ಮೈಸೂರು: ಸಿಎಂ ಸಿದ್ದರಾಮಯ್ಯ (Siddaramaiah) ತವರಲ್ಲಿ ಮತ್ತೊಂದು ವಕ್ಫ್ ಗದ್ದಲ ಉಂಟಾಗಿದ್ದು, ಸರ್ಕಾರಿ ಖರಾಬು ಜಾಗ ಈಗ ವಕ್ಫ್ (Waqf) ಆಸ್ತಿ ಆಗಿದೆ.
ಸರ್ಕಾರಿ ಶಾಲೆ ಜಾಗವನ್ನು ತನ್ನದು ಎಂದು ವಕ್ಫ್ ಹೇಳಿಕೊಂಡಿದೆ. ಮೈಸೂರು ತಾಲೂಕು ಇಲವಾಲದ ಸರ್ಕಾರಿ ಶಾಲೆ ಜಾಗದ ಮೇಲೆ ವಕ್ಫ್ ಕಣ್ಣು ಬಿದ್ದಿದ್ದು, ಸರ್ಕಾರಿ ಖರಾಬು ಜಾಗವನ್ನ 2020ರಲ್ಲಿ ವಕ್ಫ್ ಮಂಡಳಿ ತನ್ನದಾಗಿಸಿಕೊಂಡಿದೆ. ಇದನ್ನೂ ಓದಿ: ಏಯ್ ಕುಮಾರಸ್ವಾಮಿ ನಿನ್ನ ರೇಟ್ ಹೇಳು – ವಿವಾದಾತ್ಮಕ ಪದ ಬಳಸಿದ ಜಮೀರ್
ಮೈಸೂರು ತಾಲೂಕು ಉಪ ವಿಭಾಗಾಧಿಕಾರಿ ಕೋರ್ಟ್ನಲ್ಲಿ ಈ ತೀರ್ಮಾನವಾಗಿದೆ. 2020ರಲ್ಲಿ ಸರ್ಕಾರಿ ಖರಾಬು ಹೆಸರನ್ನು ತೆಗೆದು, ವಕ್ಫ್ ಆಸ್ತಿ ಎಂದು ಆರ್‌ಟಿಸಿ ಹೊರಡಿಸಲಾಗಿದೆ. ಇಲವಾಲದ ಸರ್ವೆ ನಂಬರ್ 54ರಲ್ಲಿ ಬರುವ 34 ಗುಂಟೆ ಜಾಗ ಇದು.
ಇದೇ ವಿಚಾರವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ (Pratap Simha). ಸಿಎಂ ಸಿದ್ದರಾಮಯ್ಯಗೆ ಟ್ಯಾಗ್ ಮಾಡಿ, ‘ಕಂಗ್ರಾಜುಲೇಷನ್ ಸರ್’ ಎಂದು ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಹೊಸ ಮನೆಗಳಿಗೆ ‘ಗ್ರೇ ವಾಟರ್ ರೀಸೈಕ್ಲಿಂಗ್’ ಕಡ್ಡಾಯಕ್ಕೆ ಜಲಮಂಡಳಿ ಚಿಂತನೆ – ಏನಿದು ಯೋಜನೆ?