ನವದೆಹಲಿ: ಅಡುಗೆ ಎಣ್ಣೆಯ ಬೆಲೆಯು ಒಂದು ವಾರದಲ್ಲಿ ಪ್ರತಿ ಲೀಟರ್‌ಗೆ 10 ರಿಂದ 15 ರೂಪಾಯಿವರೆಗೆ ಇಳಿಕೆಯಾಗಲಿದೆ. ಒಂದು ವಾರದಲ್ಲಿ ಎಂಆರ್‌ಪಿಯನ್ನು ಇಳಿಸುವಂತೆ ಅಡುಗೆ ಎಣ್ಣೆ ತಯಾರಿಕ ಕಂಪೆನಿಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ.
ದೇಶಕ್ಕೆ ಅಗತ್ಯವಿರುವ ಅಡುಗೆ ಎಣ್ಣೆಯಲ್ಲಿ ಶೇ 60ರಷ್ಟು ವಿದೇಶಗಳಿಂದ ಆಮದಾಗುತ್ತದೆ. ಅಡುಗೆ ಎಣ್ಣೆ ತಯಾರಕ ಕಂಪನಿಗಳು ಹಿಂದಿನ ತಿಂಗಳು ಎಂಆರ್‌ಪಿಯನ್ನು ಲೀಟರ್‌ಗೆ 10 ರಿಂದ 15ರವರೆಗೆ ತಗ್ಗಿಸಿದ್ದವು. ಇದೀಗ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ ಬೆಲೆಯು ಇನ್ನಷ್ಟು ಕಡಿಮೆಯಾಗಿರುವ ಹಿನ್ನೆಲೆ ಕೇಂದ್ರ ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ ಅವರು ಪ್ರಮುಖ ಕಂಪನಿಗಳು, ತಯಾರಕರೊಂದಿಗೆ ಈ ವಿಚಾರವಾಗಿ ಸಭೆ ನಡೆಸಿದ್ದಾರೆ. ಇದನ್ನೂ ಓದಿ: ಹಾವೇರಿಯಲ್ಲಿ ನಿರಂತರ ಮಳೆ – ಬ್ರಿಡ್ಜ್ ಕಂ ಬ್ಯಾರೇಜ್ ಮೇಲಿನ ಸಂಪರ್ಕ ಕಡಿತ
ಜಾಗತಿಕ ಮಟ್ಟದಲ್ಲಿ ಅಡುಗೆ ಎಣ್ಣೆಗಳ ಬೆಲೆ ಒಂದು ವಾರದಲ್ಲಿ ಶೇಕಡ 10ರಷ್ಟು ಇಳಿದಿದೆ. ಹೀಗಾಗಿ ಎಂಆರ್‌ಪಿಯನ್ನು ಇಳಿಸಬೇಕು ಎಂದು ಹೇಳಿದ್ದೇವೆ. ಆಮದು ಮಾಡಿಕೊಳ್ಳುವ ತಾಳೆ ಎಣ್ಣೆ, ಸೋಯಾ ಎಣ್ಣೆ ಮತ್ತು ಸೂರ್ಯಕಾಂತಿ ಎಣ್ಣೆ ಎಂಆರ್‌ಪಿಯನ್ನು ಮುಂದಿನ ವಾರದೊಳಗೆ ಲೀಟರಿಗೆ 10ರೂ. ರವರೆಗೆ ಇಳಿಸುವುದಾಗಿ ಪ್ರಮುಖ ತಯಾರಕರು ಭರವಸೆ ನೀಡಿದ್ದಾರೆ. ಈ ಎಣ್ಣೆಗಳ ಬೆಲೆ ಇಳಿಕೆಯಾದ ನಂತರ, ಇತರ ಅಡುಗೆ ಎಣ್ಣೆಗಳ ಬೆಲೆಯಲ್ಲಿಯೂ ಇಳಿಕೆ ಆಗಲಿದೆ ಎಂದು ತಿಳಿಸಿದ್ದಾರೆ.
ಒಂದೇ ಬ್ರ್ಯಾಂಡ್‍ನ ಎಣ್ಣೆಗಳ ಬೆಲೆಯು ದೇಶದಾದ್ಯಂತ ಏಕರೂಪತೆ ಇರಬೇಕು ಎಂದು ತಯಾರಕರಿಗೆ ಹೇಳಲಾಗಿದೆ. ಇದಕ್ಕೆ ಕಂಪನಿಗಳು ಒಪ್ಪಿಗೆ ಸೂಚಿಸಿವೆ ಎಂದಿದ್ದಾರೆ. ಇದನ್ನೂ ಓದಿ: ಭಾರತಕ್ಕೆ ನುಸುಳಿದ ಪಾಕಿಸ್ತಾನಿ ಮೀನುಗಾರರು- ನಾಲ್ವರ ಬಂಧನ