ಬೆಂಗಳೂರು: ನೆಟೆ ರೋಗ (Nete Disese) ಸಂತ್ರಸ್ತರಿಗೆ ಪರಿಹಾರ ಹಣವನ್ನ ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಮುಖ್ಯಮಂತ್ರಿಗಳ ಕಚೇರಿಯಿಂದ ಪರಿಹಾರ ಬಿಡುಗಡೆ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಲಾಗಿದೆ.
ಉತ್ತರ ಕರ್ನಾಟಕದ ಕಲಬುರಗಿ, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ನೆಟೆ ರೋಗದಿಂದ ಕಳೆದ ಸಾಲಿನಲ್ಲಿ ತೊಗರಿ ಬೆಳೆ ಹಾನಿಯಿಂದ ನಷ್ಟವಾಗಿತ್ತು. ಹೀಗಾಗಿ ರೈತರಿಗೆ ಬಾಕಿ ಇದ್ದ ಪರಿಹಾರ ಹಣವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಇದನ್ನೂ ಓದಿ: ದೊಡ್ಡಗೌಡ್ರು ಬಿಜೆಪಿ ಜೊತೆ ಮೈತ್ರಿಗೆ ಒಪ್ಪಿರೋದು ಸಂತೋಷ: ಬಿಎಸ್‌ವೈ
ಕೃಷಿ ಸಚಿವರಾದ ಎನ್.ಚಲುವರಾಯಸ್ವಾಮಿ ಅವರ ಮನವಿ ಮೇರೆಗೆ ನೆಟೆ ರೋಗ ಸಂತ್ರಸ್ತರಿಗೆ ಬಾಕಿ ಇದ್ದ 223 ಕೋಟಿ ರೂ. ಗಳನ್ನು ಸರ್ಕಾರ ಮಂಜೂರು ಮಾಡಿ 74 ಕೊಟಿ ರೂ.ಗಳನ್ನು ಬಿಡುಗಡೆ ಮಾಡಿತ್ತು. ಪ್ರಸ್ತುತ 2ನೇ ಕಂತಿನಲ್ಲಿ 74 ಕೋಟಿ ರೂ. ಬಿಡುಗಡೆಗೊಳಿಸಲಾಗಿದೆ. ಬಾಕಿ ಉಳಿದ 75 ಕೋಟಿ ರೂ. ಹಣವನ್ನು ಸಹ ಶೀಘ್ರವಾಗಿ ಬಿಡುಗಡೆ ಮಾಡಲಾಗುವುದು ಎಂದು ಸಿಎಂ ಕಚೇರಿ ತಿಳಿಸಿದೆ.
Web Stories