ವಿಜಯಪುರ: ನನಗಿನ್ನೂ ವಯಸ್ಸಾಗಿಲ್ಲ. ನಾನು 35 ವಯಸ್ಸು ಆದಂತೆ ಕಾಣುತ್ತೇನೆ. ಅದಕ್ಕೆ ನಾನು ಸದ್ಯ ನಿವೃತ್ತಿ ಆಗಲ್ಲ ಎಂದು ಸಚಿವ ಗೋವಿಂದ ಕಾರಜೋಳ ತಿಳಿಸಿದರು.
ವಿಜಯಪುರದ ಬುರನಾಪುರದಲ್ಲಿ ಸಚಿವ ಗೋವಿಂದ ಕಾರಜೋಳ ಅವರಿಗೆ 73 ವಯಸ್ಸಾಗಿದೆ. ಇದರಿಂದಾಗಿ ರಾಜಕೀಯ ನಿವೃತ್ತಿ ಪಡೆಯುತ್ತಿರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಕಾರಜೋಳ ಹಾಸ್ಯದಲ್ಲೇ ನನಗೆ ವಯಸ್ಸಾಗಿಲ್ಲ ಎಂದು ಉತ್ತರಿಸಿದರು.
Advertisement
Advertisement
ಬಿಜೆಪಿ ಕಾರ್ಯಕರ್ತರ ಬಗ್ಗೆ ಈಶ್ವರಪ್ಪ ಹೇಳಿಕೆ ವಿಚಾರವಾಗಲಿ, ನಾನು ಯಾರ ಬಗ್ಗೆಯೂ ಮಾತನಾಡಲು ಇಚ್ಛೆಪಡಲ್ಲ. ಮಾಧ್ಯಮದವರು ನಮ್ಮ ಕಾರ್ಯಕರ್ತ ಪ್ರತಿಭಟನೆ ಬಗ್ಗೆ ತಪ್ಪಾಗಿ ತಿಳಿದುಕೊಂಡಿದ್ದಾರೆ. ಅವರು ಹೇಳಿದ್ದು ದೇಶದ್ರೋಹಿ ಸಂಘಟನೆಗಳನ್ನು ಬ್ಯಾನ್ ಮಾಡಿ, ಅವರನ್ನು ಮಟ್ಟ ಹಾಕಿ, ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಿ ಅಂತಾ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ.
Advertisement
ಅದು ಸರ್ಕಾರದ ವಿರುದ್ಧ ಅಥವಾ ಪಕ್ಷದ ವಿರುದ್ಧ ಅಲ್ಲ. ಸರ್ಕಾರದ ಯಾವುದರಲ್ಲೂ ವಿಫಲ ಆಗಿಲ್ಲ. ಸರ್ಕಾರದ ಎಲ್ಲ ಹಂತದಲ್ಲೂ ಕಾನೂನಾತ್ಮಕ ಕ್ರಮ ಕೈಗೊಳ್ಳುತ್ತಿದೆ. ಪ್ರವೀಣ್ ಹತ್ಯೆಗೆ ಸಂಬಂಧಿಸಿದಂತೆ ಜನರ ಬೇಡಿಕೆ ಮೇರೆಗೆ ಎನ್‍ಐಗೆ ಕೊಡಲಾಗಿದೆ. ಈ ಸಂಬಂಧ ಅವರು ತನಿಖೆ ನಡೆಸುತ್ತಾರೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಮಸೂದ್, ಫಾಝಿಲ್ ಕುಟುಂಬಸ್ಥರಿಗೆ ಹೆಚ್‌ಡಿಕೆ ಸಾಂತ್ವನ – 5 ಲಕ್ಷ ಪರಿಹಾರ ವಿತರಣೆ
Advertisement
ಇದೇ ವೇಳೆ ಸಿದ್ದರಾಮೋತ್ಸವದ ಕುರಿತು ಮಾತನಾಡಿದ ಅವರು, ಸಿದ್ದರಾಮೋತ್ಸವದಲ್ಲಿ ಒಂದು ಗುಂಪಿಗೆ ಸಂಭ್ರಮ ಇದೆ. ಇನ್ನೊಂದು ಗುಂಪಿಗೆ ದು:ಖ ಇದೆ. ಅವರ ದು:ಖವನ್ನು ಆಗಾಗ ಮಾಧ್ಯಮದ ಮುಂದೆ ಹೊರಹಾಕುತ್ತಿದ್ದಾರೆ. ಕಾಂಗ್ರೆಸ್ ಒಡೆದ ಮನೆ ಆಗಿದೆ. ಕಾಂಗ್ರೆಸ್‍ನಲ್ಲಿ ಒಟ್ಟು ಮೂರು ಗುಂಪು ಆಗಿದೆ. ಮೂರು ಗುಂಪು ಮೂರು ದಿಕ್ಕಿನಲ್ಲಿ ಹೋಗ್ತಾ ಇದೆ. ಅದಕ್ಕಾಗಿ ಕಾಂಗ್ರೆಸ್ ಪರಿಸ್ಥಿತಿ ಸರಿ ಇಲ್ಲ ಎಂದು ಕಾಲೆಳದರು. ಇದನ್ನೂ ಓದಿ: ಸಿದ್ದರಾಮಯ್ಯಗೆ ಅಂಕಲ್ ಎಂದ ಅಶ್ವಥ್ ನಾರಾಯಣ್