ಬೆಂಗಳೂರು: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನಗರದ ಕೋರಮಂಗಲದಲ್ಲಿರುವ ಶ್ರೀಲಕ್ಷ್ಮೀ ವೆಂಕಟೇಶ್ವರ ದೇವಾಲಯದಲ್ಲಿ ಬೃಹತ್ ಹನುಮಾನ್ ಪ್ರತಿಮೆಗೆ ಸಿದ್ಧಪಡಿಸಲಾಗಿರುವ ಚಿನ್ನದ ಕವಚವನ್ನು ಅನಾವರಣಗೊಳಿಸಿದರು.
Advertisement
ಬಳಿಕ ದೇವಾಲಯದಲ್ಲಿರುವ ಶ್ರೀಲಕ್ಷ್ಮೀ ವೆಂಕಟೇಶ್ವರ ಸ್ವಾಮಿ, ಈಶ್ವರ ಪಾರ್ವತಿ, ಸರಸ್ವತಿ ದೇವಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ನಂತರ ಮಾತನಾಡಿದ ರಾಜ್ಯಪಾಲರು, ಈ ದೇವಾಲಯದಲ್ಲಿ ಎಲ್ಲಾ ದೇವರುಗಳ ದರ್ಶನ ಮಾಡುವ ಅವಕಾಶ ದೊರಕಿದ್ದು ನನ್ನ ಪುಣ್ಯವಾಗಿದೆ. ನಮ್ಮ ದೇಶ ಧರ್ಮ, ಸಂಸ್ಕೃತಿ ಹಾಗೂ ಆಧ್ಯಾತ್ಮದಲ್ಲಿ ವಿಶ್ವಾಸವನ್ನಿಟ್ಟಿದೆ. ದೇವಾಲಯದಲ್ಲಿ ದೇವರ ದರ್ಶನ ಪಡೆಯುವುದರಿಂದ ಸನ್ಮಾರ್ಗದಲ್ಲಿ ನಡೆಯುವ ಆಲೋಚನೆಗಳು ಮೂಡುತ್ತದೆ ಎಂದರು. ಮಾನವನ ಸೇವೆ ದೇವರ ಸೇವೆ ಇದ್ದಂತೆ. ಸನ್ಮಾರ್ಗದಲ್ಲಿ ನಡೆದು ಉತ್ತಮ ಸಮಾಜ ನಿರ್ಮಾಣ ಮಾಡಲು ನಾವೆಲ್ಲರೂ ಬದ್ಧರಾಗೋಣ ಎಂದು ಕರೆ ನೀಡಿದರು. ಇದನ್ನೂ ಓದಿ: ಪ್ರತಿಭಾವಂತ ಕ್ರಿಕೆಟ್ ಆಟಗಾರರಿಗೆ ಶೋಧ – ಕಪಿಲ್ ಕ್ರಿಕೆಟ್ ಕ್ಲಬ್‍ನಿಂದ ತರಬೇತಿ ಶಿಬಿರ
Advertisement
Advertisement
ಶಾಸಕರುಗಳಾದ ಎಸ್ ಆರ್ ವಿಶ್ವನಾಥ್, ರಾಮಲಿಂಗಾರೆಡ್ಡಿ, ಸತೀಶ್ ರೆಡ್ಡಿ, ಟ್ರಸ್ಟಿ ಜಯರಾಮ್ ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಇದನ್ನೂ ಓದಿ: ಮುಖ್ಯಮಂತ್ರಿ ಚಂದ್ರು AAP ಸೇರ್ಪಡೆಗೆ ಮುಹೂರ್ತ ಫಿಕ್ಸ್
Advertisement