ನವದೆಹಲಿ: ಕಾಂಗ್ರೆಸ್ (Congress) ನಾಯಕರು ಯಾವತ್ತಿಗೂ ಸಂವಿಧಾನದ ವಿರೋಧಿಗಳು ಅವರು ಹಿಂದಿನಿಂದಲೂ ಬಾಬಾ ಸಾಹೇಬ್ ಅಂಬೇಡ್ಕರ್ ವಿರೋಧಿಗಳಾಗಿದ್ದಾರೆ. ತಮ್ಮ ಕುರ್ಚಿ ಮತ್ತು ಮತ ಬ್ಯಾಂಕ್ ಆಸೆಗೆ ಏನನ್ನು ಬೇಕಾದರೂ ತಿದ್ದುಪಡಿ ಮಾಡುತ್ತಾರೆ ಎಂದು ಸಂಸದ ಗೋವಿಂದ ಕಾರಜೋಳ (Govinda Karajola) ಆಕ್ರೋಶ ವ್ಯಕ್ತಪಡಿಸಿದರು.
ಡಿಸಿಎಂ ಡಿ.ಕೆ.ಶಿವಕುಮಾರ್ (D K Shivakumar) ಹೇಳಿಕೆ ಬಗ್ಗೆ ನವದೆಹಲಿಯಲ್ಲಿ ಮಾತನಾಡಿದ ಅವರು, ನಾವು ದಲಿತರ ಪರ, ಹಿಂದುಳಿದವರ ಮತ್ತು ಅಲ್ಪಸಂಖ್ಯಾತರ ಪರ ಎಂದು ಭಾಷಣ ಮಾಡುತ್ತಾರೆ. ಆದರೆ 75 ವರ್ಷದಲ್ಲಿ ದಲಿತರು ಉದ್ಧಾರ ಆಗುವಂತ ಕೆಲಸ ಮಾಡಲಿಲ್ಲ. ಶಿಕ್ಷಣಕ್ಕೆ ಮಹತ್ವ ಕೊಡಲಿಲ್ಲ. ಅಲ್ಪಸಂಖ್ಯಾತರಿಗೆ ಉದ್ಯೋಗ ಕೊಡಲಿಲ್ಲ ಎಂದರು. ಇದನ್ನೂ ಓದಿ: ತೆಲಂಗಾಣ ಸುರಂಗ ಕುಸಿತ – ತಿಂಗಳ ಬಳಿಕ ಮತ್ತೋರ್ವ ಕಾರ್ಮಿಕನ ಶವ ಪತ್ತೆ
ಸಿಎಂ ಸಿದ್ದರಾಮಯ್ಯ (Siddaramaiah) ಅವರ ಸರ್ಕಾರ ಬಂಡಗೆಟ್ಟ ಮತ್ತು ಲಜ್ಜೆಗೆಟ್ಟ ಸರ್ಕಾರ. ಹನಿಟ್ರ‍್ಯಾಪ್ ಬಗ್ಗೆ ವಿಧಾನಸಭೆ ಅಧಿವೇಶನದಲ್ಲಿ ಚರ್ಚೆ ಆಗಿದೆ. ಮೂವರು ಮಂತ್ರಿಗಳು ಪ್ರಸ್ತಾಪಿಸಿದಾಗ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ಬರಬೇಕಾಗಿತ್ತು. ಆಡಳಿತ ಮಾಡುವ ನೈತಿಕತೆಯನ್ನು ಸಿದ್ದರಾಮಯ್ಯ ಕಳೆದುಕೊಂಡಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ತೆಲಂಗಾಣ ಸುರಂಗ ಕುಸಿತ – ತಿಂಗಳ ಬಳಿಕ ಮತ್ತೋರ್ವ ಕಾರ್ಮಿಕನ ಶವ ಪತ್ತೆ
ಬಿಜೆಪಿ ಕಾರ್ಯಕರ್ತ ಕೊಟ್ಟ ಸಂವಿಧಾನ ಬದಲಾವಣೆ ಹೇಳಿಕೆ ಬಗ್ಗೆ ದೊಡ್ಡ ಮಟ್ಟದ ಹೋರಾಟ ಮಾಡಿದ್ದೀರಿ. ಆಗ ಸಿದ್ದರಾಮಯ್ಯ ಬಳಸಿದ ಭಾಷೆ ಏನು? ಸಂವಿಧಾನ ಬದಲಾವಣೆ ಮಾಡಿದರೆ, ರಕ್ತಕ್ರಾಂತಿ ಆಗುತ್ತದೆ ಎಂದು ಹೇಳಿದ್ದರು. ಈಗ ಸಿದ್ದರಾಮಯ್ಯ ಅವರ ರಕ್ತ ತಣ್ಣಗೆ ಆಗಿದಿಯಾ ಕುದಿಯುತ್ತಿಲ್ಲವೇ? ಶಿವಕುಮಾರ್ ಹೇಳಿಕೆಗೆ ರಕ್ತ ಕ್ರಾಂತಿ ಆಗಬೇಕಿತ್ತು. ಆದರೆ ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಅವರ ಹೇಳಿಕೆಯನ್ನು ಹೇಗೆ ಸಮರ್ಥನೆ ಮಾಡುತ್ತಿದ್ದಾರೆ ಎಂದು ದೂರಿದರು. ಇದನ್ನೂ ಓದಿ: ರೀಲ್ಸ್ ವಿವಾದ: ಬಿಡುಗಡೆಯಾಗಿದ್ದ ರಜತ್, ವಿನಯ್‌ರನ್ನು ಮತ್ತೆ ಬಂಧಿಸಿದ ಪೊಲೀಸರು
ತಮ್ಮ ಕುರ್ಚಿ ಆಸೆಗೆ ಮಲ್ಲಿಕಾರ್ಜುನ ಖರ್ಗೆ (Mallikarjuna Kharge) ಉತ್ತರ ಕೊಟ್ಟಿದ್ದಾರೆ ಅಷ್ಟೇ. ಅವರು ಸೋನಿಯಾ, ರಾಹುಲ್ ಗಾಂಧಿ (Rahul Gandhi) ಅವರನ್ನು ಖುಷಿಪಡಿಸಲು ಮಾತನಾಡುತ್ತಾರೆ. ನಿಜವಾಗಿಯೂ ಅವರು ದಲಿತರ ಪರವಾಗಿದ್ದರೆ, ತಕ್ಷಣವೇ ಡಿಕೆಶಿ ಬಳಿ ರಾಜೀನಾಮೆ ಕೇಳಬೇಕು ಎಂದು ಆಗ್ರಹಿಸಿದರು.