ಬೆಂಗಳೂರು: ಅ ಹುದ್ದೆಗೆ ಅಷ್ಟು ಕೊಡಬೇಕು, ಈ ಹುದ್ದೆಗೆ ಇಷ್ಟು ಕೊಡಬೇಕು. ಇಂಟರ್ ವ್ಯೂನಲ್ಲಿ ಅಂಕ ಕಡಿತ ಮಾಡುತ್ತಾರೆ ಎನ್ನುವ ಆತಂಕವನ್ನು ಇನ್ನುಂದೆ ಬಿಟ್ಟು ಬಿಡಿ. ಉನ್ನತ ಶಿಕ್ಷಣ ಇಲಾಖೆಯ ಇಂತಹ ಸಂದರ್ಶನ ಪದ್ದತಿಗೆ ತಿಲಾಂಜಲಿ ಇಡಲು ಮುಂದಾಗಿದೆ.
ಇನ್ನುಂದೆ ಇಲಾಖೆಯಲ್ಲಿ ನೇಮಕವಾಗೋ ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳಿಗೆ ನೋ ಇಂಟರ್ ವ್ಯೂ. ನೇರವಾಗಿ ಎಕ್ಸಾಂ ಬರೆದು ಅರ್ಹ ಅಂಕ ಪಡೆದ್ರೆ ಅ ಅಭ್ಯರ್ಥಿಗೆ ಹುದ್ದೆ ಫಿಕ್ಸ್ ಆಗಲಿದೆ.
Advertisement
ಉನ್ನತ ಶಿಕ್ಷಣ ಇಲಾಖೆಯಲ್ಲಿ ಇಂಟರ್ ವ್ಯೂ ಪದ್ದತಿ ಹೆಚ್ಚು ವಿವಾದಕ್ಕೆ ಕಾರಣವಾಗಿತ್ತು. ಪರೀಕ್ಷೆ ಬರೆದು ಹೆಚ್ಚು ಅಂಕ ಪಡೆದ್ರೂ ಸಂದರ್ಶನ ಸಮಯದಲ್ಲಿ ಅಂಕಗಳು ಕಡಿಮೆ ಆಗುತಿತ್ತು. ಇದು ಭ್ರಷ್ಟಾಚಾರಕ್ಕೆ ಕಾರಣವೂ ಆಗುತಿತ್ತು.
Advertisement
Advertisement
ನೂತನ ಸಚಿವರಾದ ಡಾ.ಅಶ್ವಥ್ ನಾರಾಯಣ ಇಲಾಖೆಯ ಅಧಿಕಾರವಹಿಸಿಕೊಂಡ ಮೇಲೆ ಮಹತ್ತರ ಬದಲಾವಣೆ ತಂದಿದ್ದಾರೆ. ಇನ್ನು ಮುಂದೆ ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗೆ ಇಂಟರ್ ವ್ಯೂ ಪದ್ದತಿ ಬೇಡ ಎಂಬ ನಿಯಮ ಜಾರಿಗೆ ತಂದಿದ್ದಾರೆ.
Advertisement
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಪರೀಕ್ಷೆಗಳು ನಡೆಯಲಿದ್ದು, ಹೆಚ್ಚು ಅಂಕ ಪಡೆದವರು ಕೆಲಸ ಪಡೆಯಬಹುದು. ಸಚಿವರ ಈ ಹೊಸ ಹೆಜ್ಜೆ ಉನ್ನತ ಶಿಕ್ಷಣ ಇಲಾಖೆಯನ್ನ ಭ್ರಷ್ಟಾಚಾರ ಮುಕ್ತ ಇಲಾಖೆ ಮಾಡುತ್ತಾ ಕಾದು ನೋಡಬೇಕಿದೆ.