ನವದೆಹಲಿ: 2017 ಜುಲೈ ನಿಂದ 2018 ಮಾರ್ಚ್ ವರೆಗೆ 7.41 ಲಕ್ಷ ಕೋಟಿ ರೂಪಾಯಿ ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ಸಂಗ್ರಹವಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
1.19 ಲಕ್ಷ ಕೋಟಿ ರೂ ಸಿಜಿಎಸ್‍ಟಿ, 1.72 ಲಕ್ಷ ಕೋಟಿ ರೂ ಎಸ್‍ಜಿಎಸ್‍ಟಿ, 3.66 ಲಕ್ಷ ಕೋಟಿ ರೂ ಐಜಿಎಸ್‍ಟಿ ಮತ್ತು 62,021 ಕೋಟಿ ರೂಪಾಯಿ ಸೆಸ್ ಸಂಗ್ರಹವಾಗಿದೆ ಎಂದು ತಿಳಿಸಿದೆ.
Advertisement
ಹಾನಿಕಾರಕ ಹಾಗೂ ಕೆಲವು ಐಷಾರಾಮಿ ಉತ್ಪನ್ನಗಳಿಗೆ ಲೆವಿ ಇರಿಸಲಾಗಿದ್ದು, ಇದರಿಂದ ಬರುವ ಆದಾಯವನ್ನು ರಾಜ್ಯಗಳಿಗೆ ಜಿಎಸ್‍ಟಿಯಿಂದಾಗಿ ಆಗುತ್ತಿರುವ ನಷ್ಟವನ್ನು ಭರಿಸಲು ನೀಡಲಾಗುತ್ತಿದೆ. ಕಳೆದ 8 ತಿಂಗಳುಗಳಲ್ಲಿ ರಾಜ್ಯಗಳಿಗೆ 41,147 ಕೋಟಿ ರೂ. ಪರಿಹಾರ ನೀಡಲಾಗಿದೆ ಎಂದು ಹಣಕಾಸು ಸಚಿವಾಲಯವು ತಿಳಿಸಿದೆ.
Advertisement
ಸರಕು ಮತ್ತು ಸೇವಾ ತೆರಿಗೆ ಜಾರಿಗೆ ಬಂದ ಮೊದಲ ವರ್ಷ ವ್ಯವಸ್ಥೆಯ ಸ್ಥಿರೀಕರಣಕ್ಕೆ ಆದ್ಯತೆ ನೀಡಲಾಗಿತ್ತು. ಪ್ರಸಕ್ತ ಹಣಕಾಸು ವರ್ಷದಲ್ಲಿ ಅದರಲ್ಲಿನ ನ್ಯೂನತೆಗಳನ್ನು ಸರಿಪಡಿಸಲಾಗುವುದು. ಕಳೆದ ಎಂಟು ತಿಂಗಳಲ್ಲಿ ತಿಂಗಳ ಸರಾಸರಿ ಸಂಗ್ರಹ 89,885 ಕೋಟಿ ರೂಪಾಯಿಗಳಷ್ಟಾಗಿದೆ. ಏಪ್ರಿಲ್ 1 ರಿಂದ ಇ-ವೇ ಬಿಲ್ ಅನ್ನು ಅನುಷ್ಠಾನಕ್ಕೆ ತರಲಾಗಿದೆ. ಈ ವರ್ಷ ತೆರಿಗೆ ಸಂಗ್ರಹ ಇನ್ನಷ್ಟು ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಗಳು ಹೇಳುತ್ತಾರೆ.
Advertisement
Including the collection of July, 2017, the total GST Collections during the Financial Year 2017-18 stands provisionally at Rs. 7.41 Lakh Crore.
— Ministry of Finance (@FinMinIndia) April 27, 2018
Advertisement
This Includes Rs.1.19 lakh Crore of CGST, Rs.1.72 lakh Crore of SGST, and Rs.3.66 lakh Crore of IGST (including Rs. 1.73 Lakh Crore on Imports) and Rs. 62,021 crore of cess (including Rs. 5702 crore on imports).
— Ministry of Finance (@FinMinIndia) April 27, 2018
For these eight Months, the Average Monthly Collection has been Rs. 89,885 crore.
— Ministry of Finance (@FinMinIndia) April 27, 2018