ನವದೆಹಲಿ: ಸರ್ಕಾರದ ಉಜ್ವಲ ಯೋಜನೆ (Ujjwala Yojana) ಫಲಾನುಭವಿಗಳ ಸಬ್ಸಿಡಿ (LPG Subsidy) ಮೊತ್ತವನ್ನು ಕೇಂದ್ರ ಸರ್ಕಾರ ಹೆಚ್ಚಿಸಿದೆ. 200 ರೂ.ಗಳಿಂದ 300 ರೂ.ಗೆ ಸಬ್ಸಿಡಿ ಹೆಚ್ಚಿಸಲಾಗಿದೆ. ಇದರಿಂದಾಗಿ ಫಲಾನುಭವಿಗಳಿಗೆ 600 ರೂ.ಗಳಿಗೆ ಸಿಲಿಂಡರ್ ಸಿಗಲಿದೆ.
ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಎಲ್‍ಪಿಜಿ ಸಿಲಿಂಡರ್‌ಗಳ ಮೇಲೆ ಹೆಚ್ಚುವರಿ 100 ರೂ. ಸಬ್ಸಿಡಿಯನ್ನು ಕೇಂದ್ರವು ಅನುಮೋದಿಸಿದೆ. ಇದು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಈ ವಿಚಾರವನ್ನು ಕೇಂದ್ರ ಸಚಿವ ಅನುರಾಗ್ ಠಾಕೂರ್ (Anurag Thakur) ಅವರು ದೃಢಪಡಿಸಿದ್ದಾರೆ. ಇದನ್ನೂ ಓದಿ: ದೆಹಲಿ ಅಬಕಾರಿ ನೀತಿ ಹಗರಣ – ಆಪ್ ಸಂಸದ ಸಂಜಯ್ ಸಿಂಗ್ ನಿವಾಸದ ಮೇಲೆ ED ದಾಳಿ
ಸರ್ಕಾರದ ಈ ನಿರ್ಧಾರದಿಂದ ರಾಷ್ಟ್ರಾದ್ಯಂತ ಕಡಿಮೆ ಆದಾಯದ ಕುಟುಂಬಗಳಿಗೆ ಪರಿಹಾರವಾಗಲಿದೆ. ಕಳೆದ ಆಗಸ್ಟ್‌ನಲ್ಲಿ ಗೃಹ ಬಳಕೆಯ ಎಲ್‍ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 200 ರೂ.ಗಳನ್ನು ಕಡಿಮೆ ಮಾಡಲಾಗಿತ್ತು. ಈಗ ಹೊಸ ಸಬ್ಸಿಡಿ ಅನುಮೋದನೆಯೊಂದಿಗೆ, ಉಜ್ವಲ ಫಲಾನುಭವಿಗಳಿಗೆ ಸರ್ಕಾರವು ವಿಸ್ತರಿಸಿದ ಒಟ್ಟಾರೆ ಹಣ 500 ರೂ.ನಷ್ಟಿದೆ.
ಈ ವರ್ಷದ ಕೊನೆಯಲ್ಲಿ ನಡೆಯುವ ಚುನಾವಣೆಗಳು ಮತ್ತು 2024ಕ್ಕೆ ನಿಗದಿಯಾಗಿರುವ ಸಾರ್ವತ್ರಿಕ ಚುನಾವಣೆಗಳ ಸಲುವಾಗಿ ಕೇಂದ್ರ ಈ ನಿರ್ಧಾರಕ್ಕೆ ಕೈ ಹಾಕಿದೆ ಎನ್ನುವ ಮಾತುಗಳು ಸಹ ಕೇಳಿ ಬಂದಿವೆ. ಇದನ್ನೂ ಓದಿ: ಚೀನಾದಿಂದ ಅಕ್ರಮ ಹೂಡಿಕೆ – ನ್ಯೂಸ್‌ಕ್ಲಿಕ್ ಸಂಪಾದಕ, HR 7 ದಿನ ಪೊಲೀಸ್ ಕಸ್ಟಡಿಗೆ – ಏನಿದು ಪ್ರಕರಣ?
Web Stories