ಮಂಗಳೂರು: ಮಹದಾಯಿ ವಿಚಾರದ ಹಿನ್ನೆಲೆಯಲ್ಲಿ ಇಂದು ಕರೆ ನೀಡಲಾಗಿರುವ ಕರ್ನಾಟಕ ಬಂದ್ ಗೆ ಬೆಂಬಲ ನೀಡದಿದ್ದರೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರ್ಕಾರಿ ಬಸ್ ಸೇವೆ ಬಂದ್ ಆಗಿದೆ.
KSRTC ಅಧಿಕಾರಿಗಳ ಸೂಚನೆಯ ಮೇರೆಗೆ ಬಸ್ ಬಂದ್ ಆಗಿದ್ದು, ಬಂದ್ ಗೆ ಬೆಂಬಲ ಇಲ್ಲದಿದ್ದರೂ ಅಧಿಕಾರಿಗಳು ಬಸ್ ಬಂದ್ ಮಾಡಿರುವುದರಿಂದ ಅವರ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Advertisement
ಅಧಿಕಾರಿಗಳ ಈ ಸೂಚನೆಯಿಂದ ಸರ್ಕಾರಿ ಬಸ್ ಬಂದ್ ಆಗಿದ್ದು, ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲೂ ಸರ್ಕಾರಿ ಬಸ್ ಸೇವೆ ಬಂದ್ ಆಗಿದೆ. ಇದರಿಂದ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಪರದಾಡುತ್ತಿದ್ದು, ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.
Advertisement
Advertisement
ಮಂಗಳೂರಿನಲ್ಲಿ ಕರ್ನಾಟಕ ಬಂದ್ ಗೆ ಬೆಂಬಲ ನೀಡಿಲ್ಲ. ಇಲ್ಲಿನ ವರ್ತಕರಿಂದ ನೋ ಬಂದ್ ಡೇ ಆಚರಣೆ ಮಾಡಲಾಗ್ತಿದೆ. ಎಲ್ಲಾ ಅಂಗಡಿ ಮುಂಗಟ್ಟುಗಳ ಮುಂದೆ ಬಂದ್ ಇಲ್ಲ ಎಂಬ ಪೋಸ್ಟರ್ ಹಾಕಲಾಗಿದೆ. ನಮಗೆ ನೀರಿಲ್ಲ, ನಮಗೆ ನೋವಿದೆ. ಹಾಗಂತ ಪದೇ ಪದೇ ಬಂದ್ ಮಾಡಿ ನಮ್ಮ ಹೊಟ್ಟೆ ಮೇಲೆ ಹೊಡೀಬೇಡಿ. ಈ ಬಾರಿ ಬಂದ್‍ಗೆ ನಮ್ಮ ಬೆಂಬಲ ಇಲ್ಲ ಎಂದು ಪೋಸ್ಟರ್ ಅಂಟಿಸಲಾಗಿದೆ. ಮಂಗಳೂರಿನಲ್ಲಿ ಜನಜೀವನ ಎಂದಿನಂತೆ ಆರಂಭವಾಗಿದೆ. ಬೆಳಗ್ಗೆ 11 ಗಂಟೆಗೆ ಕರವೇ ಯಿಂದ ರೈಲ್ವೆ ತಡೆದು ಸಾಂಕೇತಿಕ ಪ್ರತಿಭಟನೆ ನಡೆಯಲಿದೆ. ಇದನ್ನು ಓದಿ: ಮಂಗಳೂರು, ಕೊಪ್ಪಳ, ವಿಜಯಪುರದಲ್ಲಿ ಬಂದ್ ಗೆ ಇಲ್ಲ ಬೆಂಬಲ- ಜನಜೀವನ ಎಂದಿನಂತೆ ಆರಂಭ
Advertisement