ಲಕ್ನೋ: ನನ್ನ ಕ್ರೀಡಾ ಜೀವನದ ಆರಂಭ ದಿನಗಳು ಅಷ್ಟೊಂದು ಸುಖಕರವಾಗಿರಲಿಲ್ಲ ಎಂದು ಸ್ಟ್ರಾಂಡ್ಜಾ ಸ್ಮಾರಕ ಬಾಕ್ಸಿಂಗ್ (Strandja Memorial Boxing Tournament) ಚಾಂಪಿಯನ್‍ಶಿಪ್ 48 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ಗೋವಿಂದ್ ಕುಮಾರ್ ಸಹಾನಿ ತಮ್ಮ ಕ್ರೀಡಾ ಜೀವನದ ಆರಂಭವನ್ನು ಮೆಲಕು ಹಾಕಿದ್ದಾರೆ.
ಗೋರಖ್‍ಪುರದ (Gorakhpur) ರೈತನ (Farmer) ಮಗನಾಗಿ ಜನಿಸಿದ ನಾನು ನನ್ನ ತಂದೆ ತಾಯಿಗೆ ನಾಲ್ಕನೆ ಮಗ. ನಾನು ಕರಾಟೆ ಮತ್ತು ಬಾಕ್ಸಿಂಗ್‍ನಲ್ಲಿ ತೊಡಗಿಸಿಕೊಂಡೆ. ಕುಟುಂಬವನ್ನು ನಿರ್ವಹಿಸಿಕೊಂಡು ನನ್ನ ಕ್ರೀಡೆಗೆ ಹಣ ವ್ಯಯಿಸುವುದು ಕುಟುಂಬಕ್ಕೆ ಕಷ್ಟವಾಗುತ್ತಿತ್ತು. ನನ್ನ ಕುಟುಂಬ ಸಂಪಾದನೆಗಾಗಿ ಕಷ್ಟಪಡುತ್ತಿತ್ತು. ನನ್ನ ಕ್ರೀಡೆಯ ಕನಸಿಗೆ ತಾಯಿ ಆಗೆಲ್ಲ ಗದರಿಸುತ್ತಿದ್ದರು ಎಂದರು. ಇದನ್ನೂ ಓದಿ: ಸಂಚಾರ ನಿಯಮ ಉಲ್ಲಂಘನೆ ದಂಡಕ್ಕೆ 50 ಪರ್ಸೆಂಟ್ ಆಫರ್ – ದಂಡ ಕಟ್ಟಲು ಮತ್ತೆ 15 ದಿನ ಅವಧಿ ವಿಸ್ತರಣೆ
Advertisement
Advertisement
ನಾನು ತರಬೇತಿ ಆರಂಭಿಸಿದಾಗ ನನ್ನ ತಾಯಿ ಸಮಯ ಮತ್ತು ಹಣ (Money) ಎರಡನ್ನು ಹಾಳು ಮಾಡುತ್ತಿದ್ದಿಯಾ ಎನ್ನುತ್ತಿದ್ದರು. ಮಧ್ಯಮ ವರ್ಗದ ಕುಟುಂಬದ ಪರಿಸ್ಥಿತಿ ಹೇಗಿರುತ್ತದೆ ಎಂದರೆ ಅದನ್ನೆಲ್ಲ ನಗುತ್ತಾ ಸಹಿಸಿಕೊಳ್ಳಬೇಕಾಗಿತ್ತು ಎಂದು ಹೇಳಿದ್ದಾರೆ.
Advertisement
ಭಾರತದ ಬಾಕ್ಸರ್‍ಗಳು ಮೂರು ಬೆಳ್ಳಿ ಹಾಗೂ ಐದು ಕಂಚಿನ ಪದಕಗಳೊಂದಿಗೆ ಹಿಂತಿರುಗಿದ್ದಾರೆ. ಉಜ್ಬೆಕಿಸ್ಥಾನದ (Uzbekistan) ಶೋಡಿಯೋರ್ಜಾನ್ ಮೆಲಿಕುಝಿವ್ (Shodiyorjon Melikuziev) ಚಿನ್ನವನ್ನು ಕಳೆದುಕೊಂಡರು.
Advertisement
ನನ್ನ ತಾಯಿಯ ನಿರಂತರ ನಿಂದನೆಯಿಂದ ತಪ್ಪಿಸಿಕೊಳ್ಳಲು ನಾನು 2011ರಲ್ಲಿ ಮನೆ ತೊರೆದು ಹಾಸ್ಟೆಲ್ ಸೇರಿದೆ. ಹಣ ಕೇಳಲು ಮನೆಗೆ ಹೋಗುತ್ತಿರಲಿಲ್ಲ. ಕೆಲವು ವರ್ಷಗಳು ಕಳೆದ ನಂತರ ನನ್ನ ಸುದ್ದಿ ಹರದಾಡಲು ಆರಂಭಿಸಿತು. ಆಗ ನನ್ನ ಕುಟುಂಬಕ್ಕೆ ಹಣ ವ್ಯರ್ಥ ಮಾಡುತ್ತಿಲ್ಲ ಎಂಬುದು ಮನವರಿಕೆಯಾಯಿತು ಎಂದು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: CCL 2023 ಬೆಂಗಳೂರಿನಲ್ಲಿ : ಕಿಚ್ಚನ ಟೀಮ್ ಜೊತೆ ತೆಲುಗು ವಾರಿಯರ್ಸ್ ರೋಚಕ ಪಂದ್ಯ