BelgaumDistrictsKarnatakaLatestMain Post

ಸಿದ್ಧರಾಮಯ್ಯ ಆಡಳಿತದಲ್ಲಿ ಹೇಳಿಕೊಳ್ಳುವ ಸಾಧನೆ ಮಾಡಿಲ್ಲ: ಗೋವಿಂದ ಕಾರಜೋಳ

ಚಿತ್ರದುರ್ಗ: ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್‍ಗೆ ಗೋವಿಂದ ಕಾರಜೋಳ ತಿರುಗೇಟು ನೀಡಿದ್ದಾರೆ.

ಚಿತ್ರದುರ್ಗ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಶ್ವಥ್ ನಾರಾಯಣ್ ಸಿಎಂ ರೇಸ್‍ನಲ್ಲಿದ್ದಾರೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆ ಕುರಿತಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ಧರಾಮಯ್ಯ ಆಡಳಿತದಲ್ಲಿ ಹೇಳಿಕೊಳ್ಳುವ ಸಾಧನೆ ಮಾಡಿಲ್ಲ. ಜನರ ಗಮನ ಬೇರೆಡೆ ಸೆಳೆಯಲು ಸರ್ಕಾರದ ವಿರುದ್ಧ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ ಸದ್ಯ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ ರಾಜ್ಯದಲ್ಲಿ ಸಿಎಂ ಆಗಿ ಬೊಮ್ಮಾಯಿ ಇದ್ದಾರೆಂದು ಟಾಂಗ್ ನೀಡಿದ್ದಾರೆ. ಇದನ್ನೂ ಓದಿ:  ಪಿಎಸ್‍ಐ ಅಕ್ರಮ – ಕೈ ನಾಯಕರು ಗಾಳಿಯಲ್ಲಿ ಗುಂಡು ಹೊಡೆದಿದ್ದಾರೆ: ಅಶ್ವಥ್ ನಾರಾಯಣ

ಪಿಎಸ್‍ಐ ಅಕ್ರಮದಲ್ಲಿ ಅರಗ ಜ್ಞಾನೇಂದ್ರ ಶಾಮೀಲು ಆರೋಪ: ಗೃಹ ಸಚಿವ ಆರಗ ಜ್ಞಾನೇಂದ್ರ ಏಕೆ ರಾಜೀನಾಮೆ ಕೊಡಬೇಕು? ಪಿಎಸ್‍ಐ ನೇಮಕಾತಿ ಅಕ್ರಮ ಬಯಲಿಗೆಳೆದು ಆರೋಪಿಗಳ ಬಂಧನ ಮಾಡಲಾಗುತ್ತದೆ. ತನಿಖೆ ಬಳಿಕ ಅಕ್ರಮದಲ್ಲಿ ಯಾರ ಪಾತ್ರವಿದೆ ಎಂಬುದು ಬಯಲಾಗಲಿದೆ. ಹಿಂದೆ ಆಗಿರುವ ನೇಮಕಾತಿಗಳಲ್ಲೂ ಹಗರಣ ಆಗಿವೆ. ಕಾಂಗ್ರೆಸ್‍ನವರು ಬಿಜೆಪಿ ಕಡೆ ಬೊಟ್ಟು ಮಾಡುತ್ತಿದ್ದಾರೆ. ದಿನ ನಿತ್ಯ ಅಕ್ರಮದಲ್ಲಿ ಕಾಂಗ್ರೆಸ್‍ನವರ ಹೆಸರು ಬರುತ್ತಿವೆ. ದೇಶದ್ರೋಹಿ, ಸಮಾಜಘಾತಕರು ಎಲ್ಲಾ ಪಕ್ಷ, ಜನಾಂಗದಲ್ಲಿರುತ್ತಾರೆ. ಒಂದು ಪಕ್ಷದ ಕಡೆ ಬೊಟ್ಟು ಮಾಡುವುದು ಸರಿಯಲ್ಲ. ಸಚಿವರೇ ಇರಲಿ, ಯಾರೇ ಇರಲಿ ಕಾನೂನು ಚೌಕಟ್ಟಿನಲ್ಲೇ ಇರುತ್ತಾರೆ. ಬಸವರಾಜ ಬೊಮ್ಮಾಯಿ ಉತ್ತಮ ಆಡಳಿತ ನೀಡುತ್ತಿದ್ದಾರೆ. ಸಿಎಂ ಬದಲಾವಣೆಯ ಗಾಳಿ ಸುದ್ದಿಗೆ ಕಿವಿಗೊಡುವ ಅಗತ್ಯವಿಲ್ಲ ಎಂದಿದ್ದಾರೆ.

ಬೆಳಗಾವಿಯಲ್ಲಿ MES ಪುಂಡಾಟಕೆ: ಬೆಳಗಾವಿ ಯಾವತ್ತಿದ್ದರೂ ಕರ್ನಾಟಕ ರಾಜ್ಯದ ಭಾಗ. ಎಂಇಎಸ್‍ನವರು ಆಗಾಗ ವಿವಾದ ಹುಟ್ಟು ಹಾಕುತ್ತಾರೆ. ನೆಲಜಲದ ಪ್ರಶ್ನೆ ಬಂದಾಗ ಪಕ್ಷ ಬೇಧ ಮರೆತು ಹೋರಾಟಕ್ಕೆ ಸರ್ಕಾರ ಬದ್ಧ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಾವು ಗಂಡಸರಲ್ಲ, ಅವರೊಬ್ಬರೇ ಗಂಡಸರು: ಡಿ.ಕೆ.ಶಿವಕುಮಾರ್

ಪಿಎಸ್‍ಐ ಅಕ್ರಮದಲ್ಲಿ ಸಚಿವ ಅಶ್ವಥ್ ನಾರಾಯಣ ಹೆಸರು ಕೇಳಿಬರುತ್ತಿರುವ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ ಬೇಕಾಬಿಟ್ಟಿಯಾಗಿ ಆರೋಪ ಮಾಡುವುದು ಸರಿಯಲ್ಲ. ಸದ್ಯ ಈ ಬಗ್ಗೆ ವಿಚಾರಣೆ ಹಂತದಲ್ಲಿದೆ ತನಿಖೆ ಮುಗಿಯಲಿ. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಯಾರು ತಪ್ಪು ಮಾಡಿರುತ್ತಾರೋ ಅವರಿಗೆ ಶಿಕ್ಷೆ ಆಗುತ್ತದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published.

Back to top button