ನವದೆಹಲಿ: ಶೈಕ್ಷಣಿಕ ವಲಯವನ್ನು ಸ್ವಚ್ಛಗೊಳಿಸುವ ಸಲುವ ಕೇಂದ್ರ ಸರ್ಕಾರ ಈಗ ಮತ್ತೊಂದು ಹೆಜ್ಜೆ ಇಟ್ಟಿದ್ದು, ಇನ್ನು ಮುಂದೆ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ಕ್ಯಾಶ್‍ಲೆಸ್ ಆಗಲಿದೆ.
ಪ್ರಸಕ್ತ ಶೈಕ್ಷಣಿಕ ವರ್ಷದಿಂದ ದೇಶದ ಎಲ್ಲ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ನಗದು ರೂಪದಲ್ಲಿ ಶುಲ್ಕವನ್ನು ಪಡೆಯದಂತೆ ನಿರ್ದೇಶನ ನೀಡುವಂತೆ ಕೇಂದ್ರಿಯ ಧನಸಹಾಯ ಆಯೋಗ(ಯುಜಿಸಿ)ಗೆ ಮಾನವ ಸಂಪನ್ಮೂಲ ಸಚಿವಾಲಯ ಸೂಚಿಸಿದೆ.
Advertisement
ವಿದ್ಯಾರ್ಥಿಗಳ ಪ್ರವೇಶ ಶುಲ್ಕ, ಪರೀಕ್ಷಾ ಶುಲ್ಕ, ಮಾರಾಟಗಾರನ ಪಾವತಿಯ ವೇತನವನ್ನೂ ಡಿಜಿಟಲ್ ರೂಪದಲ್ಲಿ ಪಾವತಿಸಬೇಕು ಎಂದು ತಿಳಿಸಿದೆ.
Advertisement
ಹಾಸ್ಟೆಲ್ ನಲ್ಲಿ ಸಿಗುವ ಎಲ್ಲ ಸೇವೆಗಳಿಗೆ ಡಿಜಿಟಲ್ ಮೂಲಕ ಹಣವನ್ನು ಪಾವತಿಮಾಡಬೇಕು, ಇದಕ್ಕಾಗಿ ಭೀಮ್ ಅಪ್ಲಿಕೇಶನ್ ಬಳಸಬೇಕು. ಅಷ್ಟೇ ಅಲ್ಲದೇ ಕ್ಯಾಂಪಸ್ ಬಳಿ ಇರುವ ವ್ಯಾಪಾರಿ ಸಂಸ್ಥೆಗಳು ಡಿಜಿಟಲ್ ರೂಪದಲ್ಲಿ ವ್ಯವಹಾರ ನಡೆಸಬೇಕು ಎಂದು ಹೇಳಿದೆ.
Advertisement
ಈ ವಿಚಾರದ ಬಗ್ಗೆ ವಿವಿಗಳಿಗೆ ಇನ್ನು ಯಾವ ಕಡೆಗಳಲ್ಲಿ ಡಿಜಿಟಲ್ ವ್ಯವಹಾರ ನಡೆಸಬಹುದು ಎನ್ನುವುದರ ಬಗ್ಗೆ ಸಲಹೆ ನೀಡಿ ಎಂದು ಯುಜಿಸಿ ತಿಳಿಸಿದೆ. ಇದರ ಜೊತೆ ಇದು ಹೇಗೆ ಜಾರಿಯಾಗಿದೆ ಎನ್ನುವುದನ್ನು ಯುಜಿಸಿಗೆ ತಿಳಿಸಲು ಒಬ್ಬರು ನೋಡಲ್ ಅಧಿಕಾರಿಯನ್ನು ನೇಮಿಸುವಂತೆ ಸೂಚಿಸಿದೆ.
Advertisement
ಇದನ್ನೂ ಓದಿ: ಎಂಜಿನಿಯರಿಂಗ್ ಓದುತ್ತಿರುವ ಮತ್ತು ಮುಂದೆ ಓದಲಿರುವ ವಿದ್ಯಾರ್ಥಿಗಳಿಗೆ ಗುಡ್‍ನ್ಯೂಸ್