37 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ನಟ ಗೋವಿಂದ, ಸುನೀತಾ ಅಹುಜಾ?

Public TV
1 Min Read
Govinda And Sunita Ahuja

ನವದೆಹಲಿ: ನಟ ಗೋವಿಂದ (Govinda) ಮತ್ತು ಅವರ ಪತ್ನಿ ಸುನೀತಾ ಅಹುಜಾ (Sunita Ahuja) 37 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ ಎಂದು ವರದಿಯಾಗಿದೆ.

ಇಬ್ಬರು ಕೆಲವು ದಿನಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎನ್ನಲಾಗಿದೆ. ಗೋವಿಂದ ಆಗಲಿ ಅವರ ಪತ್ನಿ ಸುನೀತಾ ಅಹುಜಾ ಆಗಲಿ ವಿಚ್ಛೇದನದ (Divorce) ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಇದನ್ನೂ ಓದಿ: ನಿಮಗೆ ನಾಚಿಕೆಯಾಗಬೇಕು – ಕೇರಳ ಕಾಂಗ್ರೆಸ್‌ ವಿರುದ್ಧ ಪ್ರೀತಿ ಝಿಂಟಾ ಕೆಂಡಾಮಂಡಲ

ಗೋವಿಂದ ಮತ್ತು ಸುನೀತಾ ಅಹುಜಾ ಅವರ ನಡುವಿನ ಜೀವನಶೈಲಿಯ ಕಾರಣದಿಂದ ಸಂಬಂಧದಲ್ಲಿ ಬಿರುಕು ಮೂಡಿದೆ. ಅಲ್ಲದೇ ಗೋವಿಂದ ಅವರ ಮರಾಠಿ ನಟಿಯೊಂದಿಗಿನ ಸಂಬಂಧ ವಿಚ್ಛೇದನ ಕಾರಣವಾಗಿದೆ ಎಂದು ಹೇಳಲಾಗಿದೆ.

ಸುನೀತಾ ಅಹುಜಾ ಅವರು ಇತ್ತೀಚೆಗೆ ಮಾಧ್ಯಮವೊಂದರ ಮುಂದೆ, ಗೋವಿಂದ ಅವರು ಸಭೆಗಳು ಮತ್ತು ಔತಣಕೂಟಗಳ ನಂತರ ತಡವಾಗುವುದರಿಂದ ಹೆಚ್ಚಾಗಿ ಪ್ರತ್ಯೇಕವಾಗಿ ವಾಸಿಸುತ್ತಾರೆ ಎಂದು ಹೇಳಿಕೊಂಡಿದ್ದರು. ನಮಗೆ ಎರಡು ಮನೆಗಳಿವೆ, ನಮ್ಮ ಅಪಾರ್ಟ್ಮೆಂಟ್ ಎದುರು ನಮಗೆ ಬಂಗಲೆ ಇದೆ. ನಾನು ಮಕ್ಕಳು ಫ್ಲಾಟ್‌ನಲ್ಲಿ ವಾಸಿಸುತ್ತೇವೆ ಎಂದಿದ್ದರು.

ಗೋವಿಂದ ಅವರ ವ್ಯವಸ್ಥಾಪಕ ಶಶಿ ಸಿನ್ಹಾ ಪ್ರತಿಕ್ರಿಯಿಸಿ, ಕುಟುಂಬದ ಕೆಲವು ಸದಸ್ಯರು ನೀಡಿದ ಕೆಲವು ಹೇಳಿಕೆಗಳಿಂದಾಗಿ ದಂಪತಿಗಳ ನಡುವೆ ಸಮಸ್ಯೆಗಳಿವೆ. ಅಂತಹ ಸಮಸ್ಯೆ ಇಲ್ಲ ಮತ್ತು ಗೋವಿಂದ ಹೊಸ ಚಿತ್ರವನ್ನು ಪ್ರಾರಂಭಿಸುವ ಪ್ರಕ್ರಿಯೆಯಲ್ಲಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಗೋವಿಂದ ಮತ್ತು ಸುನೀತಾ ಅಹುಜಾ ಮಾರ್ಚ್ 1987 ರಲ್ಲಿ ವಿವಾಹವಾಗಿದ್ದರು. ಇದನ್ನೂ ಓದಿ: ಮಳೆಯಿಂದ ಆಸ್ಟ್ರೇಲಿಯಾ, ಆಫ್ರಿಕಾ ಪಂದ್ಯ ರದ್ದು

Share This Article