ಬೆಂಗಳೂರು: ಸಂವಿಧಾನ ವಿರೋಧಿ ನಡವಳಿಕೆ ರಾಜ್ಯಪಾಲರದ್ದು. ವಾಪಸ್ ಕರೆಸಿಕೊಳ್ಳಬೇಕು ಎಂಬ ಹೋರಾಟ ಮಾಡ್ತೇವೆ ಎಂದು ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ (M.C.Sudhakar) ಹೇಳಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಈಗಾಗಲೇ ರಾಜ್ಯಪಾಲರ ನಡೆ ಬಗ್ಗೆ ಕಾಂಗ್ರೆಸ್, ಇಂಡಿಯಾ ಒಕ್ಕೂಟ ವಿರೋಧ ಮಾಡಿದೆ. ಒಂದೆಡೆ ನಾಲ್ಕು ಬಿಜೆಪಿ, ಜೆಡಿಎಸ್ ನಾಯಕರ ವಿರುದ್ಧ ಲೋಕಾಯುಕ್ತ ಪ್ರಾಸಿಕ್ಯೂಷನ್ ಅನುಮತಿ ಕೇಳಿದೆ. ಅದರ ಬಗ್ಗೆ ಯಾವುದೇ ತೀರ್ಮಾನ ಮಾಡದೆ ತರಾತುರಿಯಲ್ಲಿ ದುರುದ್ದೇಶದಿಂದ ಸಿಎಂ ಮೇಲೆ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿದ್ದಾರೆ. ಕಾನೂನು ಬಾಹಿರವಾಗಿ ಅನುಮತಿ ಕೊಟ್ಟಿದ್ದಾರೆ. ಕೇಂದ್ರ ಸರ್ಕಾರದ ನಿಯಮಾವಳಿಗಳ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಹಾಗಾಗಿ ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಪ್ರತಿಭಟನೆ ಆಗಿವೆ. ಶನಿವಾರ ಸಚಿವರು, ಶಾಸಕರು, ಸಂಸದರ ರಾಜಭವನ ಚಲೋ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಯವರ ಷಡ್ಯಂತ್ರದ ವಿರುದ್ಧ ನನಗೆ ಜಯ ಸಿಕ್ಕಿದೆ: ಡಿಕೆಶಿ
Advertisement
Advertisement
ವಿಶೇಷ ಅಧಿವೇಶನ ಕರೆಯುವಂತಹ ಪರಿಸ್ಥಿತಿ ತಲುಪಿಲ್ಲ. ಸರ್ವಾಧಿಕಾರಿ ಧೋರಣೆಗಳ ವಿರುದ್ಧ ಹೋರಾಡಲು ನಾವು ಎಲ್ಲಾ ರೀತಿಯ ಪ್ರಯತ್ನ ಮಾಡ್ತೇವೆ. ಸಂವಿಧಾನ ವಿರೋಧಿ ನಡವಳಿಕೆ ರಾಜ್ಯಪಾಲರು ನಡೆದುಕೊಂಡರೆ ವಾಪಸ್ ಕರೆಸಿಕೊಳ್ಳಬೇಕು ಎಂಬ ಹೋರಾಟ ಮಾಡ್ತೇವೆ. ಆದರೆ ಪಕ್ಷ ಇನ್ನೂ ಆ ರೀತಿಯ ಸೂಚನೆ ಕೊಟ್ಟಿಲ್ಲ. ಪಕ್ಷದ ಉನ್ನತಮಟ್ಟದ ವರಿಷ್ಠರು ಏನು ಸೂಚನೆ ಕೊಡ್ತಾರೋ ಅದನ್ನ ಪಾಲನೆ ಮಾಡುತ್ತೇವೆ ಎಂದಿದ್ದಾರೆ.
Advertisement
ಖರ್ಗೆ ಕುಟುಂಬಕ್ಕೆ ಸಿಎ ಸೈಟ್ ಹಂಚಿಕೆ ವಿಚಾರ ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ, ನಿರಾಣಿ, ಜನಾರ್ದನ ರೆಡ್ಡಿ ಅವರದ್ದು ಆಯಿತು. ದುರುದ್ದೇಶದಿಂದ ಇದ್ದವರು ಇವತ್ತು ಖರ್ಗೆ ಸಾಹೇಬರ ಮೇಲೂ ಹೇಳ್ತಾರೆ, ನಾಳೆ ಎಲ್ಲರ ಮೇಲೂ ಹೇಳ್ತಾರೆ. ಕೇವಲ ಆರೋಪ ಮಾಡಿದ ತಕ್ಷಣ ಅದು ಸತ್ಯ ಎಂದು ಭಾವಿಸಲು ಹೇಗೆ ಸಾಧ್ಯ? ತಮ್ಮ ಹುಳುಕು ಮುಚ್ಚಿಕೊಳ್ಳಲು ಯಾವುದೋ ಅಶ್ಲೀಲ ವೀಡಿಯೋ ಅಂತೆ, ಮತ್ತೊಂದು ಬಗೆದಷ್ಟು ಹೊರಗೆ ಬರ್ತಾ ಇದ್ದಾವೆ ಎಂದು ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಮುಡಾ ಹಗರಣ ಮುಚ್ಚಾಕಲು ಕಾಂಗ್ರೆಸ್ ಷಡ್ಯಂತ್ರ: ನಿಖಿಲ್
Advertisement
ಬಿಜೆಪಿಯವರಿಗೆ ಸಹಿಸಲು ಆಗುತ್ತಿಲ್ಲ. ಕೆಐಎಡಿಬಿ ಜಾಗವನ್ನು ಚಾಣಕ್ಯ ವಿವಿ ಕೊಟ್ಟರು. ಅರ್ಧ ಬೆಲೆ ಕೊಡಲು ಯಾವ ಕಾನೂನಿನಲ್ಲಿ ಅವಕಾಶವಿದೆ. ಬಿಜೆಪಿ ಕಾಲದಲ್ಲಿ ನೂರಾರು ಎಕರೆ ಯಾರಿಗೆ ಕೊಟ್ಟಿದ್ದಾರೆ ಎಂದು ಚರ್ಚೆ ಮಾಡಬೇಕು. ಸರ್ಕಾರ ಅಸ್ಥಿರಗೊಳಿಸಲು ಈ ರೀತಿ ಮಾಡುತ್ತಿದ್ದಾರೆ. ಸಿಎಂ ಅಭಿವೃದ್ಧಿ ಕೆಲಸ ಮಾಡುತ್ತಿದ್ದರೆ, ಅವರು (ಬಿಜೆಪಿ) ನಮ್ಮದು ಎಲ್ಲಾ ತೆಗಿಯಿರಿ ಎಂದು ಪ್ರೇರೇಪಿಸುತ್ತಿದ್ದಾರೆ. ಅಶ್ಲೀಲ ವೀಡಿಯೋ ಬಗ್ಗೆ ನನಗೆ ಗೊತ್ತಿಲ್ಲ. ಅದು, ಮಾಧ್ಯಮಗಳಲ್ಲಿ ನೋಡಿರುವುದು. ಯಾರು ಭಾಗಿಯಾಗಿದ್ದಾರೆ, ಯಾರ ಜೊತೆಗೆ ಇದ್ದರು, ಯಾರು ಸೂತ್ರಧಾರಿಗಳು ಎಂಬ ಮಾಹಿತಿ ನಿಮಗೆ ಹೆಚ್ಚಿದೆ. ಮಾಹಿತಿ ಇಲ್ಲದನ್ನ ಹೇಳುವುದು ಸೂಕ್ತವಲ್ಲ ಎಂದಿದ್ದಾರೆ.