ತಿರುವನಂತಪುರಂ: ಸೌಮ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿ ಶುಕ್ರವಾರ ಕೇರಳದ ಕಣ್ಣೂರು ಕೇಂದ್ರ ಕಾರಾಗೃಹದಿಂದ (Kannur Central Jail) ಪರಾರಿಯಾಗಿದ್ದು, ಕೆಲವೇ ಗಂಟೆಗಳಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಆರೋಪಿ ಗೋವಿಂದಚಾಮಿಯು (Govindachamy) ಇಂದು ಬೆಳಗ್ಗೆ (ಜು.25) ಕಣ್ಣೂರು ಸೆಂಟ್ರಲ್ ಜೈಲಿನಿಂದ ತಪ್ಪಿಸಿಕೊಂಡಿದ್ದ. ಸೆಲ್‌ನಲ್ಲಿ ನಿಯಮಿತ ತಪಾಸಣೆ ನಡೆಸುತ್ತಿದ್ದಾಗ ಗೋವಿಂದಚಾಮಿಯು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿತ್ತು. ಜೈಲು ಅಧಿಕಾರಿಗಳು ತಕ್ಷಣ ಜೈಲಿನ ಸುತ್ತಮುತ್ತ ಆತನಿಗಾಗಿ ಹುಡುಕಾಟ ನಡೆಸಿದ್ದರು. ಆತ ಎಲ್ಲಿಯೂ ಪತ್ತೆಯಾಗಿರಲಿಲ್ಲ. ಇದನ್ನೂ ಓದಿ: ಬಿಹಾರ ಮಾತ್ರವಲ್ಲ ದೇಶಾದ್ಯಂತ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಗೆ ಮುಂದಾದ ಚುನಾವಣಾ ಆಯೋಗ
ಗೋವಿಂದಚಾಮಿಯು ಜೈಲಿನಿಂದ ತಪ್ಪಿಸಿಕೊಂಡು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ದೃಶ್ಯವು ಕೆಲವು ಅಂಗಡಿಗಳ ಸಿಸಿಟಿವಿ ಕ್ಯಾಮೆರಾ ಸೆರೆಯಾಗಿತ್ತು. ಬಳಿಕ ಹುಡುಕಾಟ ಚುರುಕುಗೊಳಿಸಿದ ಪೊಲೀಸರು, ಕಣ್ಣೂರು ನಗರ ವ್ಯಾಪ್ತಿಯ ತಲಾಪ್‌ನಲ್ಲಿರುವ ಪಾಳುಬಿದ್ದ ಕಟ್ಟಡದ ಬಳಿಯ ಬಾವಿಯೊಳಗೆ ಅಡಗಿಕೊಂಡಿದ್ದ. ಆತನನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: Ullu, ALTT ಬಾಲಾಜಿ ಸೇರಿದಂತೆ 25 OTT ಪ್ಲಾಟ್‌ಫಾರಂಗಳು ಬ್ಯಾನ್
ಈ ಬಗ್ಗೆ ಕಣ್ಣೂರು ನಗರ ಪೊಲೀಸ್ ಆಯುಕ್ತ ನಿಧಿನ್ ರಾಜ್ ಮಾತನಾಡಿ, ಪ್ರಾಥಮಿಕ ತನಿಖೆಯಲ್ಲಿ, ಆರೋಪಿ ಗೋವಿಂದಚಾಮಿಯು ಮಧ್ಯರಾತ್ರಿ 1 ಗಂಟೆಗೆ ಪರಾರಿಯಾಗಿದ್ದ. ಜೈಲು ಅಧಿಕಾರಿಗಳಿಗೆ ಬೆಳಗ್ಗೆ 5 ಗಂಟೆಗೆ ಸುಮಾರಿಗೆ ಈ ವಿಚಾರ ತಿಳಿದಿತ್ತು. 7 ಗಂಟೆ ಸುಮಾರಿಗೆ ಕಣ್ಣೂರು ಪಟ್ಟಣ ಪೊಲೀಸರಿಗೆ (Kannur Town Police) ಮಾಹಿತಿ ನೀಡಲಾಗಿತ್ತು. ಜೈಲಿನ ಗೋಡೆಯ ಮೇಲೆ ವಿದ್ಯುತ್ ಬೇಲಿ ಹಾಕಲಾಗಿತ್ತು. ಆರೋಪಿಯು ಜೈಲಿನಿಂದ ಪರಾರಿಯಾಗುವಾಗ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಪ್ರೀತಿಸಿ ರಿಜಿಸ್ಟರ್ ಮ್ಯಾರೇಜ್ ಆಗಿದ್ದವಳು ಅನುಮಾನಾಸ್ಪದ ಸಾವು – ಪತಿ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ
ಈ ಸಂಬಂಧ ಸೌಮ್ಯಳ ತಾಯಿ ಪ್ರತಿಕ್ರಿಯಿಸಿ, ಕಣ್ಣೂರು ಜೈಲು ದೊಡ್ಡದಾಗಿದೆ. ಅಲ್ಲಿಂದ ಅವನು ಹೇಗೆ ಹಾರಿ ತಪ್ಪಿಸಿಕೊಳ್ಳಲು ಸಾಧ್ಯ? ಯಾರದೋ ಬೆಂಬಲವಿಲ್ಲದೇ ಆತ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಜೈಲಿನಲ್ಲಿರುವ ಯಾರೋ ಆತನಿಗೆ ಸಹಾಯ ಮಾಡುತ್ತಿದ್ದಾರೆ. ಆತ ಎಡಗೈಯನ್ನು ಕಳೆದುಕೊಂಡಿದ್ದು, ಅಷ್ಟು ದೊಡ್ಡ ಗೋಡೆಯನ್ನು ಹಾರಿ ತಪ್ಪಿಸಿಕೊಳ್ಳಲು ಅಸಾಧ್ಯ ಎಂದು ಆರೋಪಿಸಿದ್ದಾರೆ.
ಫೆಬ್ರವರಿ 1, 2011ರಂದು ಎರ್ನಾಕುಲಂನಿಂದ ಶೋರನೂರಿಗೆ ಹೋಗುವ ಪ್ಯಾಸೆಂಜರ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ 23 ವರ್ಷದ ಸೌಮ್ಯಾ ಮೇಲೆ ಆರೋಪಿ ಗೋವಿಂದಚಾಮಿಯು ಅತ್ಯಾಚಾರವೆಸಗಿ, ಆಕೆಯನ್ನು ಕೊಲೆ ಮಾಡಿದ್ದ.