ಗಾಂಧೀನಗರ: ಈ ಸರ್ಕಾರಕ್ಕೆ ಹಿಂಸಾಚಾರ ಬೇಕಾಗಿದೆ. ಅದಕ್ಕೆ ಗಲಭೆಗೆ ಸಹಕರಿಸಿದೆ ಎಂದು ರಾಮನವಮಿಯಂದು ನಡೆದ ಹಿಂಸಾಚಾರ ಖಂಡಿಸಿ ಗುಜರಾತ್ ಸರ್ಕಾರದ ವಿರುದ್ಧ ಎಐಎಂಐಎಂ ಮುಖ್ಯಸ್ಥ ಹಾಗೂ ಸಂಸದ ಅಸಾದುದ್ದೀನ್ ಓವೈಸಿ ಕಿಡಿಕಾರಿದ್ದಾರೆ.
ಎಷ್ಟು ದಿನ ಹಳೆಯ ಕಥೆಗಳನ್ನು ಹೊರತರುತ್ತೀರಿ? ನಿಮ್ಮ ವೈಫಲ್ಯವನ್ನು ಒಪ್ಪಿಕೊಳ್ಳಿ. ನೀವೇ ಜಟಿಲರು. ಭಜನೆ ಮಾಡಬೇಕು, ಆದರೆ ಯಾವ ರೀತಿಯ ಘೋಷಣೆಗಳು ಎದ್ದವು? 50-100 ಕತ್ತಿಗಳನ್ನು ಬೀಸಲಾಗಿದೆ. ಪೊಲೀಸರ ಸಮ್ಮುಖದಲ್ಲಿಯೇ ಇದನ್ನು ಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ವಾರಣಾಸಿಯ ಸೀರೆ ಮಳಿಗೆಯಲ್ಲಿ ಅಗ್ನಿ ದುರಂತ: ನಾಲ್ವರು ಸಜೀವ ದಹನ
ಗುಪ್ತಚರ ಇಲಾಖೆ (IB) ವರದಿಯಿದ್ದರೆ ನೀವು ಏಕೆ ಮಲಗಿದ್ದೀರಿ? ನೀವು ಅದನ್ನು ಬಹಿರಂಗಪಡಿಸಬೇಕು. ಹೆಚ್ಚಿನ ಪೋಲಿಸ್ ಪಡೆಯನ್ನು ನಿಯೋಜಿಸಿ, ಹಿಂಸಾಚಾರವನ್ನು ನಿಲ್ಲಿಸಬೇಕು. ನಿಮ್ಮ ಜಟಿಲ ವರ್ತನೆಯನ್ನು ಮರೆಮಾಡಲು ಕಥೆಗಳನ್ನು ಹೇಳುತ್ತೀರಿ. ಅಂತಹ ಕಥೆಗಳು ಈಗ ಹಳೆಯದಾಗಿವೆ ಎಂದು ಚಾಟಿ ಬೀಸಿದ್ದಾರೆ.
ಇದು ರಾಜ್ಯ ಸರ್ಕಾರದ ಜವಾಬ್ದಾರಿ ಮತ್ತು ಅವರು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲರಾಗಿದ್ದಾರೆ. ಬಂಧಿಸಿ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ವಿಮಾನಗಳ ಟೇಕ್ ಆಫ್ ವೇಗಕ್ಕೆ ಸಮನಾಗಿ 350 ಕಿಮೀ ವೇಗದಲ್ಲಿ ಬುಲೆಟ್ ರೈಲು ಪ್ರಾಯೋಗಿಕ ಪರೀಕ್ಷೆ
ಯಾವುದೇ ಹಿಂಸಾಚಾರವೂ ಸರಿಯಲ್ಲ. ಹಿಂಸಾಚಾರ ಭುಗಿಲೆದ್ದರೆ ಅದರ ಹೊಣೆ ರಾಜ್ಯ ಸರ್ಕಾರದ ಮೇಲಿದೆ. ರಾಜ್ಯ ಸರ್ಕಾರಗಳು ಬಯಸದಿದ್ದರೆ, ಹಿಂಸಾಚಾರ ಭುಗಿಲೇಳುವುದಿಲ್ಲ ಎಂದು ತನಿಖಾ ಆಯೋಗದ ವರದಿಗಳು ಹೇಳಿವೆ ಎಂದು ತಿಳಿಸಿದ್ದಾರೆ.