ಸರ್ಕಾರಿ ನೌಕರರು 2ನೇ ಮದುವೆಯಾಗುವಂತಿಲ್ಲ – ಅಸ್ಸಾಂ ಸರ್ಕಾರ ಆದೇಶ

Public TV
1 Min Read
Himanta Biswa Sarma

ದಿಸ್ಪುರ್: ಸರ್ಕಾರಿ ನೌಕರರು (Government Employees) 2ನೇ ಮದುವೆಯಾಗುವುದನ್ನು ಅಸ್ಸಾಂ (Assam) ಸರ್ಕಾರ ನಿರ್ಬಂಧಿಸಿದೆ. ಸರ್ಕಾರಿ ನೌಕರನ ಧರ್ಮ 2ನೇ ಮದುವೆಗೆ (2nd Marriage) ಅನುಮತಿಸಿದರೂ ಸರ್ಕಾರದ ಅನುಮತಿ ಇಲ್ಲದೇ 2ನೇ ಮದುವೆ ಮಾಡಿಕೊಳ್ಳುವಂತಿಲ್ಲ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ಹೇಳಿದ್ದಾರೆ.

2 ಮದುವೆಗಳಿಂದ ಸರ್ಕಾರಿ ನೌಕರನ ಪಿಂಚಣಿಗಾಗಿ ಇಬ್ಬರು ಪತ್ನಿಯರು ಹೋರಾಟ ಮಾಡುವುದನ್ನು ನಾವು ಗಮನಿಸಿದ್ದೇವೆ. ಅಸ್ಸಾಂನಲ್ಲಿ ಈ ಕಾನೂನು ಮೊದಲೇ ಇತ್ತು. ಅದನ್ನು ಕಠಿಣವಾಗಿ ಜಾರಿಗೆ ನಿರ್ಧಾರ ಮಾಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.

Himanta Biswa Sarma

ಬಹುಪತ್ನಿತ್ವವನ್ನು ನಿಷೇಧಿಸುವ ಕಾನೂನು 58 ವರ್ಷಗಳ ಹಿಂದೆ ಅಸ್ಸಾಂನಲ್ಲಿ ಜಾರಿ ಮಾಡಲಾಗಿತ್ತು. ಮೊದಲ ಸಂಗಾತಿಯು ಜೀವಂತವಾಗಿರುವವರೆಗೆ ಸರ್ಕಾರದ ಒಪ್ಪಿಗೆಯಿಲ್ಲದೆ 2ನೇ ಮಹಿಳೆಯನ್ನು ಮದುವೆಯಾಗುವುದನ್ನು ಕಾನೂನು ನಿರ್ಬಂಧಿಸುತ್ತದೆ.

ಮುಸ್ಲಿಮರನ್ನು ಉಲ್ಲೇಖಿಸದೆ ವೈಯಕ್ತಿಕ ಕಾನೂನಿನಿಂದ ಅನುಮತಿ ಪಡೆದ ಪುರುಷರಿಗೂ ಈ ನಿಯಮ ಅನ್ವಯಿಸುತ್ತದೆ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ. ಅದೇ ರೀತಿ ಮಹಿಳಾ ನೌಕರರು ಈ ಮೊದಲು ಮದುವೆಯಾಗಿರುವ ವ್ಯಕ್ತಿಯನ್ನು 2ನೇ ಮದುವೆಯಾಗಬಾರದು ಎಂದು ಸೂಚಿಸಲಾಗಿದೆ. ಇದನ್ನೂ ಓದಿ: ಭಾರತದ ಕಾನೂನು ಬದಲಿಸುವ ಮೂರು ಮಸೂದೆಗಳು ಶೀಘ್ರದಲ್ಲಿ ಅಂಗೀಕಾರ: ಅಮಿತ್ ಶಾ

ಅಕ್ಟೋಬರ್ 20 ರಂದು ಸಿಬ್ಬಂದಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೀರಜ್ ವರ್ಮಾ ಅವರು ಅಧಿಸೂಚನೆ ಹೊರಡಿಸಿದ್ದು, ಇದು ಗುರುವಾರ ಬೆಳಕಿಗೆ ಬಂದಿದೆ. ಅಸ್ಸಾಂ ನಾಗರಿಕ ಸೇವೆಗಳ (ನಡತೆ) ನಿಯಮಗಳು 1965 ರ ನಿಯಮ 26 ರ ನಿಬಂಧನೆಗಳ ಪ್ರಕಾರ ಮಾರ್ಗಸೂಚಿಗಳನ್ನು ನೀಡಲಾಗಿದೆ ಎಂದು ಅದು ಹೇಳಿದೆ. ಮೇಲಿನ ನಿಬಂಧನೆಗಳ ಅನ್ವಯ ಶಿಸ್ತು ಸಮಿತಿ ಪ್ರಾಧಿಕಾರವು ತಕ್ಷಣದ ಇಲಾಖಾ ಪ್ರಕ್ರಿಯೆಗಳನ್ನು ಪ್ರಾರಂಭಿಸಬಹುದು. ಕಡ್ಡಾಯ ನಿವೃತ್ತಿ ಸೇರಿದಂತೆ ಪ್ರಮುಖ ದಂಡವನ್ನು ವಿಧಿಸಲು ಆದೇಶದಲ್ಲಿ ಹೇಳಿದೆ. ಇದನ್ನೂ ಓದಿ: IPL 2024 – ದುಬೈನಲ್ಲಿ ಹರಾಜು

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article