ಬೆಳಗಾವಿ: ರಾಜ್ಯದಲ್ಲಿ ಬೆಂಗಳೂರು ಬಿಟ್ಟರೆ ಬೆಳಗಾವಿ ನಗರಕ್ಕೆ ಮಹತ್ವ ಇದೆ ಎಂದು ಬಿಜೆಪಿ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.
Advertisement
ಸೆ. 3ರಂದು ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ಮಹಾನಗರ ಪಾಲಿಕೆಗೆ 58 ವಾರ್ಡ್‍ಗಳ ಪೈಕಿ 56 ವಾರ್ಡ್‍ಗಳಲ್ಲಿ ಸ್ಪರ್ಧೆಯಾಗುತ್ತಿದೆ. ಬೆಳಗಾವಿ ಸುತ್ತಮುತ್ತ ನಾಲ್ಕು ಆಹಾರ ಸಂಸ್ಕರಣಾ ಘಟಕ ಸ್ಥಾಪನೆಯಾಗಬೇಕು. ಒಂದೂವರೆ ವರ್ಷದೊಳಗಾಗಿ ಸ್ಮಾರ್ಟ್ ಸಿಟಿ ಯೋಜನೆ ಪೂರ್ಣಗೊಳಿಸುತ್ತೇವೆ. ರಾಜ್ಯದಲ್ಲಿ ಬೆಂಗಳೂರು ಬಿಟ್ಟರೆ ಬೆಳಗಾವಿ ನಗರಕ್ಕೆ ಮಹತ್ವ ಇದೆ ಎಂದು ಹೇಳಿದ್ದಾರೆ.ಇದನ್ನೂ ಓದಿ:ಮೊಹರಂ, ಪೀರದೇವರು ಹಬ್ಬ – ದೇವರ ದರ್ಶನ ಪಡೆಯಲು ಮುಗಿಬಿದ್ದ ಜನ
Advertisement
ಬಿಜೆಪಿಯಿಂದ ಉಚಿತ ಶವ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಿರುವ ವಿಚಾರವಾಗಿ ಮಾತನಾಡಿದ ಅವರು, ಬಡವರು, ನಿರ್ಗತಿಕರು ಶವಸಂಸ್ಕಾರಕ್ಕೆ ಹಣ ಇಲ್ಲದವರು ಇದ್ದಾರೆ. ಕೆಲವರು ಶವಸಂಸ್ಕಾರಕ್ಕೆ ಹಣಕ್ಕೆ ಕೈವೊಡ್ಡಿದವರು ಇದ್ದಾರೆ. ಅವರಿಗೆ ಅನುಕೂಲ ಆಗಲಿ ಎಂದು ಪ್ರಣಾಳಿಕೆಯಲ್ಲಿ ‘ಉಚಿತ ಅಂತ್ಯಸಂಸ್ಕಾರ’ ಎಂದು ಹೇಳಿದ್ದಾರೆ. ಇದರಿಂದ ಸಾರ್ವಜನಿಕರ ಮನಸ್ಸಿಗೆ ನೋವಾಗಿದರೆ ಕ್ಷಮಿಸಿ ಎಂದು ಕೇಳಿಕೊಂಡಿದ್ದಾರೆ.ಇದನ್ನೂ ಓದಿ:ಒಂದು ವರ್ಷದಿಂದ ಇವರು ಬಾಯಿ ಮುಚ್ಚಿದ್ರು: ಡಿಕೆಶಿ ವಿರುದ್ಧ ಅನಿಲ್ ಬೆನಕೆ ವಾಗ್ದಾಳಿ
Advertisement
Advertisement
ನಮ್ಮವರು ಅಚಾತುರ್ಯದಿಂದ ಮಾಡಿದರೆ, ಜನರ ಮನಸ್ಸಿಗೆ ನೋವಾಗಿದೆ ವಿಷಾದಿಸುತ್ತೇನೆ. ಡಿ.ಕೆ ಶಿವಕುಮಾರ್ ಪಕ್ಷ ಈ ದೇಶದಲ್ಲಿ ಅರವತ್ತು ವರ್ಷ ಆಡಳಿತ ಮಾಡಿದೆ. ಏನು ಸಾಧನೆ ಮಾಡಿದೆ ಹೇಳು ಮಾರಾಯಾ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿಗೆ ಪ್ರಶ್ನಿಸಿದ್ದಾರೆ. ಸುರೇಶ್ ಅಂಗಡಿ ಅವರ ಸಾವು ಕೋವಿಡ್‍ನಿಂದ ಆಗಿರುವುದು ಎಂದು ಎಲ್ಲರಿಗೂ ಗೊತ್ತಿದೆ. ಕೋವಿಡ್ ನಿಯಮ ಎಲ್ಲರಿಗೂ ಒಂದೇ ಇದರಲ್ಲಿ ರಾಜಕಾರಣ ಮಾಡಬಾರದು ಎಂದು ತಿಳಿಸಿದ್ದಾರೆ
ಚುನಾವಣೆ ನಂತರ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಕರೆದುಕೊಂಡು ಚೆನ್ನಮ್ಮ ವಿವಿ ಹೊಸ ಕಟ್ಟಡಕ್ಕೆ ಅಡಿಗಲ್ಲು ಸಮಾರಂಭ ಮಾಡಿಸುತ್ತೇವೆ. ನಗರದಲ್ಲಿ ಮನೆ ಇಲ್ಲದವರಿಗೆ ಮನೆ ಕೊಡುವ ವ್ಯವಸ್ಥೆ ಮಾಡುತ್ತೇವೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಇಡೀ ವಿಶ್ವ ಮೆಚ್ಚುವಂತಹ ಕೆಲಸ ಮಾಡಿದ್ದಾರೆ. ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಒಳ್ಳೆ ಕೆಲಸ ಮಾಡಲು ಆರಂಭಿಸಿದ್ದಾರೆ ಎಂದು ತಿಳಿಸಿದರು.ಇದನ್ನೂ ಓದಿ:ಹಿಂದೂ ಸಂಘಟನೆಗಳ ಒತ್ತಡಕ್ಕೆ ಮಣಿದ ಸರ್ಕಾರ – ಗಣೇಶೋತ್ಸವಕ್ಕೆ ಷರತ್ತುಬದ್ಧ ಅನುಮತಿ?
ಪೆಟ್ರೋಲ್, ಡಿಸೇಲ್ ಸ್ವಲ್ಪ ಹೆಚ್ಚಾಗಿದೆ ಮುಂದಿನ ದಿನಗಳಲ್ಲಿ ಕಡಿಮೆಯಾಗುತ್ತೆ. ಸ್ಮಾರ್ಟ್ ಸಿಟಿ ಕಾಮಗಾರಿಯಲ್ಲಿ ಅವ್ಯವಹಾರ ಆಗಿದ್ರೇ ಡಿಕೆಶಿ ದಾಖಲೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದ್ದಾರೆ.
ಗಣೇಶೋತ್ಸವಕ್ಕೆ ಅನುಮತಿ ನೀಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಾರ್ವಜನಿಕರು ಧಾರ್ಮಿಕವಾಗಿ ಆಚರಿಸುವ ದೊಡ್ಡ ಹಬ್ಬ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಗಣೇಶ ಹಬ್ಬ ಆಚರಿಸುತ್ತೇವೆ. ಮಹಾರಾಷ್ಟ್ರ, ಪುಣೆ ಬಿಟ್ಟರೆ ಬೆಳಗಾವಿಗೆ ಗಣೇಶ ಉತ್ಸವಕ್ಕೆ ಹೆಸರುವಾಸಿ. ಅದಕ್ಕೆ ತೊಂದರೆಯಾಗದ ರೀತಿಯಲ್ಲಿ ಕೋವಿಡ್ ನಿಯಮಾವಳಿ ಒಳಗೆ ಯಾವ ಪರವಾನಗಿ ಕೊಡಲು ಸಾಧ್ಯವಿದೆ ಅದನ್ನೆಲ್ಲಾ ಮಾಡ್ತೇವಿ. ಹಬ್ಬದ ಆಚರಣೆಗೆ ಯಾವುದೇ ಅಡಚಣೆ ಆಗದ ಹಾಗೇ ಕೋವಿಡ್ ನಿಯಮಾವಳಿ ವ್ಯವಸ್ಥೆ ಒಳಗೆ ಅನುಕೂಲ ಮಾಡುತ್ತೇವೆ ಎಂದು ತಿಳಿಸಿದರು.ಇದನ್ನೂ ಓದಿ:ಜಾತಿ, ಭಾಷೆಯ ವಿಷಬೀಜ ಬಿತ್ತಿ ಅಧಿಕಾರ ಹಿಡಿಯುವ ತಂತ್ರ ಪ್ರಾರಂಭವಾಗಿದೆ: ಈರಣ್ಣ ಕಡಾಡಿ