ಬೆಂಗಳೂರು: ಕಾವೇರಿ (Cauvery) ವಿಚಾರ ಚರ್ಚೆ ಮಾಡಲು ಸರ್ಕಾರ ಕೂಡಲೇ ವಿಶೇಷ ಅಧಿವೇಶನ ಕರೆಯಬೇಕು ಎಂದು ಮಾಜಿ ಸಚಿವ ಹೆಚ್‌ಡಿ ರೇವಣ್ಣ (HD Revanna) ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಶನಿವಾರ ಮಂಡ್ಯ ಬಂದ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮಂಡ್ಯ ಬಂದ್‌ಗೆ ನಮ್ಮ ಪಕ್ಷದ ಬೆಂಬಲ ಇದೆ. ರಾಜ್ಯದ ಜಲ ಮತ್ತು ನೆಲದ ವಿಷಯದಲ್ಲಿ ರಾಜಕೀಯ ಮಾಡಬಾರದು. ತಪ್ಪು ಯಾರದ್ದೇ ಇರಲಿ ಈಗ ಚರ್ಚೆ ಬೇಡ. ಏನು ಸರಿಪಡಿಸಬೇಕು ಎಂದು ಸರ್ಕಾರ ಯೋಚನೆ ಮಾಡಲಿ. ಕಾವೇರಿ ವಿಷಯಕ್ಕಾಗಿ ವಿಶೇಷ ಅಧಿವೇಶನ ಕರೆದು ಒಂದು ನಿರ್ಣಯ ಮಾಡಬೇಕು ಎಂದು ಒತ್ತಾಯ ಮಾಡಿದರು.
Advertisement
Advertisement
ಹೇಮಾವತಿ ವಿಚಾರವಾಗಿ ಸಲಹಾ ಸಮಿತಿ ಸಭೆ ಮಾಡಿ ಎಂದು ಅನೇಕ ದಿನಗಳಿಂದ ನಾನು ಹೇಳಿದ್ದೇನೆ. ಒಂದು ಕಡೆ ಬರ, ಮತ್ತೊಂದು ಕಡೆ ಕಾವೇರಿ ವಿಷಯ. ಇದಕ್ಕೆ ಪರಿಹಾರ ಕೊಡಬೇಕು ಅಂದರೆ ಚರ್ಚೆ ಆಗಬೇಕು. ಇದಕ್ಕಾಗಿ ವಿಶೇಷ ಅಧಿವೇಶನ ಕರೆದು ನಿರ್ಣಯ ಮಾಡಬೇಕು. ಅನೇಕ ಜನ ಹಿರಿಯ ಶಾಸಕರು ಇದ್ದಾರೆ. ಸರ್ಕಾರ ಅವರಿಂದ ಸಲಹೆ ಪಡೆಯಬೇಕು. ಬೆಂಗಳೂರಿನ ನಗರಕ್ಕೆ ಕುಡಿಯುವ ನೀರಿಲ್ಲ. ಈಗ ನೀರು ಬಿಟ್ಟು ಆಮೇಲೆ ವಾಪಸ್ ತರೋಕೆ ಆಗಲ್ಲ. ಸಿಎಂ ಕೂಡಲೇ ವಿಶೇಷ ಅಧಿವೇಶನ ಕರೆಯಬೇಕು. 2, 3, 4 ದಿನವೋ ವಿಶೇಷ ಅಧಿವೇಶನ ಮಾಡಬೇಕು ಎಂದು ಒತ್ತಾಯ ಮಾಡಿದರು. ಇದನ್ನೂ ಓದಿ: ಬಂಗಾರಪ್ಪ ಸಿಎಂ ಆಗಿದ್ದಾಗ ಚಿಟಿಕೆ ಹೊಡೆಯುವುದರಲ್ಲಿ ಕಾವೇರಿ ಸಮಸ್ಯೆಗೆ ಉತ್ತರ ಕೊಟ್ಟಿದ್ದರು: ಮಧು ಬಂಗಾರಪ್ಪ
Advertisement
ಕಾವೇರಿ ವಿಚಾರ ಸೇರಿದಂತೆ ನೀರಾವರಿಯ ಯಾವುದೇ ವಿಷಯಕ್ಕೆ ಜೆಡಿಎಸ್ ಬೆಂಬಲ ಇದೆ. ದೇವೇಗೌಡರು ನೀರಾವರಿ ಬಗ್ಗೆಯೇ ಹೋರಾಟ ಮಾಡಿದ್ದಾರೆ. ಕಾವೇರಿ ಬಗ್ಗೆಯೂ ಹೋರಾಟ ಮಾಡಿದ್ದಾರೆ. ನಮ್ಮ ಪಕ್ಷ ಕೂಡಾ ಬೆಂಬಲ ಕೊಡಲಿದೆ ಎಂದರು.
Advertisement
ಆದಿ ಚುಂಚನಗಿರಿ ಶ್ರೀಗಳಿಂದ ಪ್ರತಿಭಟನೆಗೆ ಬೆಂಬಲ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಿರ್ಮಲಾನಂದ ಶ್ರೀಗಳು ಇರಬಹುದು, ಬಾಲಗಂಗಾಧರನಾಥ ಶ್ರೀಗಳು ಇರಬಹುದು ರಾಜ್ಯದ ಹಿತ ಕಾಪಾಡೋದ್ರಲ್ಲಿ ಮುಂದೆ ಇದ್ದರು. ಆದಿಚುಂಚನಗಿರಿ ಶ್ರೀಗಳು ನೀರಿಗಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಶ್ರೀಗಳ ನಿರ್ಧಾರವನ್ನು ನಾವು ಸ್ವಾಗತ ಮಾಡುತ್ತೇವೆ ಎಂದರು. ಇದನ್ನೂ ಓದಿ: ಮಹಿಳಾ ಮೀಸಲಾತಿ ಅಂಗೀಕಾರ – ಇದು ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡೋ ದಿನ: ಪ್ರಹ್ಲಾದ್ ಜೋಶಿ
Web Stories