ಚಾಮರಾಜನಗರ: ಇಲ್ಲಿನ ಗುಂಡ್ಲುಪೇಟೆಯಲ್ಲಿ ಕಲ್ಲು ಗಣಿ ಕುಸಿತ ಪ್ರಕರಣದ ತನಿಖೆಗೆ ಸರ್ಕಾರ ನಿರ್ಲಕ್ಷ್ಯವಹಿಸ್ತಿದ್ಯಾ ಅನ್ನೋ ಅನುಮಾನ ಶುರುವಾಗಿದೆ.
ಗುಡ್ಡ ಕುಸಿದು ಮೂವರು ಕಾರ್ಮಿಕರು ಸಾವನ್ನಪ್ಪಿದ್ದರೂ ಕಾಟಾಚಾರದ ಎಫ್‍ಐಆರ್ ದಾಖಲಿಸಲಾಗಿದೆ. ಕಠಿಣ ಕಾನೂನು ಕ್ರಮಕ್ಕನುಗುಣವಾದ ಸೆಕ್ಷನ್‍ಗಳೇ ಎಫ್‍ಐಆರ್‍ನಲ್ಲಿಲ್ಲ. ಗಣಿ ಮತ್ತು ಭೂವಿಜ್ಞಾನ ಇಲಾಖೆ ನೀಡಿರುವ ದೂರಿನಲ್ಲೂ ಕ್ವಾರಿಗೆ ಸಂಬಂಧಿಸಿದವರ ಮೇಲೆ ಗಂಭೀರ ಆರೋಪಗಳಿಲ್ಲ. ಗುತ್ತಿಗೆದಾರರು ಯಾವುದೇ ಸುರಕ್ಷತಾ ಕ್ರಮಕೈಗೊಳ್ಳದೆ ಕಾರ್ಮಿಕರ ನಿಯೋಜಿಸಿದ್ದಾರೆ. ಗಣಿ ಕುಸಿತದಿಂದ ಕಾರ್ಮಿಕರು ಹಾಗೂ ವಾಹನಗಳಿಗೆ ಹಾನಿ ಉಂಟಾಗಲು ಕಾರಣರಾಗಿದ್ದಾರೆ ಎಂದು ಮಾತ್ರ ಆರೋಪಿಸಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ದೂರು ನೀಡಿದ್ರು. ಇದನ್ನೂ ಓದಿ: ಕ್ವಾರಿಯಲ್ಲಿ ಗುಡ್ಡ ಕುಸಿತ – 4 ಗಂಟೆಗೂ ಹೆಚ್ಚು ಕಾಲ ಬಂಡೆಯಡಿ ಸಿಲುಕಿ ಬದುಕುಳಿದಾತನಿಗೆ ಮುಂದುವರಿದ ಚಿಕಿತ್ಸೆ
ಈ ದೂರಿನ ಆಧಾರದ ಮೇಲೆ ಐಪಿಸಿ ಸೆಕ್ಷನ್ 308ರ ಅಡಿ ಎಫ್‍ಐಆರ್ ದಾಖಲಿಸಲಾಗಿದೆ. ದೂರಿನಲ್ಲಿ ಜೀವಹಾನಿ, ಪರಿಸರ, ಕಾರ್ಮಿಕ ಕಾಯ್ದೆಗಳ ಉಲ್ಲಂಘನೆ ಬಗ್ಗೆ ಉಲ್ಲೇಖವೇ ಆಗಿಲ್ಲ. ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಈ ಸಮಬಂಧ ಪ್ರಕರಣ ದಾಖಲಾಗಿದೆ. ದೂರಿನಲ್ಲಿ ಜೀವಹಾನಿ, ಪರಿಸರ ಕಾಯ್ದೆ ಉಲ್ಘಂಘನೆ, ಕಾರ್ಮಿಕ ಕಾಯ್ದೆ ಉಲ್ಲಂಘನೆ ಬಗ್ಗೆ ಉಲ್ಲೇಖವಿಲ್ಲ. ರಕ್ಷಣಾ ಕಾರ್ಯಾಚರಣೆಯಿಂದ ಸರ್ಕಾರಕ್ಕಾದ ನಷ್ಟ, ನೂರಾರು ಸರ್ಕಾರಿ ಸಿಬ್ಬಂದಿಯ ಶ್ರಮ ಸಮಯದ ಬಗ್ಗೆ ಚಕಾರವಿಲ್ಲ.