ನವದೆಹಲಿ: ಒಂದು ದೇಶ ಒಂದು ಚುನಾವಣೆಗೆ (One Nation, One Election) ಸಂಬಂಧಿಸಿದ ಮಸೂದೆ ಈ ಬಾರಿ ಲೋಕಸಭಾ ಅಧಿವೇಶನದಲ್ಲಿ (Lok Sabha Session) ಮಂಡನೆಯಾಗುವುದು ಅನುಮಾನ ಎನ್ನಲಾಗುತ್ತಿದೆ.
ಒಂದು ದೇಶ ಒಂದು ಚುನಾವಣೆಗೆ ಸಂಬಂಧಿಸಿದ ಮಸೂದೆ ಲೋಕಸಭೆಯಲ್ಲಿ ಮಂಡಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರವೇ ಹೇಳಿತ್ತು. ಆದರೆ ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಪುನರಾಲೋಚನೆಯಲ್ಲಿ ತೊಡಗಿದಂತೆ ಕಂಡುಬಂದಿದೆ.
Advertisement
Advertisement
ಲೋಕಸಭೆ ಕಲಾಪದ ಪಟ್ಟಿಯಿಂದ ದಿಢೀರ್ ಎಂದು ಇದಕ್ಕೆ ಸಂಬಂಧಿಸಿದ ಮಸೂದೆಗಳನ್ನು ಕೈಬಿಡಲಾಗಿದೆ. ಹೀಗಾಗಿ ಪ್ರಸಕ್ತ ಅಧಿವೇಶನದಲ್ಲಿ ಈ ಮಸೂದೆ ಮಂಡನೆ ಆಗುತ್ತಾ ಆಗಲ್ವಾ ಎಂಬ ಬಗ್ಗೆ ಸದ್ಯ ಸಂದಿಗ್ಧತೆ ನೆಲೆಸಿದೆ. ಇದನ್ನೂ ಓದಿ: Delhi assembly polls: ಎಎಪಿ ಅಂತಿಮ ಪಟ್ಟಿ ರಿಲೀಸ್ – ನವದೆಹಲಿಯಿಂದ ಕೇಜ್ರಿವಾಲ್ ಕಣಕ್ಕೆ
Advertisement
ಈ ಮಧ್ಯೆ, ಒಂದು ದೇಶ ಒಂದು ಚುನಾವಣೆ ಹೊಸದಲ್ಲ. ದೇಶದಲ್ಲಿ ಮೂರು ಬಾರಿ ಏಕಕಾಲದಲ್ಲಿ ಚುನಾವಣೆ ನಡೆದಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (amit sha) ಹೇಳಿದ್ದಾರೆ. ಈ ಮೂಲಕ ಏಕಚುನಾವಣೆ ವಿರೋಧಿಸುತ್ತಿರುವ ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.
Advertisement
ಕೆಲ ದಿನಗಳ ಹಿಂದೆ ನಡೆದ ಸಂಪುಟ ಸಭೆಯಲ್ಲಿ ಕೋವಿಂದ್ (Ram Nath Kovind) ಸಮಿತಿ ಶಿಫಾರಸುಗಳ ಪೈಕಿ ಸಾಂವಿಧಾನಿಕ ತಿದ್ದುಪಡಿ ಅಗತ್ಯವಿರುವ ಮಸೂದೆಯನ್ನು ಪರಿಗಣಿಸಿಲ್ಲ. ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಚಾರವನ್ನು ಪಕ್ಕಕ್ಕೆ ಇಟ್ಟಿರುವ ಕೇಂದ್ರ ಸರ್ಕಾರ, ಸದ್ಯಕ್ಕೆ ಏಕಕಾಲದಲ್ಲಿ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆ ನಡೆಸಲು ಅನುವು ಮಾಡಿಕೊಡುವ ಮಸೂದೆ ಮಂಡಿಸಲು ತೀರ್ಮಾನಿಸಿದೆ. ಇದಕ್ಕೆ ಅರ್ಧದಷ್ಟು ರಾಜ್ಯಗಳು ಅನುಮೋದನೆ ನೀಡುವ ಅಗತ್ಯ ಇರುವುದಿಲ್ಲ.
ಸ್ಥಳೀಯ ಚುನಾವಣೆಗಳ (Election) ಜೊತೆಗೆ ಲೋಕಸಭೆ, ಅಸೆಂಬ್ಲಿ ಚುನಾವಣೆ ನಡೆಸುವುದಾದರೆ ಮಾತ್ರ ಸಂವಿಧಾನಿಕ ತಿದ್ದುಪಡಿ ಮತ್ತು 50% ರಾಜ್ಯಗಳ ಒಪ್ಪಿಗೆ ಪಡೆಯಬೇಕಿದೆ. ಕೇಂದ್ರದ ನಡೆಗೆ ವಿಪಕ್ಷಗಳಿಂದ ವಿರೋಧ ವ್ಯಕ್ತವಾಗಿದೆ.