ಬಾಗಲಕೋಟೆ: ನಮ್ಮ ರಾಜ್ಯದ ನೀರಿನ ಪಾಲು ಹಂಚಿಕೆ ಆಗದ ಹೊರತು ಯಾವುದೇ ಯೋಜನೆ ಕೈಗೆತ್ತಿಕೊಳ್ಳಬಾರದು. ಇದು ರಾಜ್ಯದ ಸ್ಪಷ್ಟ ನಿಲುವಾಗಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಬಜೆಟ್‍ನಲ್ಲಿ ನದಿಗಳ ಜೋಡಣೆ ವಿಚಾರವಾಗಿ ಕೇಂದ್ರ ಜಲಶಕ್ತಿ ಮಂತ್ರಾಲಯದ ಅಧಿಕಾರಿಗಳಿಗೆ ರಾಜ್ಯದ ನಿಲುವು ಸ್ಪಷ್ಟಪಡಿಸಿದ್ದೇವೆ. ನಿನ್ನೆ ಕೇಂದ್ರದ ಜಲಶಕ್ತಿ ಮಂತ್ರಿಗಳು ಅಧಿಕಾರಿಗಳು ಮತ್ತು ನಮ್ಮ ರಾಜ್ಯದ ಅಧಿಕಾರಿಗಳು ಸಭೆ ಮಾಡಿದ್ದಾರೆ. ಸಭೆಯಲ್ಲಿ ರಾಜ್ಯದ ಸ್ಪಷ್ಟ ನಿಲುವು ತಿಳಿಸಿದ್ದೇವೆ ಎಂದರು.
Advertisement
Advertisement
ನದಿಗಳ ಜೋಡಣೆ ವಿಚಾರದಲ್ಲಿ ನಮ್ಮ ನಿಲುವು ಬಹಳ ಸ್ಪಷ್ಟವಾಗಿದೆ. ನದಿ ಜೋಡಣೆ ಪ್ರಕ್ರಿಯೆ ಆರಂಭ ಆಗುವ ಮೊದಲೇ ನೀರಿನ ಹಂಚಿಕೆ ಆಗಬೇಕು. ಮುಂದಿನ 50 ವರ್ಷಗಳವರೆಗೆ ನೀರಿನ ಹಂಚಿಕೆ ಯಾವ ರೀತಿಯಲ್ಲಿ ಆಗಬೇಕು. ಈಗಾಗಲೇ ಇರುವ ಕಾನೂನು ಪ್ರಕಾರ ಹಂಚಿಕೆಯಾಗಿ ನಮ್ಮ ಪಾಲಿಗೆ ಎಷ್ಟು ನೀರು ಬರುತ್ತದೆ ಎಂದು ಸ್ಪಷ್ಟ ತೀರ್ಮಾನ ಆಗಬೇಕು. ಅಲ್ಲಿಯವರೆಗೂ ಯಾವುದೇ ಕಾರಣಕ್ಕೂ ನಾವು ಒಪ್ಪಿಗೆ ಕೊಡಲ್ಲ. ಇದನ್ನು ಈಗಾಗಲೇ ನಾವು ಸ್ಪಷ್ಟಪಡಿಸಿದ್ದೇವೆ ಎಂದು ತಿಳಿಸಿದರು.
Advertisement
Advertisement
ಕಲಾಪದಲ್ಲಿ ಸಚಿವ ಈಶ್ವರಪ್ಪ ವಜಾಕ್ಕೆ ಕಾಂಗ್ರೆಸ್ ಆಗ್ರಹ ವಿಚಾರವಾಗಿ ಪ್ರತಿಕ್ರಿಯಿಸಿ, ಕಾಂಗ್ರೆಸ್‍ನವರು ಯಾವುದೇ ಜನರ ಸಮಸ್ಯೆಗಳಿಗಾಗಿ ಹೋರಾಟ ಮಾಡುತ್ತಿಲ್ಲ. ಕಾಂಗ್ರೆಸ್‍ನವರು ರಾಜಕೀಯ ಅಸ್ತಿತ್ವಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಕಾಂಗ್ರೆಸ್‍ನವರದ್ದು ಸರಿಯಾದ ವಿಚಾರವಲ್ಲ. ಹಿಜಬ್ ವಿಚಾರದಲ್ಲಿ ಕಾಂಗ್ರೆಸ್‍ನವರು ಗೊಂದಲ ಮಾಡಿಕೊಡರು. ಇದರಿಂದ ಕಾಂಗ್ರೆಸ್‍ಗೆ ನಷ್ಟವಾಗಿದೆ. ಅದನ್ನು ತುಂಬಿಕೊಳ್ಳಲು ಈ ಹೋರಾಟ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಆಂಬ್ಯುಲೆನ್ಸ್ ಸೇವೆಗೆ ಹೊಸ ರೂಪ, ಆರೋಗ್ಯ ಕವಚ-108 ಉನ್ನತೀಕರಣಕ್ಕೆ ಆಡಳಿತಾತ್ಮಕ ಅನುಮೋದನೆ: ಡಾ.ಕೆ.ಸುಧಾಕರ್
ವಿಧಾನಸಭಾ ಕಲಾಪದಲ್ಲಿ ಜನರ ಸಮಸ್ಯೆ, ನಾಡಿನ ಸಮಸ್ಯೆ ಹಾಗೂ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಿ. ಕೇವಲ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಈ ಹೋರಾಟ ಆಗಬಾರದು ಎಂದು ಕಾಂಗ್ರೆಸ್ ನಾಯಕರಿಗೆ ಸಲಹೆ ನೀಡಿದರು. ಇದನ್ನೂ ಓದಿ: ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯ – PSI ನೇಮಕಾತಿಗೆ ತಡೆ: ಆರಗ ಜ್ಞಾನೇಂದ್ರ
ಹಿಜಬ್ ವಿವಾದ ಸರ್ಕಾರದ ಕುತಂತ್ರ ಎಂದ ಮಾಜಿ ಸಿಎಂ ಸಿದ್ದರಾಮಯ್ಯ ವಿಚಾರ ಸಂಬಂಧ ಮಾತನಾಡಿದ ಅವರು, ಆರ್‌ಎಸ್‍ಎಸ್‍ನಲ್ಲಿ ದೇಶಭಕ್ತರಿದ್ದಾರೆ. ಅವರು ಭಾರತಮಾತೆಗಾಗಿ ಹೋರಾಟ ಮಾಡುತ್ತಾ ಬಂದಿದ್ದಾರೆ. ಆರ್‌ಎಸ್‍ಎಸ್ ಬಗ್ಗೆ ಸಿದ್ದರಾಮಯ್ಯ ಅವರ ಆರೋಪ ಹುರುಳಿಲ್ಲದ್ದು ಎಂದು ಟೀಕಿಸಿದರು.
ಮಾರ್ಚ್ ಮೊದಲ ವಾರದಲ್ಲಿ ನಮ್ಮ ಬಜೆಟ್ ಅಧಿವೇಶನ ಪ್ರಾರಂಭವಾಗಬಹುದು. ಸಿಎಂ ಈ ಬಗ್ಗೆ ಇನ್ನೂ ಸ್ಪಷ್ಟವಾಗಿ ತಿಳಿಸಿಲ್ಲ. ನಾನು ಈಗಾಗಲೇ ಸಿಎಂ ಜೊತೆ ಚರ್ಚೆ ಮಾಡಿದ್ದೀನಿ. ಯುಕೆಪಿ ಯೋಜನೆಗೆ ಹೆಚ್ಚಿನ ಅನುದಾನಕ್ಕಾಗಿ ಮನವಿ ಮಾಡಿದ್ದೇನೆ. ಸಿಎಂ ಅವರು ಸಹ ಆಸಕ್ತರಾಗಿದ್ದಾರೆ. ಕೃಷ್ಣಾ, ಮಹಾದಾಯಿ, ಮೇಕೆದಾಟು ಯೋಜನೆ ಎಲ್ಲಾ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡಲು ಸಿಎಂ ಗಮನ ಹರಿಸಿದ್ದಾರೆ ಎಂದರು.