ಬಾಲಿವುಡ್ ನಟ ಗೋವಿಂದಗೆ (Govinda) ಅ.1ರಂದು ಆಕಸ್ಮಿಕವಾಗಿ ಗುಂಡು ತಗುಲಿ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಗುಂಡೇಟಿನಿಂದ ಚೇತರಿಕೊಳ್ಳುತ್ತಿರುವ ನಟ ಗೋವಿಂದರನ್ನು ನೋಡಲು ಮುಂಬೈನ ಆಸ್ಪತ್ರೆಗೆ ನಟಿ ಶಿಲ್ಪಾ ಶೆಟ್ಟಿ (Shilpa Shetty) ಭೇಟಿ ನೀಡಿದ್ದಾರೆ.
ಗುಂಡೇಟಿನ ಬಳಿಕ ನಟ ಗೋವಿಂದಗೆ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಇದೀಗ ಅವರು ಚೇತರಿಸಿಕೊಂಡಿದ್ದಾರೆ. ಆಸ್ಪತ್ರೆಯಲ್ಲಿರುವ ಗೋವಿಂದರನ್ನು ಇದೀಗ ಶಿಲ್ಪಾ ಭೇಟಿಯಾಗಿ ಆರೋಗ್ಯದ ಬಗ್ಗೆ ಯೋಗಕ್ಷೇಮ ವಿಚಾರಿಸಿದ್ದಾರೆ. ಅಂದಹಾಗೆ, ಅಕ್ಟೋಬರ್ 4ರಂದು ಗೋವಿಂದ ಡಿಸ್ಚಾರ್ಜ್ ಆಗುತ್ತಿರುವ ಕುರಿತು ಅವರ ಪತ್ನಿ ಸುನೀತಾ ತಿಳಿಸಿದ್ದಾರೆ. ಇದನ್ನೂ ಓದಿ:BBK 11: ಧರ್ಮ ಕೀರ್ತಿರಾಜ್ ಮೇಲೆ ಲವ್ ಆಯ್ತಾ?- ದೊಡ್ಮನೆಯಲ್ಲಿ ತ್ರಿಕೋನ ಪ್ರೇಮಕಥೆ
View this post on Instagram
ಅಷ್ಟಕ್ಕೂ ಆಗಿದ್ದೇನು?
ನಟ ಗೋವಿಂದ ಅವರು ಅ.1ರಂದು ಬೆಳಗ್ಗೆ ತಮ್ಮ ಮನೆಯಲ್ಲಿ ಕಾಲಿಗೆ ಗುಂಡು ತಗುಲಿ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು. ಬೆಳಗ್ಗೆ 4:45ರ ಸುಮಾರಿಗೆ ಅವರ ಪರವಾನಗಿ ಪಡೆದ ರಿವಾಲ್ವರ್‌ನಿಂದ ಮಿಸ್‌ಫೈರ್ ಆಗಿ ಗಾಯವಾಗಿತ್ತು ಎಂದು ಮುಂಬೈ ಪೊಲೀಸರು ತಿಳಿಸಿದ್ದರು. ನಟ ಅಪಾಯದಿಂದ ಪಾರಾಗಿದ್ದಾರೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದರು.
ಘಟನೆ ವೇಳೆ ಮನೆಯಲ್ಲಿ ಗೋವಿಂದ ಒಬ್ಬರೇ ಇದ್ದರು. ಶಿವಸೇನೆ ನಾಯಕರಾಗಿರುವ ಗೋವಿಂದ ಅವರು ಅ.1ರ ಬೆಳಗ್ಗೆ ಕೋಲ್ಕತ್ತಾಗೆ ತೆರಳುವಾಗ ಈ ಘಟನೆ ನಡೆದಿತ್ತು. ಇನ್ನೂ ಮಾಧ್ಯಮಗಳಿಗೆ ಗೋವಿಂದ ಅವರ ಮ್ಯಾನೇಜರ್ ಶಶಿ ಸಿನ್ಹಾ ಪ್ರತಿಕ್ರಿಯಿಸಿದ್ದು, ಪರವಾನಗಿ ಪಡೆದ ರಿವಾಲ್ವರ್ ಅನ್ನು ಕೇಸ್‌ನಲ್ಲಿ ಇಟ್ಟುಕೊಂಡಿದ್ದರು. ಅಂದು ಕೇಸ್‌ನಿಂದ ತಗೆಯುವಾಗ ರಿವಾಲ್ವರ್ ಕೆಳಗೆ ಬಿದ್ದಾಗ ಫೈರ್ ಆಗಿ ಬುಲೆಟ್ ಕಾಲಿಗೆ ತಗುಲಿತ್ತು.