ಚಿಕ್ಕಬಳ್ಳಾಪುರ: ಘಟಿಕೋತ್ಸವ ಸಮಾರಂಭವು ಗುರು ಶಿಷ್ಯರ ಶ್ರೇಷ್ಠ ಸಂಪ್ರದಾಯವನ್ನು ಪ್ರತಿಬಿಂಬಿಸುತ್ತದೆ. ದೇಶದ ಗೌರವಾನ್ವಿತ ರಾಷ್ಟ್ರಪತಿಗಳು ವಿದ್ಯಾರ್ಥಿಗಳಿಗೆ ಪದವಿಗಳನ್ನು ಪ್ರದಾನ ಮಾಡಿರುವುದರಿಂದ ಈ ಸಮಾರಂಭದ ಘನತೆ ಮತ್ತಷ್ಟು ಹೆಚ್ಚಿದೆ. ಈ ಘಟಿಕೋತ್ಸವದಲ್ಲಿ ಭಾಗವಹಿಸಿದ್ದಕ್ಕಾಗಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಹೇಳಿದ್ದಾರೆ.
ಅವರು ಮುದ್ದೇನಹಳ್ಳಿಯ ಶ್ರೀ ಸತ್ಯ ಸಾಯಿ ಯುನಿವರ್ಸಿಟಿ ಆಫ್ ಹ್ಯೂಮನ್ ಎಕ್ಸಲೆನ್ಸ್‌ನ (Sathya Sai University) 2ನೇ ಘಟಿಕೋತ್ಸವದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೊಂದಿ ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಅವರು, ಗುರುವೇ ಬ್ರಹ್ಮ, ಗುರುವೇ ವಿಷ್ಣು, ಗುರುವೇ ದೇವರು ಮತ್ತು ಗುರು ಮಹೇಶ್ವರನಾಗಿದ್ದಾನೆ. ಶಿಕ್ಷಕನು ನೇರವಾಗಿ ಪರಮ ಬ್ರಹ್ಮನಾಗಿದ್ದು, ಎಲ್ಲರಿಗೂ ಗುರು ಪೂರ್ಣಿಮೆಯ ಶುಭಾಶಯಗಳನ್ನ ಕೋರಿದರು. ಇದನ್ನೂ ಓದಿ: ಪಿಎಸ್‍ಐ ಹಗರಣ – ಎಡಿಜಿಪಿ ಅಮೃತ್ ಪೌಲ್‌ಗೆ ಮತ್ತೊಂದು ಸಂಕಷ್ಟ
ಕ್ಯಾಂಪಸ್, ವಿಶ್ವವಿದ್ಯಾನಿಲಯದ ಚಟುವಟಿಕೆಗಳನ್ನು ಹತ್ತಿರದಿಂದ ನೋಡುವ ಮತ್ತು ಅರ್ಥಮಾಡಿಕೊಳ್ಳುವ ಅವಕಾಶ ದೊರೆತಿದೆ. ಭಾರತದ ಈ ದಕ್ಷಿಣ ರಾಜ್ಯವಾದ ಕರ್ನಾಟಕದಲ್ಲಿ ಸುಂದರವಾದ ಪರಿಸರದಲ್ಲಿ ಸಾಂಸ್ಕøತಿಕ ಸೌಂದರ್ಯದೊಂದಿಗೆ ಶಿಕ್ಷಣದ ಈ ಹೊಸ ಸ್ಥಳವೂ ಎಲ್ಲರಿಗೂ ಸ್ಫೂರ್ತಿಯಾಗಿದೆ. ಉಚಿತ ಶಿಕ್ಷಣ, ಉಚಿತ ಪೋಷಣೆ ಮತ್ತು ಉಚಿತ ವೈದ್ಯಕೀಯ ಸೇವೆಯಂತಹ ಮಾನವ ಸೇವೆಯ ಅನೇಕ ವಿಶಿಷ್ಟ ಪ್ರಯೋಗಗಳು ಈ ಕ್ಯಾಂಪಸ್‍ನಲ್ಲಿ ನಡೆಯುತ್ತಿವೆ. ಈ ವಿಶ್ವವಿದ್ಯಾಲಯವು, ಶ್ರೀ ಸತ್ಯಸಾಯಿ ಬಾಬಾರವರ ಸ್ಪೂರ್ತಿದಾಯಕ ಸಂದೇಶವಾದ “ಎಲ್ಲರನ್ನು ಪ್ರೀತಿಸಿ” ಮತ್ತು “ಎವರ್-ಹರ್ಟ್ ನೆವರ್”, ಧ್ಯೇಯವಾಕ್ಯ “ಯೋಗ: ಕರ್ಮಸು ಕೌಶಲ” ಅಂದರೆ ಯೋಗ ಕ್ರಿಯೆಯಲ್ಲಿನ ಕೌಶಲ್ಯದ ಹೆಸರು. ಯೋಗದಿಂದ ದೈವತ್ವ ಕಾರ್ಯರೂಪಕ್ಕೆ ಬರುತ್ತದೆ. ಈ ಮೂಲಕ ದಕ್ಷತೆ ಬರುತ್ತದೆ ಎಂಬ ಚಿಂತನೆಯೊಂದಿಗೆ ಇಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದಿದ್ದಾರೆ.
ವಿಶ್ವವಿದ್ಯಾಲಯವು ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಕೆಲಸ ಮಾಡಿದ ಮಹಾನ್ ವ್ಯಕ್ತಿಗಳಿಗೆ ಗೌರವ ಪದವಿಯನ್ನು ನೀಡಿದೆ. ಈ ಮಹಾನ್ ವ್ಯಕ್ತಿಗಳನ್ನು ಅವರ ಅತ್ಯುತ್ತಮ ಸಾಧನೆಗಳಿಗಾಗಿ ಮತ್ತು ಮಾನವ ಸಮಾಜದ ಪ್ರಗತಿಗೆ ಮಹತ್ವದ ಕೊಡುಗೆಗಾಗಿ ಅಭಿನಂದಿಸುತ್ತೇನೆ. ಸಾಧಕರು ಸಾರ್ವಜನಿಕ ಹಿತಾಸಕ್ತಿ ಮತ್ತು ದೇಶದ ಹಿತಾಸಕ್ತಿಗಾಗಿ ಕೆಲಸ ಮಾಡುವುದನ್ನು ಮುಂದುವರೆಸಬೇಕು ಎಂದು ಆಶಿಸುತ್ತೇನೆ ಎಂದಿದ್ದಾರೆ.
ಅನೇಕ ವಿದ್ಯಾರ್ಥಿಗಳಿಗೆ ಪದವಿಯನ್ನು ನೀಡಲಾಗಿದೆ. ಆ ಎಲ್ಲಾ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳಿಗೆ ಅಭಿನಂದಿಸುತ್ತೇನೆ. ಇಲ್ಲಿ ಪಡೆದ ಶಿಕ್ಷಣವನ್ನು ದೇಶದ ಹಿತಾಸಕ್ತಿ, ಸಾರ್ವಜನಿಕ ಹಿತಾಸಕ್ತಿ ಮತ್ತು ಸಮಾಜ ಸೇವೆಗಾಗಿ ಬಳಸಬೇಕೆಂದು ಮನವಿ ಮಾಡಿದರು.
ನಮ್ಮ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಪ್ರದಾಯವು ಬಹಳ ಪುರಾತನವಾಗಿದೆ ಮತ್ತು ಅನಾದಿ ಕಾಲದಿಂದಲೂ ನಾವು “ಸರ್ವೇ ಭವಂತು ಸುಖಿನೋ, ಸರ್ವೇ ಸಂತು ನಿರಾಮಯ” ಎಂಬ ಮನೋಭಾವದಿಂದ ಪ್ರೇರಿತರಾಗಿದ್ದೇವೆ. “ವಸುಧೈವ ಕುಟುಂಬಕಂ” ತತ್ವಶಾಸ್ತ್ರ ಮತ್ತು ಧ್ಯಾನ, ಸಾರ್ವತ್ರಿಕ ಸಹೋದರತ್ವ ಮತ್ತು ವಿಶ್ವ ಶಾಂತಿ ಮತ್ತು ಸಮಾನತೆ ಮತ್ತು ಸಾಮರಸ್ಯವನ್ನು ಕಲಿಸುತ್ತದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಸಕಾರಾತ್ಮಕ ಪ್ರಯತ್ನಗಳನ್ನು ಮಾಡಬೇಕಾಗಿದೆ ಎಂದಿದ್ದಾರೆ.
ಭವ್ಯವಾದ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ಮುಂದಿನ 25 ವರ್ಷಗಳು ಅಮೃತ ಕಾಲ, ನಮ್ಮ ದೇಶವನ್ನು ವಿಶ್ವದ ಅತ್ಯುತ್ತಮ ದೇಶಗಳ ವರ್ಗಕ್ಕೆ ತರುವ ಕರ್ತವ್ಯದ ಅವಧಿಯಾಗಿದೆ. ಈ ಕರ್ತವ್ಯದ ಅವಧಿಯನ್ನು ಅವಕಾಶವನ್ನಾಗಿ ಪರಿವರ್ತಿಸುವಲ್ಲಿ ನಾವು ಪಾಲುದಾರರಾಗಿರಬೇಕು.
ವಿದ್ಯಾರ್ಥಿಗಳು ಸಾರ್ವಜನಿಕ ಜೀವನದಲ್ಲಿ ಸಕ್ರಿಯ ಪಾತ್ರವನ್ನು ನಿರ್ವಹಿಸುವುದನ್ನು ಮುಂದುವರೆಸ ಬೇಕು. ರಾಷ್ಟ್ರದ ಪ್ರಗತಿಗೆ ಕೊಡುಗೆ ನೀಡಲು ಇತರರನ್ನು ಪ್ರೇರೇಪಿಸಬೇಕು. ಏಕ್ ಭಾರತ್, ಶ್ರೇಷ್ಠ ಭಾರತ್ ಮತ್ತು ಆತ್ಮನಿರ್ಭರ್ ಭಾರತ್ ಮಾಡುವಲ್ಲಿ ಕೆಲಸ ಮಾಡುತ್ತೀರೆಂಬ ನಂಬಿಕೆ ಇದೆ ಎಂದು ಭರವಸೆ ವ್ಯಕ್ತ ಪಡಸಿದರು.
ಶ್ರೀ ಸತ್ಯಸಾಯಿ ಮಾನವ ಶ್ರೇಷ್ಠತೆಯ ವಿಶ್ವವಿದ್ಯಾನಿಲಯವು ಶಿಕ್ಷಣ, ಆರೋಗ್ಯ ಮತ್ತು ಪೌಷ್ಟಿಕಾಂಶ ಕ್ಷೇತ್ರದಲ್ಲಿ ಮಾಡುತ್ತಿರುವ ಕಾರ್ಯ ಉತ್ತಮ ಕೆಲಸ. ಅಲ್ಲದೇ ಆಧುನಿಕ ಶಿಕ್ಷಣ ಮತ್ತು ಆಧ್ಯಾತ್ಮಿಕ ಶಿಕ್ಷಣವನ್ನು ಸಂಯೋಜಿಸುತ್ತಿದ್ದಾರೆ ಎಂದು ಅವರು ಶ್ಲಾಘಿಸಿದರು.
ವಿಶ್ವವಿದ್ಯಾನಿಲಯದ ಸಂಸ್ಥಾಪಕರಾದ ಗೌರವಾನ್ವಿತ ಸದ್ಗುರು ಸ್ವಾಮಿ ಮಧುಸೂದನ್ ಸಾಯಿ, ಕುಲಪತಿ ಗೌರವಾನ್ವಿತ ಶ್ರೀ ಬಿ. ಎನ್. ನರಸಿಂಹ ಮೂರ್ತಿ, ಉಪಕುಲಪತಿ ಪ್ರೊ. ಶ್ರೀಕಾಂತ್ ಮೂರ್ತಿ, ಶ್ರೀ ಸತ್ಯಸಾಯಿ ಆರೋಗ್ಯ ಮತ್ತು ಶಿಕ್ಷಣ ಟ್ರಸ್ಟ್‌ನ ಅಧ್ಯಕ್ಷ ಡಾ. ಶ್ರೀನಿವಾಸ್ ಮುಂತಾದ ಗಣ್ಯರು ಉಪಸ್ಥಿತರಿದ್ದರು. ಇದನ್ನೂ ಓದಿ: ಬೆಂಗಳೂರಿಗೆ ಆಗಮಿಸಿದ ದ್ರೌಪದಿ ಮುರ್ಮು – ಸಿಎಂ, ರಾಜ್ಯಪಾಲರಿಂದ ಸ್ವಾಗತ
Web Stories