ಬೆಂಗಳೂರು: ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಮೇಕೆದಾಟು ಕುರಿತು ಹೊಣೆಗೇಡಿತನ ತೋರಿದ್ದು, ಈ ಬಗ್ಗೆ ದಾಖಲೆ ಸಮೇತ ಸ್ಫೋಟಕ ಮಾಹಿತಿ ಬಹಿರಂಗ ಮಾಡುತ್ತೇನೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಡಿಕೆ ಶಿವಕುಮಾರ್‌ಗೆ ತಿರುಗೇಟು ನೀಡಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 2013 ರಿಂದ 2018 ವರೆಗೆ ಮತ್ತು 2019 ರವರೆಗೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಮೇಕೆದಾಟು ಯೋಜನೆ ಕುರಿತು ಹೊಣೆಗೇಡಿತನ ತೋರಿದ್ದಾರೆ. ಕೂಡಲ ಸಂಗಮದಲ್ಲಿ ನಾವು ಮುಳುಗಿ ಎದ್ದು ಪಾಪ ಕಳೆಯಲಿ ಅಂತ ಪೂಜೆ ಮಾಡುತ್ತೇವೆ ಅಂತಹ ಪವಿತ್ರ ಸ್ಥಳದಲ್ಲಿ ಆಣೆ ಮಾಡಿದ್ದರು. ನಮಗೆ ಅಧಿಕಾರ ಕೊಡಿ, ಕೊಟ್ಟರೆ 15 ಲಕ್ಷ ಎಕರೆ ಭೂಮಿ ನೀರಾವರಿ ಮಾಡುತ್ತೇವೆ ಅಂತ 7,728 ಕೋಟಿ ಖರ್ಚು ಮಾಡಿದ್ದರು. ಹೀಗೆ ಜನರಿಗೆ ಮೋಸ ಮಾಡಿ ಅಧಿಕಾರಕ್ಕೆ ಬಂದಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಟೀಂ ಇಂಡಿಯಾ ಸಾರಥ್ಯ ಹಿಡಿದ ಕನ್ನಡಿಗರಿವರು
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಜಿ. ಪರಮೇಶ್ವರ್ ಅವರ ನಡುವೆ ನಡೆದ ಪೈಪೋಟಿ ಪಾದಯಾತ್ರೆ ಇದಾಗಿತ್ತು. ಅಧ್ಯಕ್ಷ ಪರಮೇಶ್ವರ್ ಹಿಂದಿಕ್ಕಿ, ನಾನು ಸಿಎಂ ಆಗಬೇಕು ಅಂತ ಸಿದ್ದರಾಮಯ್ಯ ನಡುವೆ ಸ್ಪರ್ಧೆ ಇತ್ತು. ಕೆಲವೇ ದಿನಗಳಲ್ಲಿ ದಾಖಲೆ ಬಿಡುಗಡೆ ಮಾಡುತ್ತೇನೆ. ಈಗ ಮೇಕೆದಾಟು ಯೋಜನೆ ಕೂಡ ಅಂತದ್ದೇ ಅಧಿಕಾರಕ್ಕಾಗಿ ನಡೆಯುತ್ತಿರುವ ಪೈಪೋಟಿಯಾಗಿದೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷವನ್ನು ಮುಗಿಸಲು ಹೊರಟಿದ್ದಾರೆ: ಶ್ರೀರಾಮುಲು
ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಕೂಡ ಅದೇ ಅಧಿಕಾರಕ್ಕೆ ಪೈಪೋಟಿ ಮಾಡುತ್ತಿದ್ದಾರೆ. ನಾನು ಯಾರ ವೈಯಕ್ತಿಕ ವಿಚಾರ ಮಾತನಾಡುವುದಿಲ್ಲ. ಕಾಂಗ್ರೆಸ್ ಹೊಣೆಗೇಡಿತನ ಬಗ್ಗೆ ಹೇಳ್ತಿದ್ದೇನೆ ಅಷ್ಟೇ. ಕಳೆದ ವರ್ಷ ನಡೆದ ಕಹಿ ಘಟನೆಗಳನ್ನು ಮರೆತು ಜನ ಸುಖ ಶಾಂತಿ ಸಂತೋಷ ದಿಂದ ಬದುಕುವಂತೆ ಆಗಲಿ. ಜನವರಿ 7, 2013 ರಿಂದ ಕಾಂಗ್ರೆಸ್ ನವರು ಕಾಂಗ್ರೆಸ್ ನಡಿಗೆ ಕೃಷ್ಣಾ ಕಡೆಗೆ ಅಂತ ಪಾದಯಾತ್ರೆ ಮಾಡಿದ್ದರು. ಏಳು ವರ್ಷದಲ್ಲಿ ಅವರು ಅಧಿಕಾರದಲ್ಲಿ ಇದ್ದರು ಸಹ ಅವರು ಕೃಷ್ಣಾಗಾಗಿ ಖರ್ಚು ಮಾಡಿದ್ದು ಏಳು ಸಾವಿರದ ಏಳುನೂರಾ ಇಪ್ಪತ್ತಾರು ಕೋಟಿ ರೂ. ಎಂದು ಬಹಿರಂಗಪಡಿಸಿದರು.
ಬಿಜೆಪಿ ಸಂಪುಟ ಪುನರ್ ರಚನೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ನಾನು ಯಾವತ್ತು ಕೂಡಾ ಅಧಿಕಾರದಲ್ಲಿ ಇರಬೇಕು ಅಂತಾ ಬಯಸಿದವನಲ್ಲ. ಪಕ್ಷ ಏನು ತೀರ್ಮಾನ ಮಾಡುತ್ತದೆಯೋ ಅದಕ್ಕೆ ನಾನು ಬದ್ಧನಾಗಿರುತ್ತೇನೆ. ಪಕ್ಷ ಹೇಳುವುದನ್ನ ಶಿಸ್ತಿನ ಸಿಪಾಯಿ ರೀತಿ ಕೇಳುತ್ತೇನೆ. ಅಧಿಕಾರ ಅನ್ನೋದು ಯಾರ ಪಿತ್ರಾರ್ಜಿತ ಆಸ್ತಿಯು ಅಲ್ಲ ಎಂದರು.