ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿಗೆ ಈಗಾಗಲೇ ಕುಡಿಯುವ ನೀರಿಗೆ ಬರ ಬಂದಿದೆ. ಬೆಂಗಳೂರಿಗರ ನೀರಿನ ಸಮಸ್ಯೆ ನೀಗಿಸಲು ಸರ್ಕಾರ ನಾನಾ ಕಸರತ್ತು ನಡೆಸುತ್ತಿದೆ. ಈ ನಡುವೆ ಕರಾವಳಿಯ ಸಮುದ್ರದ ನೀರನ್ನೇ ಬೆಂಗಳೂರಿಗರಿಗೆ ಕುಡಿಯಲು ಸರಬರಾಜು ಮಾಡುವ ಪ್ಲಾನ್ ಫಿಕ್ಸ್ ಆಗಿದೆ. ಇದಕ್ಕಾಗಿ ಈಗಾಗಲೇ ಬಂದರು ನಗರಿ ಮಂಗಳೂರಿನಲ್ಲಿ ಪ್ಲಾನ್ ರೆಡಿಯಾಗ್ತಿದೆ.
Advertisement
ಎತ್ತಿನಹೊಳೆ ಯೋಜನೆಗೆ ಕೈ ಹಾಕಿದಾಗಿನಿಂದಲೂ ಒಂದಲ್ಲ ಒಂದು ವಿವಾದಗಳು ಸರ್ಕಾರದ ಸುತ್ತಾ ಗಿರಕಿ ಹೊಡೆಯುತ್ತಿವೆ. ಕರಾವಳಿಯವರು ಕೊಡಲ್ಲ, ಕೋಲಾರ ಭಾಗದವರು ಬಿಡಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿ ಇರುವಾಗ ಸರ್ಕಾರ ಹೊಸ ಪ್ಲಾನ್ ರೂಪಿಸಿದೆ. ಅದೇ ಸಮುದ್ರದ ನೀರನ್ನ ಸಿಹಿ ಮಾಡಿ ಹರಿಸುವ ಯೋಜನೆ.
Advertisement
Advertisement
ಹೌದು. ಸೌದಿ ಅರೇಬಿಯಾ, ಕುವೈತ್ ಸೇರಿದಂತೆ ಪೆಟ್ರೋಲ್ ಉತ್ಪಾದಿಸುವ ಬಹುತೇಕ ರಾಷ್ಟ್ರಗಳು ಸಮುದ್ರದ ಉಪ್ಪು ನೀರನ್ನ ಸಿಹಿ ನೀರಾಗಿಸಿ ಬಳಕೆ ಮಾಡುತ್ತಿವೆ. ಮುಂಬೈ, ವಿಶಾಖಪಟ್ಟಣದಲ್ಲಿ ಯೋಜನೆ ರೆಡಿಯಾಗಿದೆ. ಚೆನ್ನೈನಲ್ಲಿ ಈಗಾಗಲೇ ಪ್ಲಾಂಟ್ ಶುರುವಾಗಿದೆ. ಇದೇ ಮಾದರಿಯಲ್ಲಿ ಮಂಗಳೂರಿನ ತಣ್ಣೀರುಬಾವಿ ಭಾಗದಲ್ಲಿ ಪ್ಲಾಂಟ್ ನಿರ್ಮಿಸಿ ಬೆಂಗಳೂರು, ಕೋಲಾರ ಭಾಗಕ್ಕೆ ನೀರು ಹರಿಸಲು ಸರ್ಕಾರ ಚಿಂತನೆ ನಡೆದಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಹೈದ್ರಾಬಾದ್‍ನ ಅಧಿಕಾರಿಗಳ ತಂಡವೂ ಭೇಟಿ ಕೊಟ್ಟು ಅಧ್ಯಯನ ನಡೆಸಿದೆ.
Advertisement
ಈ ಅಧ್ಯಯನ ತಂಡದ ತಜ್ಞರ ಪ್ರಕಾರ, ಈ ಯೋಜನೆಯಡಿ 100 ಎಂಎಲ್‍ಡಿ ನೀರು ಉತ್ಪಾದಿಸಲು 600 ಕೋಟಿ ರೂ. ಖರ್ಚಾಗುತ್ತೆ. 18 ರಿಂದ 20 ಎಕರೆ ಭೂಮಿ ಬೇಕಾಗುತ್ತೆ. ಖುಷಿ ವಿಷಯ ಅಂದ್ರೆ ಮಂಗಳೂರಿನ ಎಂಆರ್‍ಪಿಎಲ್ ಮತ್ತು ಎಂಸಿಎಫ್ ಕೈಗಾರಿಕೆಗಳು ಈ ಯೋಜನೆಗೆ ಕೈ ಜೋಡಿಸಲಿವೆ.