ಉಡುಪಿ: ಹೈಸ್ಕೂಲ್ ವಿದ್ಯಾರ್ಥಿನಿಯರು ಶಾಲೆಯಿಂದ ಮನೆಗೆ ತೆರಳುತ್ತಿದ್ದಾಗ ರಸ್ತೆಯಲ್ಲಿ ಸಿಕ್ಕ 10 ಸಾವಿರ ರೂ. ಅನ್ನು ಮಾಲೀಕರಿಗೆ ಹಿಂತಿರುಗಿಸಿ ಮಾನವೀಯತೆ ಮೆರೆದಿರುವ ಘಟನೆ ಕುಂದಾಪುರ ತಾಲೂಕಿನ ಸರ್ಕಾರಿ ಶಾಲೆಯಲ್ಲಿ ನಡೆದಿದೆ.
ಕೋಣಿ ಪ್ರೌಢ ಶಾಲಾ ನಾಲ್ಕು ವಿದ್ಯಾರ್ಥಿನಿಳಾದ ಶ್ರಾವ್ಯಾ, ಐಶ್ವರ್ಯಾ.ಜೆ, ಪ್ರಸ್ತುತಿ ಮತ್ತು ವೈಷ್ಣವಿ ಪ್ರಾಮಾಣಿಕತೆ ಮೆರೆದಿದ್ದಾರೆ. ಅವರು ಶಾಲೆ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದಾಗ ರಸ್ತೆಯಲ್ಲಿ ಪ್ಲಾಸ್ಟಿಕ್ ನಲ್ಲಿ ಸುತ್ತಿದ ಪೊಟ್ಟಣ ಸಿಕ್ಕಿದೆ. ಅದನ್ನು ಈ ವಿದ್ಯಾರ್ಥಿನಿಯರು ತೆಗೆದು ನೋಡಿದಾಗ 10 ಸಾವಿರ ರೂಪಾಯಿ ಇರುವುದು ಕಂಡುಬಂದಿದೆ. ತಕ್ಷಣ ವಿದ್ಯಾರ್ಥಿನಿಯರು ಸಿಕ್ಕಿದ ಹತ್ತು ಸಾವಿರ ರೂ. ಅನ್ನು ಶಾಲಾ ಮುಖ್ಯೋಪಾಧ್ಯಾಯರಿಗೆ ಕೊಟ್ಟಿದ್ದಾರೆ. ಇದನ್ನೂ ಓದಿ: ವೀಕೆಂಡ್ ಕರ್ಫ್ಯೂ ಸದ್ಯಕ್ಕೆ ವಾಪಸ್ ಇಲ್ಲವೇ ಇಲ್ಲ: ಸಿಎಂ ಸ್ಪಷ್ಟನೆ
Advertisement
Advertisement
ಮುಖ್ಯೋಪಾಧ್ಯಯರು ವಾಟ್ಸಪ್ ಮೂಲಕ ಸಾರ್ವಜನಿಕ ಸಂದೇಶವನ್ನು ಹರಿಬಿಟ್ಟಿದ್ದಾರೆ. ನಂತರ ಈ ಹಣ ಅದೇ ಊರಿನ ಅಂಚೆ ಇಲಾಖೆಯಲ್ಲಿ ಕೆಲಸ ಮಾಡುವ ಸುಲೇಖಾ ಅವರದ್ದು ಎಂಬುದು ಗಮನಕ್ಕೆ ಬಂದಿದೆ. ಪರಿಣಾಮ ಇಂದು ಬೆಳಗ್ಗೆ ಶಾಲೆಯ ಅಸಂಬ್ಲಿ ನಡೆಯುತ್ತಿರುವ ಸಂದರ್ಭದಲ್ಲಿ ಪ್ರಾಮಾಣಿಕ ಮಕ್ಕಳಾದ ಶ್ರಾವ್ಯಾ, ಐಶ್ವರ್ಯಾ.ಜೆ, ಪ್ರಸ್ತುತಿ ಮತ್ತು ವೈಷ್ಣವಿ ಇವರು ಹಣವನ್ನು ಕಳೆದುಕೊಂಡ ಸುಲೇಖಾ ಅವರಿಗೆ ಹಸ್ತಾಂತರಿಸಿದರು.
Advertisement
ಸುಲೇಖಾ ಶಾಲೆಯ ಎಲ್ಲ ವಿದ್ಯಾರ್ಥಿಗಳಗೆ ಸಿಹಿ ವಿತರಿಸಿ ಧನ್ಯವಾದ ಸಮರ್ಪಿಸಿದರು. ಮಕ್ಕಳ ಈ ಪ್ರಾಮಾಣಿಕತನ ಎಲ್ಲರಿಗೂ ಮಾದರಿಯಾಗಬೇಕು ಎಂದು ಆಶಿಸಿದರು.
Advertisement
ಕೆ.ಜಿ.ಜಗನ್ನಾಥರಾವ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಮಾದವ ಅಡಿಗ ಈ ಕುರಿತು ಮಾತನಾಡಿದ್ದು, ನಮ್ಮ ಮಕ್ಕಳು ಪ್ರಾಮಾಣಿಕರು ಎಂದು ಹೆಮ್ಮೆಯಿಂದ ನಾನು ಹೇಳುತ್ತೇನೆ. ಇದು ನಮ್ಮ ಶಾಲೆಗೆ ಊರಿಗೆ ಮತ್ತು ರಾಜ್ಯಕ್ಕೆ ಒಂದು ಮಾದರಿ ಕೆಲಸ. ಗ್ರಾಮೀಣ ಭಾಗದ ಮಕ್ಕಳು ಕಷ್ಟದಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಮನೆಯಲ್ಲಿ ಕಷ್ಟದ ಜೀವನ ನಡೆಯುತ್ತಿರುವುದರಿಂದ ಇಂತಹ ಪ್ರಾಮಾಣಿಕತೆ ಅವರಲ್ಲಿ ಬಂದಿರಲು ಸಾಧ್ಯ ಎಂದು ಪ್ರಶಂಸಿದರು. ಇದನ್ನೂ ಓದಿ: ಕೊರೊನಾ ಜಾಗ್ರತೆ ವಹಿಸಿಕೊಂಡೇ ಮೇಕೆದಾಟು ಪಾದಯಾತ್ರೆ ಮಾಡ್ತೀವಿ: ಸಿದ್ದರಾಮಯ್ಯ
ರಸ್ತೆಯಲ್ಲಿ ಹಣ ಸಿಕ್ಕಿದ ಕೂಡಲೇ ಎರಡನೇ ಆಲೋಚಿಸದೇ ನೇರವಾಗಿ ಶಾಲೆಗೆ ಬಂದು ಹಣವನ್ನು ಕೊಟ್ಟು ಹೋಗಿದ್ದಾರೆ. ಶಿಕ್ಷಕರು ಮಕ್ಕಳು ಶಾಲಾಭಿವೃದ್ಧಿ ಸಮಿತಿ ಸಮ್ಮುಖದಲ್ಲಿ ಹಣ ಕಳೆದುಕೊಂಡವರಿಗೆ ಅದನ್ನು ಹಸ್ತಾಂತರ ಮಾಡಲಾಗಿದೆ ಎಂದು ಹೇಳಿದರು.