ನವದೆಹಲಿ: ಟಿವಿ ಪ್ಯಾನಲಿನ ಅತ್ಯಂತ ಪ್ರಮುಖ ಭಾಗವಾದ ಓಪನ್ ಸೆಲ್ ಮೇಲಿನ ಆಮದು ಸುಂಕ ಕಡಿತವಾಗಿದ್ದು, ಮುಂದಿನ ದಿನಗಳಲ್ಲಿ ಎಲ್‍ಇಡಿ, ಎಲ್‍ಸಿಡಿ ಟಿವಿಗಳ ದರ ಕಡಿತವಾಗುವ ಸಾಧ್ಯತೆಯಿದೆ.
ಕೇಂದ್ರ ಸರ್ಕಾರ ಬುಧವಾರ ಓಪನ್ ಸೆಲ್ ಮೇಲಿನ ಆಮದು ಸುಂಕವನ್ನು ಶೇ.5ರಷ್ಟು ಕಡಿತಗೊಳಿಸಿದೆ. ಹಣಕಾಸು ಸಚಿವಾಲಯ ನೋಟಿಫಿಕೇಶನ್ ಹೊರಡಿಸಿ ಕಡಿತ ಮಾಡಲಾಗಿರುವ ನಿರ್ಧಾರ ಪ್ರಕಟಿಸಿದೆ.
Advertisement
ಓಪನ್ ಸೆಲ್(15.6 ಇಂಚು ಮತ್ತು ಅದಕ್ಕಿಂತ ಮೇಲ್ಪಟ್ಟು) ಲಿಕ್ವಿಡ್ ಕ್ರಿಸ್ಟಲ್ ಡಿಸ್ಪ್ಲೇ(ಎಲ್‍ಸಿಡಿ) ಮತ್ತು ಲೈಟ್ ಎಮಿಟಿಂಗ್ ಡಯೋಡ್(ಎಲ್‍ಇಡಿ) ಟಿವಿಗೆ ಬಳಸುವ ಓಪನ್ ಸೆಲ್ ಮೇಲಿನ ಆಮದು ಸುಂಕವನ್ನು ಕಡಿತಗೊಳಿಸಲಾಗಿದೆ ಎಂದು ನೋಟಿಫಿಕೇಶನ್ ನಲ್ಲಿ ತಿಳಿಸಿದೆ. ಇದನ್ನೂ ಓದಿ: 2 ಲಕ್ಷ ರೂ. ಡಿಸ್ಕೌಂಟ್ ಆಫರ್ – ಯಾವ ಕಾರಿನ ಬೆಲೆ ಎಷ್ಟು ಇಳಿಕೆ?
Advertisement
Advertisement
ಜೂನ್ 2017ರಲ್ಲಿ ಕೇಂದ್ರ ಸರ್ಕಾರ ಓಪನ್ ಸೆಲ್ ಪ್ಯಾನೆಲ್ ಮೇಲೆ ಆಮದು ಸುಂಕವನ್ನು ವಿಧಿಸಿತ್ತು. ಇದಾದ ಬಳಿಕ ಟಿವಿ ತಯಾರಕ ಕಂಪನಿಗಳು ವಿಧಿಸಲಾಗಿದ್ದ ಆಮದು ಸುಂಕವನ್ನು ತೆಗೆದುಹಾಕಬೇಕೆಂದು ಮನವಿ ಮಾಡಿತ್ತು. ಟಿವಿಯಲ್ಲಿನ ಪ್ರಮುಖ ಭಾಗ ಓಪನ್ ಸೆಲ್ ಆಗಿದ್ದು ಇದಕ್ಕೆ ಅರ್ಧಕ್ಕಿಂತ ಹೆಚ್ಚಿನ ಬೆಲೆಯಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಎಲ್‍ಸಿಡಿ, ಎಲ್‍ಇಡಿ ಟಿವಿಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದೆ.
Advertisement
ಫಿಲ್ಮ್ ನಲ್ಲಿ ಬಳಸುವ ಚಿಪ್, ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್ ಅಸೆಂಬ್ಲಿ(ಪಿಸಿಬಿಎ), ಸೆಲ್ ಮೇಲಿನ ಆಮದು ಸುಂಕವನ್ನು ಇಳಿಸಲಾಗಿದೆ. ಓಪನ್ ಸೆಲ್ ಪ್ಯಾನೆಲ್ ಬಳಸಲು ಇವುಗಳನ್ನು ಬಳಸಲಾಗುತ್ತದೆ.