ನವದೆಹಲಿ: ರೈಲ್ವೆಯನ್ನು ಖಾಸಗೀಕರಣಗೊಳಿಸುವ ಯಾವುದೇ ಯೋಜನೆ ಸರ್ಕಾರದ ಮುಂದಿಲ್ಲ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸ್ಪಷ್ಟಪಡಿಸಿದರು.
ರಾಜ್ಯಸಭೆಯಲ್ಲಿ ರೈಲ್ವೆ ಬಜೆಟ್ ಅಭಿವೃದ್ಧಿಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಸದ್ಯ ಬಂಡವಾಳ ಹೂಡಿಕೆಯನ್ನು ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: IRCTC Update: 445 ರೈಲುಗಳನ್ನು ರದ್ದುಗೊಳಿಸಿದ ಭಾರತೀಯ ರೈಲ್ವೆ
2009-14ರ ಅವಧಿಯಲ್ಲಿ ರೈಲ್ವೆಯ ವಾರ್ಷಿಕ ಹೂಡಿಕೆ 45,980 ಕೋಟಿ ರೂ.ಗಳಷ್ಟಿತ್ತು. ಬಿಜೆಪಿ ಸರ್ಕಾರ ಅದನ್ನು 2014ರಲ್ಲಿ 99,511 ಕೋಟಿಗಳಿಗೆ ದ್ವಿಗುಣಗೊಳಿಸಿದೆ. ಅಲ್ಲದೆ, ಬಜೆಟ್ ಗಾತ್ರವೂ 2,45,800 ಕೋಟಿಗೆ ಹೆಚ್ಚಿದೆ.
ಇದೇ ವೇಳೆ ಬುಲೆಟ್ ಟ್ರೇನ್, ಕುರಿತು ಪ್ರಸ್ತಾಪಿಸಿದ ಅವರು, ಈಗಾಗಲೇ ೨೫ ದೇಶಗಳು ಹೈಸ್ಪೀಡ್ ಟ್ರೇನ್ ವ್ಯವಸ್ಥೆಯನ್ನು ಅಳವಡಿಸಿಕೊಂಡಿವೆ. ಜಪಾನ್‌ನಲ್ಲಿ `ಇ-3′ ಸಿರೀಸ್ ಟ್ರೇನ್ ಚಾಲ್ತಿಯಲ್ಲಿದ್ದು, ಅದನ್ನು ಭಾರತಕ್ಕೆ ತರಲು ಚಿಂತನೆ ನಡೆಸಲಾಗುತ್ತಿದೆ ಎಂದು ವಿವರಿಸಿದರು. ಇದನ್ನೂ ಓದಿ: ರೈಲ್ವೆ ಯೋಜನೆಗೆ 3ಎಕರೆ ಜಮೀನು ಕಳೆದುಕೊಂಡ ರೈತ ಮನನೊಂದು ಆತ್ಮಹತ್ಯೆ
ಇದೇ ವೇಳೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ರಾಜ್ಯಸಭೆಯಲ್ಲಿ ಅಪರೂಪವಾಗಿ ಕಾಣಿಸಿಕೊಂಡಿದ್ದು, ಕರ್ನಾಟಕದಲ್ಲಿ ಹಲವಾರು ಯೋಜನೆಗಳನ್ನು ಪೂರ್ಣಗೊಳಿಸುವಂತೆ ರೈಲ್ವೆ ಸಚಿವರನ್ನು ಒತ್ತಾಯಿಸಿದರು.