ನವದೆಹಲಿ: ಭಾರತದಲ್ಲಿ ದ್ವಿಚಕ್ರ ವಾಹನಗಳಲ್ಲಿ ಹಿಂಬದಿ ಸವಾರಿ ಮಾಡುವ ಮಕ್ಕಳಿಗೆ ಹೆಲ್ಮೆಟ್ ಬಳಸುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ.
ಮಕ್ಕಳ ಗಾತ್ರಕ್ಕೆ ಅನುಗುಣವಾಗಿ ಹೆಲ್ಮೆಟ್ಗಳನ್ನು ತಯಾರಿಸುವಂತೆ ಹೆಲ್ಮೆಟ್ ತಯಾರಕರಿಗೆ ಸರ್ಕಾರ ಸೂಚಿಸಿದೆ. ಹೊಸ ನಿಯಮದ ಪ್ರಕಾರ ಉಲ್ಲಂಘನೆಗೆ 1,000 ರೂ. ದಂಡ ಮತ್ತು 3 ತಿಂಗಳ ಚಾಲನಾ ಪರವಾನಗಿಯನ್ನು ಅಮಾನತುಗೊಳಿಸಲಾಗುತ್ತದೆ.
Advertisement
Advertisement
ಹೊಸ ನಿಯಮಗಳನ್ನು ಕೇಂದ್ರ ಮೋಟಾರು ವಾಹನಗಳ ನಿಯಮಗಳ ಅಡಿಯಲ್ಲಿ 1989ರ ತಿದ್ದುಪಡಿಯ ಮೂಲಕ ಪ್ರಸ್ತಾಪಿಸಲಾಗಿದೆ. ಪ್ರಸ್ತಾವಣೆಯು ನಾಲ್ಕು ವರ್ಷ ವಯಸ್ಸಿನ ಮಕ್ಕಳನ್ನು ಒಳಗೊಂಡಿರುತ್ತದೆ. ಮಗುವನ್ನು ಹೊಂದಿರುವ ಯಾವುದೇ ದ್ವಿಚಕ್ರ ವಾಹನವು ಗಂಟೆಗೆ ಗರಿಷ್ಠ 40-ಕಿಮೀ ವೇಗದ ಮಿತಿಯಲ್ಲಿ ಪ್ರಯಾಣಿಸಬೇಕಾಗುತ್ತದೆ. ಇದನ್ನೂ ಓದಿ: ಹಿಜಬ್ಗಾಗಿ ಪಟ್ಟು ಹಿಡಿದ ವಿದ್ಯಾರ್ಥಿನಿಯರ ಮನವೊಲಿಸಿದ ಅಧಿಕಾರಿಗಳು
Advertisement
ದ್ವಿಚಕ್ರ ವಾಹನಗಳಲ್ಲಿ ಹಿಂಬದಿ ಕುಳಿತುಕೊಳ್ಳುವ ಮಕ್ಕಳಿಗೆ ಹೆಲ್ಮೆಟ್ ಬಳಕೆಯನ್ನು ಕಡ್ಡಾಯಗೊಳಿಸಲು ಕೇಂದ್ರ ಸರ್ಕಾರವು ಈ ಹಿಂದೆ ಪ್ರಸ್ತಾಪಿಸಿತ್ತು. ಈ ವಿಷಯದ ಬಗ್ಗೆ ನಾಗರಿಕರ ಅಭಿಪ್ರಾಯವನ್ನು ಕೇಳಲು ಅಕ್ಟೋಬರ್ 2021ರಲ್ಲಿ ಕರಡು ಅಧಿಸೂಚನೆಯನ್ನು ಹೊರಡಿಸಿತ್ತು.
Advertisement
ಮಕ್ಕಳ ಹೆಲ್ಮೆಟ್ಗಳನ್ನು ತಯಾರಿಸಲು ಸರ್ಕಾರವು ಭಾರತೀಯ ಹೆಲ್ಮೆಟ್ ತಯಾರಕರಿಗೆ ಸೂಚಿಸಿದೆ. ಮಕ್ಕಳ ಗಾತ್ರಕ್ಕೆ ಅನುಗುಣವಾಗಿ, ಸುರಕ್ಷತಾ ಜಾಕೆಟ್ಗಳಿಗೆ ಭುಜದ ಕುಣಿಕೆಗಳನ್ನು ರೂಪಿಸುವ ಒಂದು ಜೋಡಿ ಪಟ್ಟಿಗಳೊಂದಿಗೆ ತಯಾರಿಸಲಾಗುತ್ತದೆ. ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡಡ್ರ್ಸ್(ಬಿಐಎಸ್) ಪ್ರಕಾರ, ಹೆಲ್ಮೆಟ್ ಕಡಿಮೆ ತೂಕ, ಹೊಂದಾಣಿಕೆ, ಜಲನಿರೋಧಕ ಹಾಗೂ ಬಾಳಿಕೆ ಬರುವಂತಹದ್ದಾಗಿರಬೇಕು. ಇದನ್ನೂ ಓದಿ: ಚೆಂಬೆಳಕಿನ ಕವಿಯನ್ನು ಸಿನಿಮಾ ರಂಗ ಅಪ್ಪಿಕೊಳ್ಳಲಿಲ್ಲ
ಜಾಕೆಟ್ ಹೆವಿ ನೈಲಾನ್ ಅಥವಾ ಮಲ್ಟಿಫಿಲೆಮೆಂಟ್ ನೈಲಾನ್ ವಸ್ತುಗಳನ್ನು ಬಳಸಿ ನಿರ್ಮಿಸಬೇಕು. 30 ಕೆಜಿ ತೂಕವನ್ನು ಹೊರುವ ಸಾಮಥ್ರ್ಯವನ್ನು ಹೊಂದಿರಬೇಕು. ನಾಲ್ಕು ವರ್ಷದೊಳಗಿನ ಮಕ್ಕಳು ಕ್ರ್ಯಾಶ್ ಹೆಲ್ಮೆಟ್ ಅಥವಾ ಬೈಸಿಕಲ್ ಹೆಲ್ಮೆಟ್ ಅನ್ನು ಧರಿಸಬೇಕು. ಸರ್ಕಾರವು ನಿರ್ದಿಷ್ಟಪಡಿಸಿದ ಮಾನದಂಡಗಳನ್ನು ಅನುಸರಿಸಬೇಕು ಎಂದು ಸೂಚಿಸಿದೆ.