ಚೆನ್ನೈ: ತಮಿಳುನಾಡು (Tamilnadu), ಪಶ್ಚಿಮ ಬಂಗಾಳದಲ್ಲಿ ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಸಂಘರ್ಷ ತಾರಕಕ್ಕೆ ಏರಿದೆ. ತಮಿಳುನಾಡಿನಲ್ಲಿ ಇಂದಿನಿಂದ ಬಜೆಟ್ ಅಧಿವೇಶನ (Budget Session) ಆರಂಭ ಆಗಿದೆ.
ಮೊದಲ ದಿನವಾದ ಇಂದು ಗವರ್ನರ್ ಅಧಿವೇಶನ ಉದ್ದೇಶಿಸಿ ಮಾತನಾಡಬೇಕಿತ್ತು. ಆದರೆ ಭಾಷಣ ಮಾಡಲು ನಿರಾಕರಿಸಿದ್ದಾರೆ. ರಾಷ್ಟ್ರಗೀತೆಯನ್ನ ಸ್ಟಾಲಿನ್ ಸರ್ಕಾರ ಗೌರವಿಸಿಲ್ಲ ಎಂದು ಆರೋಪಿಸಿ ಕೆಲವೇ ನಿಮಿಷಗಳಲ್ಲಿ ಸದನದಿಂದ ನಿರ್ಗಮಿಸಿದ್ದಾರೆ. ರಾಜ್ಯಪಾಲರ ಭಾಷಣಕ್ಕೆ ಮೊದಲು ರಾಷ್ಟ್ರಗೀತೆ ಹಾಡಿ ಎಂದು ಪದೇ ಪದೇ ಮಾಡಿಕೊಂಡ ಮನವಿಯನ್ನು ನಿರ್ಲಕ್ಷಿಸಲಾಯ್ತು.
ಸರ್ಕಾರ ಬರೆದುಕೊಟ್ಟ ಭಾಷಣದಲ್ಲಿನ ತುಂಬಾ ವಿಷಯಗಳನ್ನು ನಾನು ನೈತಿಕ ಕಾರಣಗಳಿಂದ ಅಂಗೀಕರಿಸಿಲ್ಲ. ಅವುಗಳನ್ನು ವಿರೋಧಿಸಿದ್ದೇನೆ ಕೂಡ. ಭಾಷಣದಲ್ಲಿ ಇವನ್ನು ಪ್ರಸ್ತಾಪ ಮಾಡಿದ್ರೆ ಸಂವಿಧಾನದ ಅಣಕ ಮಾಡಿದಂತೆ. ಅದಕ್ಕೆ ಭಾಷಣ ಇಲ್ಲಿಗೆ ನಿಲ್ಲಿಸ್ತಿದ್ದೇನೆ ಎನ್ನುತ್ತಾ ಸದನದಿಂದ ರಾಜ್ಯಪಾಲ ರವಿ ನಿರ್ಗಮಿಸಿದ್ರು. ಇದನ್ನೂ ಓದಿ: ಇಡಿ, ಸಿಬಿಐ ಮೂಲಕ ನನ್ನ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ: ಡಿಕೆಶಿ
ಇತ್ತೀಚಿಗೆ ಕೇರಳ ಗವರ್ನರ್ ಆರೀಫ್ ಮಹ್ಮದ್ ಖಾನ್ ಕೂಡ ಹೀಗೆ ಮಾಡಿದ್ರು ಎನ್ನುವುದು ಗಮನಾರ್ಹ. ಮತ್ತೊಂದ್ಕಡೆ ಮಮತಾ ಸರ್ಕಾರದ ವಿರುದ್ಧ ಬಂಗಾಳ ರಾಜ್ಯಪಾಲ ಆನಂದ್ ಬೋಸ್ ಸಮರ ಸಾರಿದ್ದಾರೆ. ಸಂದೇಶ್‍ಖಲಿಯಲ್ಲಿ ಟಿಎಂಸಿ ನಾಯಕ ಶಾಜಹಾನ್ ಮತ್ತು ಬೆಂಬಲಿಗರು ನಡೆಸಿದ ಲೈಂಗಿಕ ದೌರ್ಜನ್ಯವನ್ನು ರಾಜ್ಯಪಾಲರು ತೀವ್ರವಾಗಿ ಖಂಡಿಸಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತರಲ್ಲಿ ಧೈರ್ಯ ತುಂಬಿದ ಅವರು, ಈ ಘಟನೆಯಿಂದ ನನಗೆ ಆಘಾತವಾಗಿದೆ ಎಂದಿದ್ದಾರೆ.