ಬೆಳಗಾವಿ: ರಾಜ್ಯದಲ್ಲಿ ಮುಡಾ, ವಾಲ್ಮೀಕಿ ಹಗರಣದಲ್ಲಿ ಸರ್ಕಾರ ಮುಳುಗಿ ಹೋಗಿದೆ. ಇದರಿಂದ ಕಾಂಗ್ರೆಸ್ ರಾಜ್ಯದಲ್ಲಿ ನಿರ್ಣಾಮವಾಗಲಿದೆ. ರಾಜ್ಯ ಸರಕಾರ ತನ್ನ ತಪ್ಪಿನಿಂದ ಪತನಗೊಳ್ಳಲಿದೆ ಎಂದು ಸಂಸದ ಜಗದೀಶ ಶೆಟ್ಟರ್ (Jagadish Shettar) ಭವಿಷ್ಯ ನುಡಿದರು.
ಬೆಳಗಾವಿಯಲ್ಲಿ (Belagavi) ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ (Congress) ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಮುಖ್ಯಮಂತ್ರಿ ಬದಲಾವಣೆಯ ಚರ್ಚೆ ನಡೆದಿದೆ. ಇಲ್ಲಿಯವರೆಗೂ ಒಳಗಡೆ ನಡೆಯುತ್ತಿದ್ದ ಚರ್ಚೆ ಈಗ ಬಹಿರಂಗವಾಗಿ ನಡೆಯುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟ ಕೇಂದ್ರ ಸರ್ಕಾರದ ವೈಫಲ್ಯ: ಶಾಸಕ ರಂಗನಾಥ್
Advertisement
Advertisement
ಒಳಗಡೆ ನಾವು ಸಿದ್ದರಾಮಯ್ಯ (CM Siddaramaiah) ಅವರ ಪರವಾಗಿದ್ದೇವೆ. ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಎಂದು ಸಚಿವರು, ಕಾಂಗ್ರೆಸ್ ನಾಯಕರು ಹೇಳಿಕೆ ನೀಡುತ್ತಿದ್ದಾರೆ. ಆದರೆ ತೆರೆಮರೆಯಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾತು ಜೋರಾಗಿ ನಡೆಯುತ್ತಿದೆ. ರಾಜ್ಯದಲ್ಲಿ ಈಗ ಹತ್ತಾರು ಮುಖ್ಯಮಂತ್ರಿಗಳು ಹುಟ್ಟಿಕೊಂಡಿದ್ದಾರೆ ಎಂದರು. ಇದನ್ನೂ ಓದಿ: ಸಿಎಂ ಸ್ಥಾನ ಖಾಲಿ ಇಲ್ಲ – ಖಾಲಿ ಇಲ್ಲದ ಸ್ಥಾನದ ಬಗ್ಗೆ ಚರ್ಚೆ ಅಪ್ರಸ್ತುತ: ಡಾ.ರಂಗನಾಥ್
Advertisement
Advertisement
ನಾವು ಆಪರೇಷನ್ ಕಮಲ ಮಾಡುವುದು ಬೇಕಾಗಿಲ್ಲ. ಅವರ ಶಾಸಕ, ಸಚಿವರೇ ಒಬ್ಬರಿಗೊಬ್ಬರು ಕಾಲು ಎಳೆಯುವುದು ಆರಂಭವಾಗಿದೆ. ಬೆಳಗಾವಿ ಮಹಾನಗರ ಪಾಲಿಕೆಯ ಆರ್ಥಿಕ ದಿವಾಳಿಯಾಗುವ ಪ್ರಶ್ನೆಗೆ ಉತ್ತರಿಸಿದ ಅವರು, ಪಾಲಿಕೆಯನ್ನು ಆರ್ಥಿಕವಾಗಿ ಸುಧಾರಣೆ ಮಾಡಲು ನನ್ನಿಂದ ಮಾತ್ರ ಸಾಧ್ಯವಿಲ್ಲ. ಎಲ್ಲರ ಜೊತೆಗೆ ಚರ್ಚೆ ಮಾಡಿ ತೀರ್ಮಾನ ಮಾಡಬೇಕಿದೆ. ಅಧಿಕಾರಿಗಳ ಯಡವಟ್ಟಿನಿಂದ ಸಮಸ್ಯೆ ಆಗಿದೆ. ಅಧಿಕಾರಿಗಳ ಮೇಲೆ ನಿಯಂತ್ರಣ ಇಲ್ಲದೇ ಇದ್ದರೆ ಈ ರೀತಿಯ ಸಮಸ್ಯೆ ಆಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಪ್ರತಿಭಟನೆ ನಿಲ್ಲಿಸಿ, ದುರ್ಗಾಪೂಜೆಗೆ ಗಮನ ಹರಿಸಿ – ದೀದಿ ಹೇಳಿಕೆಗೆ ಮೃತ ಟ್ರೈನಿ ವೈದ್ಯೆಯ ತಾಯಿ ಆಕ್ರೋಶ