ನವದೆಹಲಿ: ಯುರೋಪ್ ಅಮೆರಿಕ ದೇಶಗಳಲ್ಲಿ ಹೆಚ್ಚುತ್ತಿರುವ ಮಂಕಿಪಾಕ್ಸ್ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ದೇಶಕ್ಕೆ ರೋಗ ನುಸುಳದಂತೆ ಪೂರ್ವಭಾವಿ ಕಾರ್ಯಗಳನ್ನು ಕೈಗೊಂಡಿದೆ. ಇಲ್ಲಿವರೆಗೆ ದೇಶದಲ್ಲಿ ಯಾವುದೇ ಮಂಕಿಪಾಕ್ಸ್ ಪ್ರಕರಣ ದಾಖಲಾಗಿಲ್ಲದಿದ್ದರೂ ರೋಗ ನಿರ್ವಹಣೆ ಕುರಿತು ಕೇಂದ್ರ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಕೇಂದ್ರದ ಮಾರ್ಗಸೂಚಿ ಪ್ರಕಾರ, ರೋಗಿ ಅಥವಾ ಅವರು ಸ್ಪರ್ಶಿಸಿದ ವಸ್ತುಗಳಿಂದ ಇತರರು 21 ದಿನಗಳವರೆಗೆ ದೂರವಿರಬೇಕು. ಸೋಂಕಿತ ರೋಗಿಯನ್ನು ಇತರರಿಂದ ಪ್ರತ್ಯೇಕಿಸುವುದು, ಉತ್ತಮ ನೈರ್ಮಲ್ಯವನ್ನು ಅಭ್ಯಾಸ ಮಾಡುವುದು, ರೋಗಿಯ ಆರೈಕೆ ಮಾಡುವ ಸಂದರ್ಭ ವೈಯಕ್ತಿಕ ರಕ್ಷಣಾ ಸಾಧನ(ಪಿಪಿಇ) ಬಳಸುವುದು ಹೀಗೆ ಹಲವು ಕ್ರಮಗಳನ್ನು ಅನುಸರಿಸಬೇಕಾಗಿ ತಿಳಿಸಿದೆ. ಇದನ್ನೂ ಓದಿ: 21 ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರ – ಕರ್ನಾಟಕಕ್ಕೆ 8 ಸಾವಿರ ಕೋಟಿ ಬಿಡುಗಡೆ
Advertisement
Advertisement
ತಡೆಗಟ್ಟುವುದು ಹೇಗೆ?
* ಸೋಂಕಿತ ವ್ಯಕ್ತಿಯನ್ನು ಇತರರಿಂದ ಪ್ರತ್ಯೇಕಿಸಿ, ಅಂತರ ಕಾಯ್ದುಕೊಳ್ಳಿ.
* ರೋಗಿಯೊಂದಿಗೆ ಸಂಪರ್ಕವಿರುವ ಹಾಸಿಗೆ ಅಥವಾ ಯಾವುದೇ ವಸ್ತುಗಳ ಸಂಪರ್ಕ ತಪ್ಪಿಸಿ.
* ಸೋಂಕಿತ ವ್ಯಕ್ತಿಗಳ ಸಂಪರ್ಕದ ಬಳಿಕ ಉತ್ತಮ ನೈರ್ಮಲ್ಯವನ್ನು ಅಭ್ಯಾಸ ಮಾಡಿ. ಉದಾಹರಣೆಗೆ, ನಿಮ್ಮ ಕೈಗಳನ್ನು ಸೋಪ್ ಹಾಗೂ ನೀರಿನಿಂದ ತೊಳೆಯುವುದು ಅಥವಾ ಆಲ್ಕೋಹಾಲ್ ಆಧಾರಿತ ಹ್ಯಾಂಡ್ ಸ್ಯಾನಿಟೈಜರ್ ಅನ್ನು ಬಳಸುವುದು.
* ರೋಗಿಗಳ ಆರೈಕೆ ಮಾಡುವಾಗ ಮಾಸ್ಕ್ ಹಾಗೂ ಕೈಗವಸುಗಳನ್ನು ಬಳಸಿ.
* ರೋಗಿಯ ಮೈಯಲ್ಲಿರುವ ಎಲ್ಲಾ ಗಾಯಗಳು ಗುಣವಾಗಿ, ಚರ್ಮದ ಹೊಸ ಪದರ ರೂಪುಗೊಳ್ಳುವವರೆಗೂ ಈ ಮುನ್ನೆಚ್ಚರಿಕೆಯನ್ನು ಮುಂದುವರಿಸಿ. ಇದನ್ನೂ ಓದಿ: ರಾಜ್ಯದಲ್ಲಿ 197 ಹೊಸ ಕೋವಿಡ್ ಪ್ರಕರಣ – 1 ಮರಣ
Advertisement
Advertisement
ಮಂಕಿಪಾಕ್ಸ್ ಪ್ರಕರಣಗಳು ಮಧ್ಯ ಹಾಗೂ ಪಶ್ಚಿಮ ಆಫ್ರಿಕಾ ದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವರದಿಯಾಗಿದೆ. ಕ್ಯಾಮರೂನ್, ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್, ಕೋಟ್ ಡಿ ಐವೋರ್, ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ, ಗ್ಯಾಬೊನ್, ಲೈಬೀರಿಯಾ, ನೈಜೀರಿಯಾ, ರಿಪಬ್ಲಿಕ್ ಆಫ್ ಕಾಂಗೋ ಹಾಗೂ ಸಿಯೆರಾ ಲಿಯೋನ್ ದೇಶಗಳಲ್ಲಿ ವ್ಯಾಪಕವಾಗಿ ಕಂಡುಬಂದಿದೆ. ಇದೀಗ ಅಮೆರಿಕ, ಯುನೈಟೆಡ್ ಕಿಂಗ್‌ಡಮ್, ಬೆಲ್ಜಿಯಂ, ಫ್ರಾನ್ಸ್, ಜರ್ಮನಿ, ಇಟಲಿ, ನೆದರ್‌ಲ್ಯಾಂಡ್ಸ್, ಪೋರ್ಚುಗಲ್, ಸ್ಪೇನ್, ಸ್ವೀಡನ್, ಆಸ್ಟ್ರೇಲಿಯಾ, ಕೆನಡಾ, ಆಸ್ಟ್ರಿಯಾ, ಇಸ್ರೇಲ್, ಸ್ವಿಟ್ಜರ್‌ಲ್ಯಾಂಡ್ ಮುಂತಾದ ದೇಶಗಳಿಗೂ ಹರಡಿದೆ.