ಗುರುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ನಾಗಾಲ್ಯಾಂಡ್, ಅಸ್ಸಾಂ ಹಾಗೂ ಮಣಿಪುರದಲ್ಲಿ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ(ಎಎಫ್‌ಎಸ್‌ಪಿಎ/ಆಫ್ಸಾ) ಅಡಿಯಲ್ಲಿದ್ದ ಪ್ರದೇಶಗಳನ್ನು ಕಡಿತಗೊಳಿಸುವುದಾಗಿ ಘೋಷಿಸಿದ್ದಾರೆ.
ಈ ಹಿಂದಿನಿಂದಲೂ ಈ ಕಾಯ್ದೆಗೆ ಆ ರಾಜ್ಯದ ಜನತೆ ಭಾರೀ ವಿರೋಧ ವ್ಯಕ್ತಪಡಿಸಿದ್ದರು. ಈಗ ಕೇಂದ್ರ ಸರ್ಕಾರ ಹಂತ ಹಂತವಾಗಿ ವ್ಯಾಪ್ತಿಯನ್ನು ಕಡಿತಗೊಳಿಸಲು ಮುಂದಾಗಿದೆ. ಹೀಗಾಗಿ ಇಲ್ಲಿ ಈ ಕಾಯ್ದೆ ಏಕೆ ಪ್ರಾರಂಭವಾಯಿತು? ಯಾವಾಗ ಪ್ರಾರಂಭವಾಯಿತು? ಹಾಗೂ ಈ ಕಾಯ್ದೆಯನ್ನು ಇದೀಗ ಕಡಿತಗೊಳಿಸಲು ಕಾರಣ ಏನು ಎಂಬೆಲ್ಲ ಮಾಹಿತಿಯನ್ನು ನೀಡಲಾಗಿದೆ.
Advertisement
Advertisement
ಸಶಸ್ತ್ರ ಪಡೆಗಳ ವಿಶೇಷ ಕಾಯ್ದೆ 1958 ಏನು ಹೇಳುತ್ತದೆ?
* ಕಾನೂನು ಬಾಹಿರ ವ್ಯಕ್ತಿಗಳ ಮೇಲೆ ಗುಂಡು ಹಾರಿಸಬಹುದು.
* ಅನುಮಾನಿತ ವ್ಯಕ್ತಿಗಳ ಮೇಲೆ ವಾರಂಟ್ ಇಲ್ಲದೇ ಬಂಧಿಸಬಹುದು.
* ಯಾವುದೇ ವಾಹನವನ್ನು ತಡೆಗಟ್ಟಿ ತಪಾಸಣೆ ಮಾಡಬಹುದು.
* ಯೋಧರು ಯಾವುದೇ ಕಾರಣಕ್ಕೂ ನ್ಯಾಯಾಂಗದ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ ಅವರ ಮೇಲೆ ಕೇಸ್ ದಾಖಲಿಸುವ ಹಾಗೂ ವಿಚಾರಣೆ ನಡೆಸಲು ಅವಕಾಶವೇ ಇಲ್ಲ. ಇದನ್ನೂ ಓದಿ: ನಾಗಾಲ್ಯಾಂಡ್, ಅಸ್ಸಾಂ, ಮಣಿಪುರದಲ್ಲಿ ಆಫ್ಸಾ ವ್ಯಾಪ್ತಿಯ ಪ್ರದೇಶಗಳ ಕಡಿತ: ಅಮಿತ್ ಶಾ
Advertisement
Advertisement
ಭಾರೀ ಪ್ರತಿಭಟನೆ:
ಈ ಘಟನೆಯ ಬಳಿಕ ಸಶಸ್ತ್ರ ಪಡೆಗಳ ಕಾಯ್ದೆಯನ್ನು ಸೈನಿಕರು ಉಲ್ಲಂಘಿಸುತ್ತಿರುವುದರ ವಿರುದ್ಧವಾಗಿ ಈಶಾನ್ಯ ರಾಜ್ಯಗಳಲ್ಲಿ ಪ್ರತಿಭಟನೆ ನಡೆಯಿತು. ಮಹಿಳೆಯರು ಅಸ್ಸಾಂ ರೈಫಲ್ಸ್ನ ಪ್ರಧಾನ ಕಚೇರಿಯ ಮುಂಭಾಗದಲ್ಲಿ ಸಂಪೂರ್ಣ ನಗ್ನರಾಗಿ ನಮ್ಮನ್ನು ಅತ್ಯಾಚಾರಕ್ಕೆ ಬಳಸಿಕೊಳ್ಳಿ ಎಂದು ಅಬ್ಬರಿಸಿ ಪ್ರತಿಭಟನೆ ನಡೆಸಿದ್ದರು.
ಈ ಪ್ರತಿಭಟನೆಯ ಬಳಿಕ ಎಚ್ಚೆತ್ತ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಮಣಿಪುರಕ್ಕೆ ಭೇಟಿ ನೀಡಿದ್ದರು. ಮಣಿಪುರ ಸರ್ಕಾರ ಘಟನೆ ಬಗ್ಗೆ ತನಿಖೆ ನಡೆಸಲು ಉಪೇಂದ್ರ ಆಯೋಗವನ್ನು ರಚಿಸುತ್ತದೆ. ಸೇನೆ ಆಯೋಗಕ್ಕೆ ಯಾವುದೇ ಸಹಕಾರ ನೀಡುವುದಿಲ್ಲ. ಕಾಯ್ದೆ ಹೇಳುವಂತೆ ಸೈನಿಕರ ವಿಚಾರಣೆ ನಡೆಸುವ ಅಧಿಕಾರ ಆಯೋಗಕ್ಕೆ ಮತ್ತು ನ್ಯಾಯಾಂಗಕ್ಕೆ ಇಲ್ಲವಾದರಿಂದ ಉಪೇಂದ್ರ ಆಯೋಗಕ್ಕೂ ಹಚ್ಚಿನ ತನಿಖೆ ನಡೆಸಲು ಸಾಧ್ಯವಾಗಿರಲಿಲ್ಲ. ಉಪೇಂದ್ರ ಆಯೋಗ ತನಿಖೆ ತಡೆಸಿ ವರದಿ ನೀಡಿದ್ದರೂ ಮಣಿಪುರ ಸರ್ಕಾರ ಈ ವರದಿ ಬಹಿರಂಗಪಡಿಸಿರಲಿಲ್ಲ. ಇದನ್ನೂ ಓದಿ: ಯಾರೀ ಶೆಹಬಾಜ್ ಷರೀಫ್- ಇವರೇ ಪಾಕಿಸ್ತಾನದ ಮುಂದಿನ ಪ್ರಧಾನಿ?
ಕಾಯ್ದೆ ಎಲ್ಲಿ ಜಾರಿಯಲ್ಲಿದೆ?
ಈಶಾನ್ಯ ಭಾರತದ ಏಳು ರಾಜ್ಯಗಳಲ್ಲಿ ಈ ಕಾಯ್ದೆ ಜಾರಿಯಲ್ಲಿದೆ. ಅಸ್ಸಾಂ, ಮಣಿಪುರ, ಮೇಘಾಲಯ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ತ್ರಿಪುರ, ಮಿಜೋರಾಂ ಇವೇ 7 ರಾಜ್ಯಗಳಲ್ಲಿ ಈ ಕಾಯ್ದೆ ಜಾರಿಯಲ್ಲಿದೆ.
ಭಾರತದಲ್ಲಿ ಈ ಕಾಯ್ದೆ ಯಾವಾಗ ಜಾರಿಯಾಯಿತು?
ಸಶಸ್ತ್ರ ಪಡೆಗಳ ಕಾಯ್ದೆಯನ್ನು ಮೊದಲು ಭಾರತದಲ್ಲಿ ಜಾರಿಗೆ ತಂದವರು ಬ್ರಿಟಿಷರು. 1942ರ ಕ್ವಿಟ್ ಇಂಡಿಯಾ ಚಳುವಳಿ ಸಂದರ್ಭದಲ್ಲಿ ದೇಶದ ಸ್ವಾತಂತ್ರ‍್ಯ ಹೋರಾಟಗಾರರ ವಿರುದ್ಧ ಈ ಕಾಯ್ದೆಯನ್ನು ಬಳಸಿ ಅವರನ್ನು ನಿಯಂತ್ರಿಸಲಾಗುತ್ತಿತ್ತು.
ಈ ಕಾಯ್ದೆಯನ್ನು ಜಾರಿಗೊಳಿಸಿದ್ದು ಯಾಕೆ?
ಭಾರತಕ್ಕೆ ಸ್ವಾಂತಂತ್ರ‍್ಯ ಸಿಗುವ ಮೊದಲೇ ಈಗಿನ ಮಣಿಪುರ, ಅಸ್ಸಾಂ ನಾಗಾಲ್ಯಾಂಡ್ ಒಳಗೊಂಡ ಪ್ರತ್ಯೇಕ ರಾಷ್ಟ್ರ ನಿರ್ಮಾಣವಾಗಬೇಕೆಂದು ನಾಗಾ ನ್ಯಾಷನಲ್ ಕೌನ್ಸಿಲ್ ಪಾರ್ಟಿಯ ಆಗ್ರಹವಾಗಿತ್ತು. 1940ರಿಂದಲೇ ಈ ಸಂಬಂಧ ಹೋರಾಟಗಳು ಆರಂಭವಾಗಿತ್ತು. ಸ್ವಾತಂತ್ರ‍್ಯಗಳಿಸಿದ ನಂತರ ಭಾರತದ ಹಲವು ಭಾಗಗಳ ನಾಯಕರು ಒಕ್ಕೂಟ ವ್ಯವಸ್ಥೆ ಸೇರಲು ವಿರೋಧ ವ್ಯಕ್ತಪಡಿಸಿದ್ದರು. ಅವುಗಳಲ್ಲಿ ನಾಗಾ ನ್ಯಾಷನಲ್ ಪಾರ್ಟಿಯೂ ಒಂದು.
1951ರಲ್ಲಿ ನಾಗಾ ನ್ಯಾಷನಲ್ ಕೌನ್ಸಿಲ್ ಪಾರ್ಟಿ ತಮಗಾಗಿ ಈ ಸಂದರ್ಭದಲ್ಲಿ ಆ ಪಕ್ಷ ಅಲ್ಲೇ ಆಂತರಿಕ ಮತದಾನ ಮಾಡಿ ಶೇ.99 ರಷ್ಟು ಜನರು ಪ್ರತ್ಯೇಕ ರಾಷ್ಟ್ರದ ನಿರ್ಮಾಣದ ಪರವಾಗಿ ಮತ ಚಲಾಯಿಸಿದ್ದಾರೆ ಎಂದು ಕೇಂದ್ರ ಸರ್ಕಾರಕ್ಕೆ ತಿಳಿಸಿತ್ತು. ಕೇಂದ್ರ ಸರ್ಕಾರ ಇವರ ಬೇಡಿಕೆಯನ್ನು ತಿರಸ್ಕರಿಸಿತ್ತು. ಬಳಿಕ 1952ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯನ್ನು ನಾಗಾ ನ್ಯಾಷನಲ್ ಪಾರ್ಟಿ ಬಹಿಷ್ಕರಿಸಿತ್ತು. ಇದನ್ನೂ ಓದಿ: ಭಯೋತ್ಪಾದನೆಯಲ್ಲಿ ತೊಡಗಲು ಮುಸ್ಲಿಂ ಯುವಕರಿಗೆ ಪ್ರೇರಣೆ- 5 ವರ್ಷ ಜಾಕಿರ್ ನಾಯಕ್ ಸಂಸ್ಥೆ ಬ್ಯಾನ್
1956ರಲ್ಲಿ ನಾಗಾ ನ್ಯಾಷನಲ್ ಪಾರ್ಟಿ ‘ಪಿಪಲ್ಸ್ ರಿಪಬ್ಲಿಕ್ ಆಫ್ ಫ್ರೀ ನಾಗಾಲ್ಯಾಂಡ್’ ಹೆಸರಿನಲ್ಲಿ ಪ್ರರ್ಯಾಯ ಸರ್ಕಾರದ ರಚನೆ ಮಾಡಿತು. ಅಲ್ಲಿದ್ದ ರಾಜ್ಯ ಸರ್ಕಾರಕ್ಕೆ ಕೇಂದ್ರದ ಸಹಾಯ ಪಡೆಯದೇ ದಾರಿ ಇರಲಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ಈಶಾನ್ಯ ಭಾಗದಲ್ಲಿ ಪ್ರತ್ಯೇಕ ರಾಷ್ಟ್ರವಾಗಬೇಕೆಂದು ಹೋರಾಟ ನಡೆಸುತ್ತಿರುವವರನ್ನು ನಿಯಂತ್ರಿಸಲು ಬ್ರಿಟಿಷರು ತಂದಿದ್ದ ಸಶಸ್ತ್ರ ಪಡೆಗಳ ಕಾಯ್ದೆಯನ್ನು ಮುಂದಿಟ್ಟುಕೊಂಡು 1958ರಲ್ಲಿ ಸಶಸ್ತ್ರ ಪಡೆಗಳ ವಿಶೇಷಾಧಿಕಾರದ ಬಗ್ಗೆ ಕಾನೂನು ರಚಿಸಿತು. ಈ ಕಾಯ್ದೆಗೆ 1958 ಮೇ 22ರಂದು ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ ಸಹಿ ಹಾಕಿದರು.
ಇರೋಮ್ ಶರ್ಮಿಳಾ ಹೋರಾಟ:
ಈ ಕಾಯ್ದೆಯನ್ನು ಸರ್ಕಾರ ತೆಗೆಯಬೇಕೆಂದು ಇರೋಮ್ ಶರ್ಮಿಳಾ ಭಾರೀ ಹೋರಾಟ ನಡೆಸಿದ್ದರು. 2000 ನವೆಂಬರ್ 2ರಂದು ಮಣಿಪುರ ಇಂಫಾಲದಲ್ಲಿ ಮಲೋಮ್ ಗ್ರಾಮದಲ್ಲಿ ಅಸ್ಸಾ ರೈಫಲ್ಸ್ನ ಯೋಧರು ಎಂಟು ವಾಹನದಲ್ಲಿ ತೆರಳುತ್ತಿದ್ದಾಗ ಉಗ್ರಗಾಮಿಗಳು ಬಾಂಬ್ ಸ್ಪೋಟಿಸಿದ್ದರು. ಯೋಧರ ಗುರಿಯಾಗಿಸಿ ಬಾಂಬ್ ಸ್ಪೋಟಿಸಿದ್ದರೂ, ಸೈನಿಕರಿಗೆ ಯಾವುದೇ ಪ್ರಾಣಾಪಾಯ ಆಗಿರಲಿಲ್ಲ. ಆದರೆ ಈ ಬಾಂಬ್ ದಾಳಿಗೆ ಸ್ಥಳೀಯ ನಿವಾಸಿಗಳೇ ಕಾರಣ ಎಂದು ತಿಳಿದು ಅಸ್ಸಾ ರೈಫಲ್ಸ್ನ ಯೋಧರು ಅಲ್ಲೇ ಬಸ್ಸಿಗಾಗಿ ನಿಂತಿದ್ದ 10 ಮಂದಿ ಪ್ರಯಾಣಿಕರನ್ನು ಗುಂಡಿಟ್ಟು ಹತ್ಯೆ ಮಾಡಿದದ್ದರು. ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ ಅನುದಾನ ಹಂಚಿಕೆ -ಬಜೆಟ್‍ನಲ್ಲಿ ರಾಜ್ಯಕ್ಕೆ 832 ಕೋಟಿ ಮೀಸಲು
ಹತ್ಯೆಯಾದವರಲ್ಲಿ 1998ರಲ್ಲಿ ರಾಷ್ಟ್ರೀಯ ಮಕ್ಕಳ ಶೌರ್ಯ ಪ್ರಶಸ್ತಿ ಪುರಸ್ಕಾರ ಪಡೆದ ಸಿನಾಮ್ ಚಂದ್ರಮಣಿ ಬಾಲಕಿ ಮತ್ತು 62 ವರ್ಷದ ಮಹಿಳೆಯೂ ಸೇರಿದ್ದರು. ಹಿಂದಿನಿಂದಲೂ ಸೈನಿಕರು ಈ ಕಾಯ್ದೆಯನ್ನು ದುರ್ಬಳಕೆ ಮಾಡುತ್ತಿದ್ದನ್ನು ಕೇಳಿದ್ದ ಶರ್ಮಿಳಾ ಈ ಹತ್ಯಾಕಾಂಡದ ಸುದ್ದಿಯನ್ನು ಕೇಳಿ ನೊಂದು ಹೋರಾಟಕ್ಕೆ ದುಮುಕಿದ್ದರು.