೆಗೆ ಸೂಚನೆ

Public TV
By Public TV
1 hour ago
I would have banned him IPL founder Lalit Modi slams LSG owner Sanjiv Goenka over animated exchange with captain Rishabh Pant and coach after defeat
Cricket

ನಾನು ಐಪಿಎಲ್‌ ಅಧ್ಯಕ್ಷನಾಗಿದ್ದರೆ ಗೋಯೆಂಕಾ ಬ್ಯಾನ್‌ – ಲಲಿತ್‌ ಮೋದಿ ಕೆಂಡಾಮಂಡಲ

Public TV
By Public TV
2 hours ago
Love
Latest

ಪ್ರತಿ ಮಳೆಗೂ ನೀನಿಟ್ಟ ನೆನಪು ಅದೆಷ್ಟು ಶಾಶ್ವತ..!

Public TV
By Public TV
2 hours ago
BRT Fire
Chamarajanagar

ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯಕ್ಕೆ ಮತ್ತೆ ಬೆಂಕಿ – 25ಕ್ಕೂ ಹೆಚ್ಚು ಎಕರೆ ಅಗ್ನಿಗಾಹುತಿ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?